GIT add 2024-1
Beereshwara 33

*ಬೆಳಗಾವಿ ಪೊಲೀಸರ ಕಾರ್ಯಾಚರಣೆ: ಆರೋಪಿಗಳ ಬಂಧನ*

Anvekar 3
Cancer Hospital 2

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಪೊಲೀಸ್ ಕಮೀಷನರ್ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣಾ ಸಿಬ್ಬಂದಿಗಳು ದಾಳಿ ಮಾಡಿ, ಮಟಕಾ, ಹಾಗೂ ಅಕ್ರಮ ಮದ್ಯ ಮಾರಾಟಗಾರರ ಹೆಡೆಮುರಿ ಕಟ್ಟಿದ್ದಾರೆ.

ಮಾಳಮಾರುತಿ ಪೊಲೀಸ್‌ರಿಂದ ಮಟಕಾ ಮಾರಾಟಗಾರನ ಒಬ್ಬನ ಬಂಧನ

ಏ.12 ರಂದು ಖಚಿತ ಮಾಹಿತಿ ಮೇರೆಗೆ ನಗರದ ಗಾಂಧಿ ನಗರದ ರೇಲ್ವೇ ಹಳಿಯ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಮಾಳಮಾರುತಿ ಪಿಐ ಮತ್ತು ತಂಡ ದಾಳಿ ಮಾಡಿ, ಅಕ್ರಮವಾಗಿ ಮಟಕಾ ಮಾರಾಟ ಮಾಡುತ್ತಿದ್ದ ಖದೀಮ ರಾಜಾಸಾಬ ನಧಾಫನನ್ನು ವಶಕ್ಕೆ ಪಡೆದುಕೊಂಡು 1950 ರೂ. ಹಣ ಹಾಗೂ ಸಾಮಗ್ರಿಗಳನ್ನು ವಶಕ್ಕೆ ಪಡೆದು, ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಬೆಳಗಾವಿ ಗ್ರಾಮೀಣ ಪೊಲೀಸ್‌ರಿಂದ ಮಟಕಾ ಮಾರಾಟಗಾರನ ಬಂಧನ

Emergency Service

ಏ.13 ರಂದು ಬೆಳಗಾವಿ ನಗರದ ಜೈತುನ ಮಾಳ ಸಮೀಪದ ಜೋಟಪಟ್ಟಿ ಹತ್ತಿರ ಸಾರ್ವಜನಿಕರ ಸ್ಥಳದಲ್ಲಿ ಮಟಕಾ ಮಾರಾಟ ಮಾಡಿತ್ತಿದ್ದವನನ್ನು ಬೆಳಗಾವಿ ಗ್ರಾಮೀಣ ಪಿಐ ಮತ್ತು ಅವರ ತಂಡ ದಾಳಿ ಮಾಡಿ, ಬಂಧಿಸಿದ್ದಾರೆ.‌

ಶಿವಪ್ಪ ಮಂಜಾಳಕರ ಹಾಗೂ ರಾಜು ಬಸವಣ್ಣಿ ಮಂಜಾಳಕರ ಬಂಧಿತರು.‌ ಬಂಧಿತರಿಂದ 2260 ರೂ.‌ ಹಣ ಹಾಗೂ ಸಾಮಗ್ರಿಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ.‌

ಎಪಿಎಂಸಿ ಪೊಲೀಸ್‌ರ ಕಾರ್ಯಾಚರಣೆ

ಏ.14 ರಂದು ಬೆಳಗಾವಿಯ ಸದಾಶಿವ ನಗರದ ಕಾರ್ಪೋರೇಶನ್ ಕಾಂಪ್ಲೆಕ್ಸ್‌ ಹತ್ತಿರ ಸಾರ್ವಜನಿಕರ ಸ್ಥಳದಲ್ಲಿ ಅಕ್ರಮ ಸರಾಯಿ ಮಾರುತ್ತಿದ್ದವನ್ನನ್ನು ಎಪಿಎಂಸಿ ಪಿಐ ಮತ್ತು ಅವರ ತಂಡ ದಾಳಿ ಮಾಡಿ ವಶಕ್ಕೆ ಪಡೆದಿದ್ದಾರೆ.‌

ಲಗಮಾ ಯಲ್ಲಪ್ಪ ನಾಯಿಕ ಎಂಬಾತನನ್ನು ವಶಕ್ಕೆ ಪಡೆದು.‌ 2500 ಮೌಲ್ಯದ ವಿವಿಧ ಟೆಟ್ರಾ ಪ್ಯಾಕೇಟ್‌ಗಳನ್ನು ಜಪ್ತಪಡಿಸಿಕೊಂಡು ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಮುಂದುವರೆಸಲಾಗಿದೆ.

ಈ ದಾಳಿಯಲ್ಲಿ ಪಾಲ್ಗೊಂಡ ಪಿಐ, ಮತ್ತು ಸಿಬ್ಬಂದಿಯವರ ಕಾರ್ಯವನ್ನು ಪೊಲೀಸ್ ಆಯುಕ್ತರು, ಡಿಸಿಪಿ (ಕಾ&ಸು), ಡಿಸಿಪಿ (ಅ&ಸಂ), ಬೆಳಗಾವಿ ನಗರ ರವರು ಶ್ಲಾಘಿಸಿದ್ದಾರೆ.‌

Laxmi Tai add
Bottom Add3
Bottom Ad 2