Kannada NewsKarnataka News

ಬೆಳಗಾವಿ: ಮತ್ತೊಮ್ಮೆ ಪ್ರಜಾಧ್ವನಿ ಕಾರ್ಯಕ್ರಮ ಮುಂದಕ್ಕೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಜಿಲ್ಲೆಯ ವಿವಿಧೆಡೆ ಹಮ್ಮಿಕೊಳ್ಳಲಾಗಿದ್ದ ಕಾಂಗ್ರೆಸ್ ಪ್ರಜಾಧ್ವನಿ ಕಾರ್ಯಕ್ರಮ ಮತ್ತೊಮ್ಮೆ ಮುಂದೂಡಲ್ಪಟ್ಟಿದೆ.

ಇದೇ 20ರಂದು ರಾಹುಲ್ ಗಾಂಧಿ ಬೆಳಗಾವಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಜಾಧ್ವನಿ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ ತಿಳಿಸಿದ್ದಾರೆ.

Home add -Advt

ಸಿದ್ದರಾಮಯ್ಯ ನೇತೃತ್ವದಲ್ಲಿ ಇದೇ 17ರಿಂದ ಗೋಕಾಕ, ಹಾರೂಗೇರಿ, ಅಥಣಿ, ಕಾಗವಾಡ (ಮದಬಾವಿ), ಕಂಕನವಾಡಿ, ಕಾಕತಿ ಮೊದಲಾದ ಕಡೆಗಳಲ್ಲಿ ಪ್ರಜಾ ಧ್ವನಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ ರಾಹುಲ ಗಾಂಧಿ ಭೇಟಿ ನಿಗದಿಯಾಗಿದ್ದರಿಂದ ಎಲ್ಲವನ್ನೂ ಮುಂದೂಡಲಾಗಿದೆ.

ಈ ಹಿಂದೆ ಸಹ ಬೆಳಗಾವಿ ಜಿಲ್ಲೆಯ ಗೋಕಾಕ, ಅರಬಾವಿ ಸೇರಿದಂತೆ ಈ ಎಲ್ಲ ಪ್ರದೇಶಗಳಲ್ಲಿ ಪ್ರಜಾಧ್ವನಿ ಸಮಾವೇಶ ನಿಗದಿಯಾಗಿ ರದ್ದಾಗಿತ್ತು.

https://pragati.taskdun.com/cm-basavaraj-bommaimeetcongress-mla-kusuma-shivalli/
https://pragati.taskdun.com/prajadhwani-conference-at-gokak-on-march-17-kpcc-working-president-satish-jarakiholi/

Related Articles

Back to top button