Kannada NewsLatest

ತಿಗಡೊಳ್ಳಿ ಕೆರೆಗೆ ಬಾಗಿನ ಅರ್ಪಣೆ

ತಿಗಡೊಳ್ಳಿ ಕೆರೆಗೆ ಬಾಗಿನ ಅರ್ಪಣೆ.

ಚನ್ನಮ್ಮನ ಕಿತ್ತೂರು : ತಾಲೂಕಿನ ತಿಗಡೊಳ್ಳಿ ಗ್ರಾಮದಲ್ಲಿ ದಶಕಳಿಂದ ತುಂಬಲಾರದ ಕೆರೆ ಈಗ ನಿರಂತರ ಸುರಿಯುತ್ತಿರುವ ಮಳೆಗೆ ಮೈತುಂಬಿ ಹರಿಯುತ್ತಿದೆ. ಗ್ರಾಮದವ್ವ ಕೆರೆಗೆ ಇಲ್ಲಿಯ ಪೂಜೇರ ಓಣಿಯ ನಿವಾಸಿಗಳಿಂದ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿಲಾಯಿತು.
ಬಳಿಕ ಚನ್ನಬಸಪ್ಪ ಮಲಶೆಟ್ಟಿ ಮಾತನಾಡಿ, ಗಂಗಾ ಮಾತೆಗೆ ಬಾಗಿನ ಅರ್ಪಿಸುವುದು ಪುರಾತನ ಸಂಪ್ರದಾಯವಾಗಿದೆ. ಅದರಂತೆ ನಾವು ನಮ್ಮ ಗ್ರಾಮದ ಕೆರೆ ಬಾಗಿನ ಅರ್ಪಣೆ ಮಾಡಿದ್ದೇವೆ ಎಂದರು. ಈ ಸಂದರ್ಭದಲ್ಲಿ ಕಲ್ಯಾಣೆಪ್ಪ ಬಣಜಗಿ, ಬಸವರಾಜ ಮಲಶೆಟ್ಟಿ, ಶಂಕರ ಮುತ್ನಾಳ, ಜಗದೀಶ ಮಲಶೆಟ್ಟಿ, ಶಿವಮೂರ್ತಿ ಪಲಕ್ಷೇವಿ, ಮಲೆಶಪ್ಪ ಮಲಶೆಟ್ಟಿ, ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.////

Related Articles

Back to top button