ಶಿಥಿಲಗೊಂಡಿದ್ದ ಹಳೆಯ ಕಟ್ಟಡ ತೆರವು -Pragativahini Impact

ಶಿಥಿಲಗೊಂಡಿದ್ದ ಹಳೆಯ ಕಟ್ಟಡ ತೆರವು

ಪ್ರಗತಿವಾಹಿನಿ ಸುದ್ದಿ, ಚನ್ನಮ್ಮನ ಕಿತ್ತೂರು-
ಸ್ಥಳೀಯ ತಹಸಿಲ್ದಾರ ಕಚೇರಿಯ ಮುಂಭಾದಲ್ಲಿರುವ ಶಿಥಿಲಗೊಂಡಿರುವ ಹಳೆಯ ಸರಕಾರಿ ಆಸ್ಪತ್ರೆಯ ಕಟ್ಟಡವನ್ನು ತೆರೆಯುವುಗೊಳಿಸಲಾಗುತ್ತಿದೆ.
ಇದೇ ಆ.5 ರಂದು ಪ್ರಗತಿವಾಹಿನಿಯಲ್ಲಿ ಈ ಕಟ್ಟಡದ ಕುರಿತು ವರದಿ ಪ್ರಕಟಿಸಲಾಗಿತ್ತು. ಅದರಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು ತೆರವುಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಸ್ಥಳೀಯ ತಹಸಿಲ್ದಾರ ಪ್ರವೀಣ ಜೈನ್ ಕಾರ್ಯಾಚರಣೆಗೆ ಸೂಚನೆ ನೀಡಿದ್ದಾರೆ.