*ಲಾಂಗ್ ಹಿಡಿದು ಶೋಕಿ ಮಾಡಿದವನಿಗೆ ಜೈಲು ಸೇರುವಂತೆ ಮಾಡಿದ ಬೆಳಗಾವಿ ಪೊಲೀಸರು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕೈಯಲ್ಲಿ ಲಾಂಗು, ಮಚ್ಚು ಹಿಡಿದು ಡೈಲಾಗ್ ಗಳನ್ನು ಹೇಳುತ್ತಾ ಶೋಕಿಗಾಗಿ ರೀಲ್ಸ್ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮೇಕಲಮರಡಿಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಮುಶ್ರಫ್ ಖಾನ್ ಬಂಧಿತ ಆರೋಪಿ. ಈತ ಮಾ.28 ರಂದು ರಂದು ಕತ್ತಿ ಖಡ್ಗ ಝಳಪಿಸುತ್ತಾ ದೊಡ್ಡ ಹೀರೋ ರೀತಿಯಲ್ಲಿ ಫೋಸು ಕೊಡುತ್ತಾ ತನ್ನ ಪೌರುಷವನ್ನು ಮೆರೆಯುವ ವಿಡಿಯೋ ಚಿತ್ರೀಕರಿಸಿ ಸೋಷಿಯಲ್ ಮೀಡಿಯಾದಲ್ಲಿ ಹಾಕಿಕೊಂಡಿದ್ದ. ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಪೊಲೀಸರ ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್ ಸಿಬ್ಬಂದಿ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದರು.
ಗುರುವಾರ ಮುಶ್ರಫ್ ಖಾನ್ ನನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ. ಸದ್ಯ ಆರೋಪಿ ಹಿಂಡಲಗಾ ಜೈಲು ಸೇರಿದ್ದಾನೆ.
ಕೈಯಲ್ಲಿ ಲಾಂಗು, ಮಚ್ಚು ಹಿಡಿದು ಡೈಲಾಗ್ ಗಳನ್ನು ಹೇಳುತ್ತಾ ಶೋಕಿಗಾಗಿ ರೀಲ್ಸ್ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.