*ಬೆಳಗಾವಿ ಪೊಲೀಸರ ಮಿಂಚಿನ ಕಾರ್ಯಾಚರಣೆ: ಇಬ್ಬರು ವ್ಯಕ್ತಿಗಳಿಂದ ಎರಡು ಗನ್ ಸೀಜ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ಮಾಳಮಾರುತಿ ಪೊಲೀಸರಿಂದ ಅಕ್ರಮ ಶಸ್ತ್ರಾಸ್ತ್ರ ಹೊಂದಿದ ವ್ಯಕ್ತಿಗಳನ್ನು ಬಂಧಿಸಿ ಎರಡು ಪಿಸ್ತೂಲ್, ಮದ್ದು-ಗುಂಡುಗಳು ಜಪ್ತಿ ಮಾಡಲಾಗಿದೆ.
ಕೆ.ಎಲ್.ಇ ಛತ್ರಿಯ ಸಮೀಪ ಕೊಲ್ಹಾಪೂರದಿಂದ ಧಾರವಾಡ ಕಡೆಗೆ ಸಾಗಿದ ರಾಷ್ಟ್ರೀಯ ಹೆದ್ದಾರಿ-48 ಮೇಲೆ ಕಾರ್ ನಲ್ಲಿ ಇಬ್ಬರು ವ್ಯಕ್ತಿಗಳು ಕಪ್ಪು ಬಣ್ಣದ ಬ್ಯಾಗ್ ನಲ್ಲಿ ಪಿಸ್ತೂಲಗಳನ್ನು ಹಾಗೂ ಮದ್ದುಗುಂಡುಗಳನ್ನು ಇಟ್ಟುಕೊಂಡು ಹೈವೇ ಬದಿಗೆ ಕಾರನ್ನು ನಿಲ್ಲಿಸಿಕೊಂಡು ನಿಂತಿದ್ದಾರೆ ಎಂಬ ಖಚಿತ ಮಾಹಿತಿ ಆಧಾರದ ಮೇಲೆ ದಾಳಿ ನಡೆಸಿದ ಪೊಲೀಸರು ಮಹಾರಾಷ್ಟ್ರ ಮೂಲದ ರವೀಂದ್ರ ಕುಂತಿನಾಥ ನಾಯಿಕ,
ಶಾಹೀದ್ ರಯೀಸೊಹಮ್ಮದ್ ಪಟೇಲ್ ಎಂಬುವರನ್ನು ವಕ್ಕೆ ಪಡೆದಿದ್ದಾರೆ.
ಬಂಧಿತರಿಂದ ಯಾವುದೇ ಅಧಿಕೃತ ಲೈಸನ್ ಇರದ 12-ಕಂಟ್ರಿಮೇಡ ಪಿಸ್ತೂಲ್, ಜೀವಂತ ಗುಂಡು-ಮದ್ದುಗಳು, 8 ಜಿಬಿ ಮೆಮೊರಿ ಕಾರ್ಡ್, ಐಫೋನ್, ಎಚ್ಎಮ್ಡಿ ಕೀಪ್ಯಾಡ್ ಮೊಬೈಲ್ ಕಿಯಾ ಸೊನೆಟ್ ಕಾರು ಜಪ್ತಿ ಮಾಡಲಾಗಿದೆ.
ಆರೋಪಿಗಳ ವಿರುದ್ಧ ಮಾಳಮಾರುತಿ ಪೊಲೀಸ್ ಠಾಣಿ ಪ್ರ ಸಂ.22/2026 ಕಲಂ.61(1) ಸಹ ಕಲಂ 3(5) ಬಿಎನ್ಎಸ್-2023 ಹಾಗೂ ಕಲಂ 25(1ಎ), 29(ಎ)&(ಬಿ) ಇಂಡಿಯನ್ ಆರ್ಮ ಆಕ್ಷ 1959 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಜರುಗಿಸಿ, ಪ್ರಕರಣದ ತನಿಖೆ ಮುಂದುವರೆಸಲಾಗಿದೆ.



