Kannada NewsLatest

ಮತ್ತೆ ಬೆಳಗಾವಿ ಜಿಲ್ಲೆ ವಿಭಜನೆ ಕೂಗು ; ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದೇನು?

ಬೆಳಗಾವಿ ಜಿಲ್ಲೆಯೂ, ಬೆಳಗಾವಿ ತಾಲೂಕೂ ವಿಭಜನೆಯಾಗಲೇಬೇಕು ; ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಅಭಿವೃದ್ಧಿ ದೃಷ್ಟಿಯಿಂದ ಬೆಳಗಾವಿ ಜಿಲ್ಲೆಯನ್ನು ಮೂರು ಭಾಗಗಳಾಗಿ ವಿಭಜಿಸಲು ನಮ್ಮ ಬೆಂಬಲವಿದೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಥಣಿ, ರಾಯಭಾಗ ಹಾಗೂ ಕುಡಚಿ  ಭಾಗಗಳ ಜನರು ಬಹಳ ದೂರದಿಂದ ತಮ್ಮ ಕೆಲಸ ಕಾರ್ಯಗಳಿಗಾಗಿ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಭಿವೃದ್ಧಿ ಉದ್ದೇಶಕ್ಕೆ ಜಿಲ್ಲಾ ವಿಭಜನೆಗೆ ನಮ್ಮ ಸಹಮತವಿದೆ. 3 ಜಿಲ್ಲೆಗಳಾಗಿ ವಿಂಗಡಣೆಯಾಗಬೇಕು ಎಂದು ಹೇಳಿದರು.

ಬೆಳಗಾವಿ ಜಿಲ್ಲೆ ವಿಭಜನೆ ಸಂಬಂಧ ಸಚಿವ ಉಮೇಶ ಕತ್ತಿ ನೇತೃತ್ವದ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿಯಾಗಲು ನಿರ್ಧರಿಸಿದೆ. ಅದಕ್ಕೆ ನಿಮ್ಮ ಬೆಂಬಲವಿದೆಯೇ ಎನ್ನುವ ಪ್ರಶ್ನೆಗೆ, ಖಂಡಿತ ಬೆಂಬಲವಿದೆ ಎಂದರು.

ಬೆಳಗಾವಿ ತಾಲೂಕು ಕೂಡ ಬಹಳ ದೊಡ್ಡದಿದೆ. ರಾಮನಗರ ಜಿಲ್ಲೆಯಷ್ಟು ಬೆಳಗಾವಿ ತಾಲೂಕಿದೆ. ಬೆಳಗಾವಿ ಗ್ರಾಮೀಣ ತಾಲೂಕಾಗಬೇಕು. ಅಲ್ಲಿಗೆ ಎಲ್ಲ ಕಚೇರಿಗಳು ಬರಬೇಕು. ಈಗಾಗಲೇ ನಾನು ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೂ ಈ ನಿಟ್ಟಿನಲ್ಲಿ ಮನವಿ ಮಾಡಿದ್ದೇನೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತಕ್ಷಣ ಬೆಳಗಾವಿ ತಾಲೂಕು ವಿಭಜನೆ ಮಾಡಲಾಗುವುದು. ಬೆಳಗಾವಿ ಗ್ರಾಮೀಣ ಭಾಗವನ್ನೇ ತಾಲೂಕನ್ನಾಗಿ ಮಾಡಿ ಪ್ರತಿಯೊಂದು ಇಲಾಖೆಯನ್ನು ಆರಂಭಿಸುತ್ತೇವೆ ಎಂದು ತಿಳಿಸಿದರು.

ಬೆಳಗಾವಿಯಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Check Also
Close
Back to top button