Kannada NewsKarnataka NewsLatest

ಬೆಳಗಾವಿ ಪೊಲೀಸರ ಭರ್ಜರಿ ಭೇಟೆ: ಮೂವರು ಮನೆಗಳ್ಳರ ಬಂಧನ; 19.47 ಲಕ್ಷ ರೂ. ಮೌಲ್ಯದ ವಸ್ತುಗಳ ವಶ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಎಪಿಎಮ್‌ಸಿ ಪೊಲೀಸರು ಮೂವರು ಮನೆಗಳ್ಳರನ್ನು ಬಂಧಿಸಿ, ಒಟ್ಟು ರೂ.೧೯,೪೭,೬೨೫/- ಮೌಲ್ಯದ ಬಂಗಾರ, ಬೆಳ್ಳಿಯ ಆಭರಣ, ಕಾರ್ & ಮೋಟರ ಸೈಕಲ್ ಗಳನ್ನು ಜಪ್ತು ಮಾಡಿದ್ದಾರೆ.

ದಿನಾಂಕ: ೨೩-೦೫-೨೦೨೨ ರಂದು ಎ.ಪಿ.ಎಮ್.ಸಿ ಪೊಲೀಸ್ ಠಾಣಾ ವ್ಯಾಪ್ತಿಯ ಟಿ.ವಿ ಸೆಂಟರ್ ನಲ್ಲಿ ಬಾಲಾಜಿ ಶಿವಲಿಂಗಪ್ಪ ಸಾವಳಗಿ ಅವರ ಮನೆಯಲ್ಲಿ ಬಂಗಾರದ ಆಭರಣ ಹಾಗೂ ನಗದು ಹಣ ಕಳುವಾದ ಬಗ್ಗೆ ನೀಡಿದ ದೂರಿನಂತೆ ಎಪಿಎಮ್‌ಸಿ ಠಾಣೆ ಯಲ್ಲಿ ಪ್ರಕರಣ ದಾಖಲಾಗಿತ್ತು.

Home add -Advt

ಇನಸ್ಪೆಕ್ಟರ್  ಮಂಜುನಾಥ ಜಿ ಹಿರೇಮಠ  ಹಾಗೂ ಎಪಿಎಂಸಿ ಠಾಣೆಯ ಪಿಎಸ್‌ಐ  ಮತ್ತು ಸಿಬ್ಬಂದಿಯವರ ತಂಡ ಆರೋಪಿತರಿಗಾಗಿ ಬಲೆ ಬೀಸಿ, ದಿನಾಂಕ: ೨೭-೦೫-೨೦೨೨ ರಂದು ಸಂಶಯುಕ್ತ  ಜನರನ್ನು ಕರೆತಂದು ವಿಚಾರಣೆಗೆ ಒಳಪಡಿಸಿದಾಗ  ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದಾರೆ.

೧)     ಖಾಜಾ ಅಸ್ಲಮ್ @ ರಫೀಕ ಸಯ್ಯದ @ ಶೇಖ, (೩೨) ಸಾ: ವೈಭವ ನಗರ ಬೆಳಗಾವಿ.

೨)   ಇರ್ಫಾನ ಖತಾಲ ಶೇಖ, (೩೨) ಸಾ: ವೈಭವ ನಗರ ಬೆಳಗಾವಿ.

೩)   ತಂಜೀಮ ಇಸ್ಮಾಯಿಲ್ ಖಾನಾಪುರಿ, (೩೦) ಸಾ: ಸಿದ್ದೇಶ್ವರ ನಗರ ಬೆಳಗಾವಿ.

ಈ ಮೂವರನ್ನು ಬಂಧಿಸಿ, ಅವರಿಂದ

೧) ರೂ. ೭೫,೦೦೦/- ಮೌಲ್ಯದ ೧೫ ಗ್ರಾಂ ಬಂಗಾರದ ಆಭರಣಗಳು

೨) ರೂ.೧೧,೩೨,೬೨೫/- ಮೌಲ್ಯದ ೧೭ ಕಿಲೋ ೪೨೫ ಗ್ರಾಂ ಬೆಳ್ಳಿಯ ಆಭರಣಗಳು

೩)) ನಗದು ಹಣ ೧೦೦೦/- ರೂ

೪] ರೂ.೧,೪೦,೦೦೦/- ಮೌಲ್ಯದ ೦೪ ಟಿವಿಗಳು

೫ ] ಕಳ್ಳತನಕ್ಕೆ ಬಳಸಿದ ಒಂದು ಕಾರ್ ಮತ್ತು ೦೨ ಮೋಟಾರ್ ಸೈಕಲ್ ಗಳು ಒಟ್ಟು ಅ.ಕಿ.೬,೦೦,೦೦೦/- ರೂ.

ಹೀಗೆ ಒಟ್ಟು ೧೯,೪೭,೬೨೫/- ರೂ ಮೌಲ್ಯದ ಸ್ವತ್ತನ್ನು ಆರೋಪಿಗಳಿಂದ ಜಪ್ತಪಡಿಸಿಕೊಂಡು,   ಆರೋಪಿತರಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಪ್ರಕರಣವನ್ನು ಪತ್ತೆ ಮಾಡುವಲ್ಲಿ ಶ್ರಮಿಸಿದ ಪಿಐ ಎಪಿಎಂಸಿ ಹಾಗೂ ತಂಡದ ಸದಸ್ಯರ ಕಾರ್ಯವನ್ನು ಪೊಲೀಸ್ ಆಯುಕ್ತರು & ಉಪ ಆಯುಕ್ತರುಗಳು ಶ್ಲಾಘಿಸಿದ್ದಾರೆ.

ಬೆಳಗಾವಿಯಲ್ಲಿ ರಾಮದೇವ ಗಲ್ಲಿ ಸೇರಿ 2-3 ದೇವಸ್ಥಾನಗಳನ್ನು ಪರಿವರ್ತಿಸಿ ಮಸೀದಿ ಮಾಡಲಾಗಿದೆ: ಅವುಗಳನ್ನು ಮರಳಿ ಪಡೆಯಬೇಕು – ಶಾಸಕ ಅಭಯ ಪಾಟೀಲ

 

 

Related Articles

Back to top button