*ಬೆಳಗಾವಿ: ಎಲ್ಲಡೆ ಸಂಭ್ರಮದಿಂದ ಬಕ್ರೀದ ಹಬ್ಬ ಆಚರಣೆ*
ಪ್ರಗತಿವಾಹಿನಿ ಸುದ್ದಿ: ಎಲ್ಲಡೆ ಬಕ್ರೀದ ಹಬ್ಬದ ಸಂಭ್ರಮ ಮನೆ ಮಾಡಿದೆ. ಬೆಳಗಾವಿ ಜಿಲ್ಲೆಯಾದ್ಯಂತ ಮುಸ್ಲಿಂರು ಶ್ರದ್ಧಾ ಭಕ್ತಿಯಿಂದ ಪರಸ್ಪರ ಶುಭ ಕೋರಿ ಹಬ್ಬ ಆಚರಣೆ ಮಾಡಿದ್ದಾರೆ.
ಬಕ್ರೀದ ಹಬ್ಬದ ಹಿನ್ನೆಲೆಯಲ್ಲಿ ಹೊಸ ಬಟ್ಟೆಗಳನ್ನು ಧರಿಸಿ ಮುಸ್ಲಿಮರು, ಅಂಜುಮ್ ಆವರಣದ ಬಳಿಯ ಈದ್ಗಾ ಮೈದಾನ, ಕೋಟೆ ಆವರಣದಲ್ಲಿನ ಹಳೆಯ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಇದಲ್ಲದೆ, ಆಯಾ ತಾಲ್ಲೂಕು, ಹೋಬಳಿ ಹಾಗೂ ಗ್ರಾಮಗಳಲ್ಲಿನ ಈದ್ಗಾ ಮೈದಾನಗಳು ಮತ್ತು ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ನಂತರ ಪರಸ್ಪರರು ಶುಭಾಶಯ ವಿನಿಮಯ ಮಾಡಿಕೊಂಡರು. ಹಬ್ಬದ ಪ್ರಯುಕ್ತ ಪ್ರಾಣಿಬಲಿ ನೀಡಲು ಮುಸ್ಲಿಂರು ಸಿದ್ಧತೆ ಮಾಡಿಕೊಂಡಿದ್ದರು. ನಮಾಜ್ ಮುಗಿದ ನಂತರ ಸಂಪ್ರದಾಯದಂತೆ ಕುರ್ಬಾನಿ ನೀಡಿದರು.
ಬಕ್ರೀದ ಹಬ್ಬ ಹಿನ್ನಲೆ ಎಲ್ಲಡೆ ಕಟ್ಟೆಚ್ಚರ ವಹಿಸಿರುವ ಪೊಲೀಸರು, ಯಾವುದೇ ಅಹಿತಕರ ಘಟನೆ ಆಗದಂತೆ ಕ್ರಮ ಕೈಗೊಂಡಿದ್ದಾರೆ. ಮುಂಜಾಗೃತ ಕ್ರಮ ಕೈಗೊಂಡಿರುವ ಪೊಲೀಸ್ ಇಲಾಖೆ ಮದ್ಯ ಮಾರಾಟ ನಿಷೇಧಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ