Belagavi NewsBelgaum NewsKannada NewsKarnataka NewsLatest
*ಎಲ್ ಆಂಡ್ ಟಿ ಕಂಪನಿಗೆ ಬರೋಬ್ಬರಿ 21 ಕೋಟಿಗೂ ಅಧಿಕ ದಂಡ ವಿಧಿಸಿದ ಬೆಳಗಾವಿ ಮಹಾನಗರ ಪಾಲಿಕೆ*
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕಳಪೆ ಗುಣಮಟ್ಟದ ಕಾಮಗಾರಿ ಮಾಡದ ಹಿನ್ನೆಲೆಯಲ್ಲಿ ಎಲ್ ಆಂಡ್ ಟಿ ಕಂಪನಿಗೆ ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಅಶೋಕ್ ದುಡಗುಂಟಿ ಬರೋಬ್ಬರಿ 21 ಕೋಟಿ 46 ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ.
ಬೆಳಗಾವಿಗೆ ನಿರಂತರ ಕುಡಿಯುವ ನೀರು ಸೇರಿದಂತೆ ಇತರ ಕಾಮಗಾರಿ ಪೂರೈಕೆ ಜವಾಬ್ದಾರಿ ಹೊತ್ತ ಎಲ್ ಆಂಡ್ ಟಿ ಕಂಪನಿ 2021-2025ರವರೆಗೆ ಟೆಂಡರ್ ಪಡೆದಿತ್ತು. ಆದರೆ ಪ್ರಸ್ತುತ ಮೂರು ಅವಧಿ ಪೂರ್ಣಗೊಂಡರೂ ಕೇವಲ ಶೇ.60ರಷ್ಟು ಕಾಮಗಾರಿ ಮಾಡಿದೆ. ನಿಗದಿತ ಸಮಯದಲ್ಲಿ ಗುರಿಸಾಧನೆ ಮಾಡದ ಹಾಗೂ ಕಳಪೆ ಗುಣಮಟ್ಟದ ಕಾಮಗಾರಿ ನಡೆಸಿರುವ ಬಗ್ಗೆಯೂ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಕಂಪನಿ ವಿರುದ್ಧ ಮಹಾನಗರ ಪಾಲಿಗೆ ಭಾರಿ ದಂಡ ವಿಧಿಸಿದೆ.
ಅಲ್ಲದೇ ಕಂಪನಿಗೆ ಕಾರಣ ಸಮೇತ ಉಲ್ಲೇಖಿಸಿ ಪತ್ರವನ್ನು ಕಳೆದ 12ರಂದು ರವಾನಿಸಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಅಶೋಕ್ ದುಡಗುಂಟಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ