ಗೋಕಾಕ ನೆರೆ ಸಂತ್ರಸ್ತರ ಪರವಾಗಿ ಮುಖ್ಯಮಂತ್ರಿಗೆ ಮನವಿ

Appeal to Chief Minister on behalf of Gokhaka flood victims

ಗೋಕಾಕ ನೆರೆ ಸಂತ್ರಸ್ತರ ಪರವಾಗಿ ಮುಖ್ಯಮಂತ್ರಿಗೆ ಮನವಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –

ಗೋಕಾಕ ನೆರೆ ಸಂತ್ರಸ್ತರ ಪರವಾಗಿ ಗೋಕಾಕ ನಾಗರಿಕರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು. ಬೆಳಗಾವಿಗೆ ಇಂದು ಆಗಮಿಸಿದ್ದ ಮುಖ್ಯಮಂತ್ರಿಗಳಿಗೆ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮನವಿ ಸಲ್ಲಿಸಲಾಯಿತು.

ಗೋಕಾಕ ಗ್ರಾಮ ಹದ್ದಿಯಲ್ಲಿರುವ ಸರಕಾರಿ ಖುಲ್ಲಾ ಜಾಗೆ ರೀ.ಸ.ನಂ. 244/ಎ ಕ್ಷೇತ್ರ 312 ಎಕರೆ ಪ್ರದೇಶದಲ್ಲಿ ಗೋಕಾಕ ನಗರದ ನೆರೆ ಸಂತ್ರಸ್ಥರಿಗೆ ಹಾಗೂ ನಿವೇಶನ ರಹಿತ ಬಡ ಕುಟುಂಬಗಳಿಗೆ  ಶಾಶ್ವತ ವಸತಿ ಕಲ್ಪಿಸಲಬೇಕು ಎಂದು ಅವರು ಮನವಿ ನೀಡಿದರು.
 ಬಿ.ಜೆ.ಪಿ. ಮುಖಂಡರಾದ ಅಶೋಕ ಪೂಜಾರಿ ಅವರ ನೇತೃತ್ವದಲ್ಲಿ ಮನವಿ ಸಲ್ಲಿಸುವ ಸಂದರ್ಭದಲ್ಲಿ  ಮುಖಂಡರುಗಳಾದ ಪ್ರೋ.ಎ.ವಾಯ್.ಪಂಗಣ್ಣವರ, ದಸ್ತಗೀರ ಪೈಲವಾನ, ರವಿ ಪತ್ರಾವಳಿ, ಶಾಮಾನಂದ ಪೂಜಾರಿ, ನಿಂಗಪ್ಪ ನಾಯಕ, ನಿಖಿಲ್ ಅಶೋಕ ಓಸ್ವಾಲ್, ದೀಪಕ ರಾಯಣ್ಣವರ ಮುಂತಾದ ಮುಖಂಡರು  ಉಪಸ್ಥಿತರಿದ್ದರು.