
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಜಿಲ್ಲೆಯಲ್ಲಿ ಮತ್ತೆ ಮೂವರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಸಂಖ್ಯೆ 17ಕ್ಕೇರಿದೆ.
ರಾಯಬಾಗದ ಮೂವರಿಗೆ ಸೊಂಕು ಇಂದು ದೃಢಪಟ್ಟಿದೆ. 14 ವರ್ಷ, 20 ವರ್ಷ ಮತ್ತು 45 ವರ್ಷದ ಗಂಡಸರಿಗೆ ಸೋಂಕು ಪತ್ತೆಯಾಗಿದ್ದು ಇವರೆಲ್ಲರೂ 149ನೇ ನಂಬರ್ ರೋಗಿಯೊಂದಿಗೆ ಸಂಪರ್ಕ ಹೊಂದಿದ್ದರು. ಲ್ಲರಿಗೂ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ರಾಜ್ಯದಲ್ಲಿ ಇಂದು ಹೊಸದಾಗಿ 15 ಪ್ರಕರಣ ದಾಖಲಾಗಿದ್ದು, ಹುಬ್ಬಳ್ಳಿ -ಧಾರವಾಡದಲ್ಲೇ ನಾಲ್ವರಿಗೆ ಸೋಂಕು ದೃಢಪಟ್ಟಿದೆ. ಮಂಡ್ಯದಲ್ಲಿ ಮೂವರಿಗೆ, ಬಾಗಲಕೋಟೆಯಲ್ಲಿ ಒಬ್ಬರಿಗೆ, ದೊಡ್ಡ ಬಳ್ಳಾಪುರ ಹಾಗೂ ಬೆಂಗಲೂರಿನಲ್ಲಿ ತಲಾ ಒಬ್ಬರಿಗೆ ಸೋಂಕು ಪತ್ತೆಯಾಗಿದೆ. ಇದರಿಂದಾಗ ಿರಾಜ್ಯದಲ್ಲಿ 247 ಜನರಿಗೆ ಸೋಂಕು ಪತ್ತೆಯಾದಂತಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ