GIT add 2024-1
Laxmi Tai add
Beereshwara 33

ವಿದೇಶಿ ವಿದ್ಯಾರ್ಥಿಗಳ ಜೊತೆ ಸಂಗೀತ  ಸಂವಾದ     

ಕೆ ಎಲ್ ಇ ಸಂಗೀತ ವಿಭಾಗದಲ್ಲಿ ಆಯೋಜನೆ - Music interaction with foreign students

Anvekar 3
Cancer Hospital 2

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –  ಕೆ ಎಲ್ ಇ ಸಂಗೀತ ವಿಭಾಗದಲ್ಲಿ ವಿದೇಶಿ ವಿದ್ಯಾರ್ಥಿಗಳ ಜೊತೆ ಸಂಗೀತ ಸಂವಾದ ಜರುಗಿತು. ಕೆಎಲ್ಇ ಇಂಟರ್ನ್ಯಾಷನಲ್ ಸ್ಕೂಲ್ ವತಿಯಿಂದ ಜರ್ಮನ್ ದೇಶದ  ಶಾಲೆಯ ವಿದ್ಯಾರ್ಥಿಗಳು 15 ದಿನಗಳ ಕಾಲ ಭಾರತಕ್ಕೆ ಸಾಂಸ್ಕೃತಿಕ ವಿನಿಮಯ  ಕಾರ್ಯಕ್ರಮದ ನಿಮಿತ್ತ ಭಾರತಕ್ಕೆ ಬಂದಿದ್ದರು. ಈ ವಿದ್ಯಾರ್ಥಿಗಳು ಬೆಳಗಾವಿಯಲ್ಲಿ ತಂಗಿದ್ದು, ಇವರು ಬೆಳಗಾವಿಯ ಅನೇಕ ಕಡೆ ಭೇಟಿ ನೀಡಿದ್ದು ದಿನಾಂಕ್ 25 ರಂದು ಕೆಎಲ್ಇ ಸಂಗೀತ ವಿಭಾಗಕ್ಕೆ ಭೇಟಿ ನೀಡಿದರು.

ಪ್ರಾರಂಭದಲ್ಲಿ ಸಂಗೀತ ವಿಭಾಗದ ಪ್ರಾಚಾರ್ಯರು ಸಂಗೀತದಲ್ಲಿ ಇರತಕ್ಕಂತಹ ಸಪ್ತಸ್ವರಗಳ ವಿವರಣೆ ಹಾಗೂ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ  ರಾಗ ಭೂಪ ಇದನ್ನು ವಿದೇಶಿ- ಮಕ್ಕಳಿಗೆ ಕಲಿಸಿದರು. ನಂತರ ಕೆಎಲ್ಇ ಸಂಗೀತ ಭಾಗದ ಮಕ್ಕಳು ಭಾರತೀಯ ಸಂಗೀತ ಪ್ರಕಾರಗಳಾದ ಭಕ್ತಿಗೀತೆ, ಭಾವಗೀತೆ, ದೇಶಭಕ್ತಿಗೀತೆ  ಸಿನಿಮಾ ಸಂಗೀತ, ಹಾಗೂ  ನಾಟ್ಯ ಗೀತೆಗಳನ್ನು ಪ್ರಸ್ತುತಪಡಿಸಿದರು.

Emergency Service

ಈ ಕಾರ್ಯಕ್ರಮಕ್ಕೆ ತಬಲಾ ಸಾಥ್ ಜಿತೇಂದ್ರ ಸಾಬಣ್ಣವರ ಹಾಗೂ ಹಾರ್ಮೋನಿಯಂ ಪಾಯಿ ಪೇಟಿ ಸಾಥ್  ಯಾದವೇಂದ್ರ  ಪೂಜಾರಿ ಮಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು, ಸಂಗೀತ ವಿಭಾಗದ ಪ್ರಾಧ್ಯಾಪಕರಾದ  ಸುನೀತಾ ಪಾಟೀಲ, ಡಾಕ್ಟರ್ ದುರ್ಗಾ ಕಾಮತ್ ನಾಡಕರ್ಣಿ, ಸೀಮಾ ಕುಲಕರ್ಣಿ ಮಾಡಿದರು.

ಈ ಕಾರ್ಯಕ್ರಮದಲ್ಲಿ ಸಂಗೀತ ವಿಭಾಗದ ಸಂಯೋಜಕರಾದ ಡಾಕ್ಟರ್ ರಾಜೇಂದ್ರ ಬಾಂದನಕರ್, ಹಾಗೂ ಪ್ರಾಚಾರ್ಯ ಡಾಕ್ಟರ್ ಸ್ನೇಹಾ ರಾಜೂರಿಕರ್ ಹಾಗೂ ಕೆಎಲ್ಇ ಇಂಟರ್ನ್ಯಾಷನಲ್ ಸ್ಕೂಲ್ ಶಿಕ್ಷಕರಾದ  ಸ್ವಾತಿ ಅಕ ಲೇಕರ್  ಭಾರತಿ ನಾಗಪುರ, ರುಬಿಕ್ ಶಾಲೆಯ ಶಿಕ್ಷಕರು ಸಂಗೀತ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Bottom Add3
Bottom Ad 2