ಬೆಳಗಾವಿ ಪೊಲೀಸರ ಭರ್ಜರಿ ಭೇಟೆ: ಮೂವರು ಮನೆಗಳ್ಳರ ಬಂಧನ; 19.47 ಲಕ್ಷ ರೂ. ಮೌಲ್ಯದ ವಸ್ತುಗಳ ವಶ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಎಪಿಎಮ್‌ಸಿ ಪೊಲೀಸರು ಮೂವರು ಮನೆಗಳ್ಳರನ್ನು ಬಂಧಿಸಿ, ಒಟ್ಟು ರೂ.೧೯,೪೭,೬೨೫/- ಮೌಲ್ಯದ ಬಂಗಾರ, ಬೆಳ್ಳಿಯ ಆಭರಣ, ಕಾರ್ & ಮೋಟರ ಸೈಕಲ್ ಗಳನ್ನು ಜಪ್ತು ಮಾಡಿದ್ದಾರೆ.
ದಿನಾಂಕ: ೨೩-೦೫-೨೦೨೨ ರಂದು ಎ.ಪಿ.ಎಮ್.ಸಿ ಪೊಲೀಸ್ ಠಾಣಾ ವ್ಯಾಪ್ತಿಯ ಟಿ.ವಿ ಸೆಂಟರ್ ನಲ್ಲಿ ಬಾಲಾಜಿ ಶಿವಲಿಂಗಪ್ಪ ಸಾವಳಗಿ ಅವರ ಮನೆಯಲ್ಲಿ ಬಂಗಾರದ ಆಭರಣ ಹಾಗೂ ನಗದು ಹಣ ಕಳುವಾದ ಬಗ್ಗೆ ನೀಡಿದ ದೂರಿನಂತೆ ಎಪಿಎಮ್‌ಸಿ ಠಾಣೆ ಯಲ್ಲಿ ಪ್ರಕರಣ ದಾಖಲಾಗಿತ್ತು.
ಇನಸ್ಪೆಕ್ಟರ್ ಮಂಜುನಾಥ ಜಿ ಹಿರೇಮಠ ಹಾಗೂ ಎಪಿಎಂಸಿ ಠಾಣೆಯ ಪಿಎಸ್‌ಐ ಮತ್ತು ಸಿಬ್ಬಂದಿಯವರ ತಂಡ ಆರೋಪಿತರಿಗಾಗಿ ಬಲೆ ಬೀಸಿ, ದಿನಾಂಕ: ೨೭-೦೫-೨೦೨೨ ರಂದು ಸಂಶಯುಕ್ತ ಜನರನ್ನು ಕರೆತಂದು ವಿಚಾರಣೆಗೆ ಒಳಪಡಿಸಿದಾಗ ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದಾರೆ.
೧) ಖಾಜಾ ಅಸ್ಲಮ್ @ ರಫೀಕ ಸಯ್ಯದ @ ಶೇಖ, (೩೨) ಸಾ: ವೈಭವ ನಗರ ಬೆಳಗಾವಿ.
೨) ಇರ್ಫಾನ ಖತಾಲ ಶೇಖ, (೩೨) ಸಾ: ವೈಭವ ನಗರ ಬೆಳಗಾವಿ.
೩) ತಂಜೀಮ ಇಸ್ಮಾಯಿಲ್ ಖಾನಾಪುರಿ, (೩೦) ಸಾ: ಸಿದ್ದೇಶ್ವರ ನಗರ ಬೆಳಗಾವಿ.
ಈ ಮೂವರನ್ನು ಬಂಧಿಸಿ, ಅವರಿಂದ
೧) ರೂ. ೭೫,೦೦೦/- ಮೌಲ್ಯದ ೧೫ ಗ್ರಾಂ ಬಂಗಾರದ ಆಭರಣಗಳು
೨) ರೂ.೧೧,೩೨,೬೨೫/- ಮೌಲ್ಯದ ೧೭ ಕಿಲೋ ೪೨೫ ಗ್ರಾಂ ಬೆಳ್ಳಿಯ ಆಭರಣಗಳು
೩)) ನಗದು ಹಣ ೧೦೦೦/- ರೂ
೪] ರೂ.೧,೪೦,೦೦೦/- ಮೌಲ್ಯದ ೦೪ ಟಿವಿಗಳು
೫ ] ಕಳ್ಳತನಕ್ಕೆ ಬಳಸಿದ ಒಂದು ಕಾರ್ ಮತ್ತು ೦೨ ಮೋಟಾರ್ ಸೈಕಲ್ ಗಳು ಒಟ್ಟು ಅ.ಕಿ.೬,೦೦,೦೦೦/- ರೂ.
ಹೀಗೆ ಒಟ್ಟು ೧೯,೪೭,೬೨೫/- ರೂ ಮೌಲ್ಯದ ಸ್ವತ್ತನ್ನು ಆರೋಪಿಗಳಿಂದ ಜಪ್ತಪಡಿಸಿಕೊಂಡು, ಆರೋಪಿತರಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪ್ರಕರಣವನ್ನು ಪತ್ತೆ ಮಾಡುವಲ್ಲಿ ಶ್ರಮಿಸಿದ ಪಿಐ ಎಪಿಎಂಸಿ ಹಾಗೂ ತಂಡದ ಸದಸ್ಯರ ಕಾರ್ಯವನ್ನು ಪೊಲೀಸ್ ಆಯುಕ್ತರು & ಉಪ ಆಯುಕ್ತರುಗಳು ಶ್ಲಾಘಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ