Belagavi NewsBelgaum NewsKannada NewsKarnataka News

*ಆರ್‌ಸಿಯುನಲ್ಲಿ ಕಾರ್ಯಾಗಾರ ನಡೆಸಿದ ಬೆಳಗಾವಿ ಪೊಲೀಸರು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಬೆಳಗಾವಿ ಪೊಲೀಸ್‌ ಕಮೀಷನರೇಟ್‌ ಇವರ ಸಹಯೋಗದೊಂದಿಗೆ  “Day Against Drug Abuse and Illicit Trafficking” Online Live Telecast ಮೂಲಕ ವಿಶ್ವವಿದ್ಯಾಲಯದ ಕುವೆಂಪು ಸಭಾಂಗಣದಲ್ಲಿ ಸಾಮೂಹಿಕವಾಗಿ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿತ್ತು.

ವಿಶ್ವವಿದ್ಯಾಲಯದ ಅಪರಾಧ ಮತ್ತು ಅಪರಾಧಿಕ ನ್ಯಾಯಿಕ ಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಆರ್.‌ ಎನ್.‌ ಮನಗೂಳಿ ಹಾಗೂ ಡಾ. ನಂದಿನಿ ದೇವರಮನಿ ಇವರು ಭಾರತದಲ್ಲಿ ಯುವಜನತೆ ಇತ್ತೀಚೆಗೆ ಡ್ರಗ್ಸ್‌ಗೆ ಒಳಗಾಗುತ್ತಿರುವುದಕ್ಕೆ ನಿದರ್ಶನಗಳ ಮೂಲಕ ವಿದ್ಯಾರ್ಥಿಗಳು ಮಾಧಕ ವಸ್ತುಗಳ ಸೇವನೆ ಮತ್ತು ಸಾಗಾಣಿಕೆಯ ಬಗ್ಗೆ ಮುಕ್ತರಾಗುವ ಬಗ್ಗೆ ಮಾತನಾಡಿದರು. 

Home add -Advt

ಕ್ರೀಡಾ ನಿರ್ದೇಶಕರಾದ ಡಾ. ಜಗದೀಶ ಗಸ್ತಿ ಇವರು ಕ್ರೀಡೆಗಳಲ್ಲಿ ಭಾಗವಹಿಸುವ  ಕ್ರೀಡಾಪಟುಗಳು ಸಹಿತ ಮಾಧಕ ವಸ್ತು ಸೇವನೆ ಮಾಡುತ್ತಿರುವುದನ್ನು ತಿಳಿಸಿ ಅರಿವು ಮೂಡಿಸಿದರು.

ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಎಲ್ಲಾ ಬೋಧಕ, ಬೋಧಕೇತರ ಸಿಬ್ಬಂದಿಗಳು ಹಾಗೂ ಸಂಶೋಧನಾ ವಿದ್ಯಾರ್ಥಿಗಳು, ಹಾಜರಿದ್ದು ಕಾರ್ಯಕ್ರಮವನ್ನು ವೀಕ್ಷಿಸಿ ಯಶಸ್ವಿಗೊಳಿಸಿದರು. 

Related Articles

Back to top button