Belagavi NewsBelgaum News

*ಇಬ್ಬರು ಚಾಲಾಕಿ ಕಳ್ಳರನ್ನು ಬಂಧಿಸಿದ ಬೆಳಗಾವಿ ಪೊಲೀಸರು*

ಪ್ರಗತಿವಾಹಿನಿ ಸುದ್ದಿ: : ಬೆಳಗಾವಿ ನಗರದ ಮಾರ್ಕೆಟ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕಳೆದ ಫೆಬ್ರವರಿ 3 ರಂದು ಮಹಾದ್ವಾರ ರೋಡ 4 ನೇ ಕ್ರಾಸ್ ನಲ್ಲಿ ನಡೆದಿದ್ದ ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ

ರೂಪಾಲಿ ಕೊಂ ವಿನಾಯಕ ಬಿರಜೇ ಇವರ ಮನೆಗಳ್ಳತನ ಪ್ರಕರಣದ ದೂರಿಗೆ ಸಂಬಂಧಿಸಿದಂತೆ ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳೆ ಬಾಜಿ ಮಾರ್ಕೆಟ್ ಹತ್ತಿರ ಕಳುವಿನ ಬಂಗಾರದ ಆಭರಣಗಳನ್ನು ಆರೋಪಿಗಳಾದ ಚಂದ್ರಕಾಂತ @ ಪ್ರೆಮ್ ಸಂತೋಷ (19) ಹಾಗೂ ಓಂಕಾರ ಭಾವುಕನ್ನ ಪಾಟೀಲ (20  ಮಾರಾಟ ಮಾಡಲು ಬಂದಾಗ ಸಿಕ್ಕಿಬಿದ್ದಿದ್ದಾರೆ.

ಈ ಕಳ್ಳರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೆ ಒಳಪಡಿಸಿದಾಗ ಈಗಾಗಲೆ ಇವರ ಮೇಲೆ ಹಳೆ ಪ್ರಕರಣಗಳು ಇರುವುದು ಬೆಳಕಿಗೆ ಬಂದಿದೆ. ಜೊತೆ ಈ ಕಳ್ಳರು ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದಾರೆ.‌ 

ಮಾರ್ಕೆಟ್ ಪೊಲೀಸ್ ಠಾಣೆಯ ವ್ಯಾಪ್ತಿಯ ಮಹಾದ್ವಾರ ರೋಡ, ಮಾರಿಹಾಳ ಪೊಲೀಸ್ ಠಾಣೆ ವ್ಯಾಪ್ತಿಯ ಕಲಕಾಂಬದಲ್ಲಿ ಹಾಗೂ ಮಾಳಮಾರುತಿ ಪೊಲೀಸ್ ಠಾಣೆಯ ವ್ಯಾಪ್ತಿಯ ಬಸವಣಕುಡಚಿಯಲ್ಲಿ ಮನೆ ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 100 ಗ್ರಾಂ, ಅಕಿ 6,48,000 ಬೆಲೆಯ ಬಂಗಾರದ ಆಭರಣಗಳನ್ನು ಜಪ್ತ ಮಾಡಿ, ಆರೋಪಿತರಿಗೆ ನ್ಯಾಯಾಂಗ ಬಂಧನದಲ್ಲಿ ಇಡಲಾಗಿದೆ.‌

Home add -Advt

ಪೊಲೀಸ್ ಆಯುಕ್ತರು, ಪೊಲೀಸ್ ಉಪ ಆಯುಕ್ತರು (ಕಾಸು) ಪೊಲೀಸ್ ಉಪ ಆಯುಕ್ತರು (ಅವಿ) ಹಾಗೂ ಮಾನ್ಯ ಸಹಾಯಕ ಪೊಲೀಸ ಆಯುಕ್ತರು ಮಾರ್ಕೇಟ ಉಪ ವಿಭಾಗರವರ ಮಾರ್ಗದರ್ಶನದಲ್ಲಿ ಮಾರ್ಕೇಟ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೇಕ್ಟರ ಮಹಾಂತೇಶ ಧಾಮಣ್ಣವರ ಹಾಗೂ ಹೆಚ್.ಎಲ್.ಕೆರೂರ, ಪಿ.ಎಸ್.ಐ. ಹಾಗೂ ಸಿಬ್ಬಂದಿ ಜನರಾದ  ಐ.ಎಸ್.ಪಾಟೀಲ, ಲಕ್ಷ್ಮಣ ಕಡೋಲ್ಕರ, ಶಿವಪ್ಪ ತೇಲಿ, ಶಂಕರ ಕುಗಟೊಳ್ಳಿ, ಸುರೇಶ ಕಾಂಬಳೆ, ಹಾಗೂ ಕಾರ್ತಿಕ, ಇವರುಗಳು ಕಳುವಿಗೆ ಹೊದ ವಸ್ತು ಮತ್ತು ಆರೋಪಿತರಿಗೆ ಪತ್ತೆ ಕಾರ್ಯವನ್ನು ಕೈಕೊಂಡಿದ್ದು ಸದರಿ ಮಾರ್ಕೆಟ್ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯದಕ್ಷತೆಯನ್ನು ಪೊಲೀಸ್ ಆಯುಕ್ತರು ಮೆಚ್ಚುಗೆ ವ್ಯಕ್ತ ಪಡಿಸಿರುತ್ತಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button