*ಬೈಕ್ ಕಳ್ಳನನ್ನು ಬಂಧಿಸಿದ ಬೆಳಗಾವಿ ಪೊಲೀಸರು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾದ ಬೈಕ್ ಕಳ್ಳತನ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ ಹಲವಾರು ಬೈಕ್ ಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರು ಆರೋಪಿ ಮಲಿಕಜಾನ @ ಬಾಬ್ಯಾ ಫಾರುಕ ಬುಡಣ್ಣವರ (20) ಎಂಬಾತನನ್ನು ಪೀರನವಾಡಿ ನಾಕಾ ಹತ್ತಿರ ಹಿಡಿದು ವಿಚಾರಿಸದಾಗ ಹಲವಾರು ಬೈಕ್ ಗಳನ್ನಯ ಕಳ್ಳತನ ಮಾಡಿರುವ ಬಗ್ಗೆ ಬೆಳಕಿಗೆ ಬಂದಿದೆ.
ಆರೋಪಿಯ ಬಳಿ ಅಂದಾಜು 4,90,000/-ರೂ. ಮೊತ್ತದ ಒಟ್ಟು 7 ಕಳ್ಳತನ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ನಗರದ ಟಿಳಕವಾಡಿ, ಎಪಿಎಂಸಿ ಮತ್ತು ಮಾರಿಹಾಳ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಪ್ರಕರಣಗಳಲ್ಲಿಯ ತಲಾ ಒಂದೊಂದು ಮೋಟಾರ ಸೈಕಲ್ ಒಳಗೊಂಡಿದೆ.
ಸಧ್ಯ ಆರೋಪಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪ್ರಕರಣದಲ್ಲಿ ತನಿಖೆ ಕಾರ್ಯ ಮುಂದೆವರೆದಿರುತ್ತದೆ. ಬೈಕ್ ಗಳ ಕಳ್ಳತನ ಪ್ರಕರಣದಲ್ಲಿ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯ ಸಿಪಿಐ ನಾಗನಗೌಡ ಕಟ್ಟಿಮನಿಗೌಡ್ರ ಪಿಎಸ್ಐ ಲಕ್ಕಪ್ಪ ಜೋಡಟ್ಟಿ ಸಂತೋಷ ದಳವಾಯಿ ಹಾಗೂ ಸಿಬ್ಬಂದಿಗಳಾದ ಸತೀಶ ನಾಯಕವಾಡ ಎಸ್. ಬಿ. ಉಪ್ಪಾರ, ಎಮ್. ಬಿ. ಕೋಟಬಾಗಿ, ಎಸ್.ಎಸ್.ಹಂಚಿನಮನಿ, ಬಿ. ಎಸ್. ಪಡನಾಡ ಆನಂದ ಕೊಟಗಿ, ಶಿವಾನಂದ ವರ್ಚಗಲ ಕಾರ್ಯಕ್ಕೆ ಪೊಲೀಸ್ ಆಯುಕ್ತರು ಮೆಚ್ಚುಗೆ ವ್ಯಕ್ತಪಡಿಸಿರುತ್ತಾರೆ.



