ಬೆಳಗಾವಿ ಗ್ರಾಮೀಣ ಕ್ಷೇತ್ರ: ಚುನಾವಣೆ ಹತ್ತಿರ ಬಂದರೂ ನಿಲ್ಲದ ಅಭಿವೃದ್ಧಿ ಯೋಜನೆಗಳ ಸರಣಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಿಧಾನ ಸಭಾ ಚುನಾವಣೆ ಘೋಷಣೆಗೆ ದಿನಗಣನೆ ಆರಂಭವಾಗಿದೆ. ಯಾವುದೇ ಕ್ಷಣದಲ್ಲಿ ಚುನಾವಣೆ ಆಯೋಗ ನೀತಿಸಂಹಿತೆ ಜಾರಿಗೊಳಿಸಬಹುದು ಎಂದು ಎಲ್ಲ ರಾಜಕಾರಣಿಗಳು ಕಾಯುತ್ತಿದ್ದಾರೆ.
ಆದರೆ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಮಾತ್ರ ಅಭಿವೃದ್ಧಿ ಯೋಜನೆಗಳ ಸರಣಿ ಇನ್ನೂ ನಿಂತಿಲ್ಲ. ಮಳೆಗಾಲದ ಮಳೆಯಂತೆ ನಿರಂತರವಾಗಿ ಶಂಕುಸ್ಥಾಪನೆ ಇಲ್ಲವೇ ಉದ್ಘಾಟನೆ ಕಾರ್ಯಕ್ರಮಗಳು ಮುಂದುವರಿದಿವೆ. ಕ್ಷೇತ್ರಕ್ಕೆ ಸಾವಿರಾರು ಕೋಟಿ ರೂ.ಗಳ ಯೋಜನೆಗಳನ್ನು ತಂದಿರುವ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್, ಚುನಾವಣೆ ಅಧಿಸೂಚನೆ ಜಾರಿಗೊಳ್ಳುವ ಮುನ್ನ ಎಲ್ಲ ಕಾಮಗಾರಿಗಳಿಗೆ ಚಾಲನೆ ನೀಡುವ ತವಕದಲ್ಲಿದ್ದಾರೆ. ಶಾಸಕರಾಗಿ ಆಯ್ಕೆಯಾದ ದಿನದಿಂದಲೂ ಅವರು ಅವಿಶ್ರಾಂತವಾಗಿ ಯೋಜನೆಗಳನ್ನು ತಂದು ಚಾಲನೆ ನೀಡುತ್ತಲೇ ಇದ್ದಾರೆ.
ಭಾನುವಾರ ಸಹ ಲಕ್ಷ್ಮೀ ಹೆಬ್ಬಾಳಕರ್ ಮತ್ತು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹಲವು ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ಇನಾಂ ಬಡಸ್ ಗ್ರಾಮದ ಸರ್ಕಾರಿ ಹಿರಿಯ ಮರಾಠಿ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಹೊಸ ಕೊಠಡಿಯನ್ನು ಲಕ್ಷ್ಮೀ ಹೆಬ್ಬಾಳಕರ್ ಉದ್ಘಾಟಿಸಿದರು.
ಈ ಸಮಯದಲ್ಲಿ ಗ್ರಾಮದ ಹಿರಿಯರು, ಮೇದಾರ್, ಗಂಗಾರಾಮ ಪಾಟೀಲ, ರಾಜು ಪಾಟೀಲ, ಶಿವಾಜಿ ಪಾಟೀಲ, ಗಿತೇಶ ತಾನಾಬ, ಆಕಾಶ ಪಾಟೀಲ, ಮನೋಹರ ಬೆಳಗಾಂವ್ಕರ್, ಜಯಪ್ಪ ಪಾಟೀಲ, ಲಕ್ಷಣ ಪಾಟೀಲ, ನಾರಾಯಣ ಪಾಟೀಲ, ಗಾಯತ್ರಿ ಪಾಟೀಲ, ನಾರಾಯಣ ನಲವಡೆ, ನಮೃತಾ ಪಾಟೀಲ, ಮಂಗೇಶ ಪಾಟೀಲ, ದುರ್ಗಪ್ಪ ಪಾಟೀಲ, ರಾಜು ಪಾಟೀಲ, ಉದಯ ಸುತಾರ, ಸಂಜಯ ಪಾಟೀಲ, ಅಶೋಕ ಕಾಂಬಳೆ, ಗಜಾನನ ಪಾಟೀಲ ಹಾಗೂ ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು.
ಬೆಳವಟ್ಟಿ ಗ್ರಾಮದ ಸರ್ಕಾರಿ ಮರಾಠಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಕೊಠಡಿ ನಿರ್ಮಾಣದ ಸಲುವಾಗಿ ಹೆಬ್ಬಾಳಕರ್ ಭೂಮಿ ಪೂಜೆಯನ್ನು ಕೈಗೊಂಡು ಕೊಠಡಿ ನಿರ್ಮಾಣದ ಕಾಮಗಾರಿಗಳಿಗೆ ಚಾಲನೆಯನ್ನು ನೀಡಿದರು.
ಈ ಸಮಯದಲ್ಲಿ ಗ್ರಾಮದ ಹಿರಿಯರು, ಗಜಾನನ ಪಾಟೀಲ, ಮನೋಹರ ಬೆಳಗಾಂವ್ಕರ್, ನಾರಾಯಣ ನಲವಡೆ, ಮೇದಾರ ಸರ್, ಬಿ ಇ ಓ ದಾಸಪ್ಪನವರ, ಬಾಳು ನಲವಡೆ, ಪರಶು ಗಡೆಕರ್, ಉಮೇಶ ನಾಕಡೆ, ಮಾರುತಿ ಕಾಂಬಳೆ ಮುಂತಾದವರು ಉಪಸ್ಥಿತರಿದ್ದರು.
ಮೊದಗಾ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಅರಿಸಿಣ -ಕುಂಕುಮ ಕಾರ್ಯಕ್ರಮದಲ್ಲಿ ಭಾಗಿಯಾದ ಲಕ್ಷ್ಮೀ ಹೆಬ್ಬಾಳಕರ್ ಹಾಗೂ ಚನ್ನರಾಜ ಹಟ್ಟಿಹೊಳಿ, ಗ್ರಾಮಸ್ಥರ ಜೊತೆ ಸಂವಾದ ನಡೆಸಿದರು. ಈ ಸಮಯದಲ್ಲಿ ಗ್ರಾಮದ ಹಿರಿಯರು, ಬಸು ಕಲ್ಲೂರ, ನಮೃತಾ ಕಾಳೆ, ಶಿವಾಜಿ ಅಷ್ಟೇಕರ್, ಮಂಗಲಾ ತಾರಿಹಾಳ, ಗಂಗು ಮುಚ್ಚಂಡಿ, ಪ್ರೀತಿ ನಾವಿ, ಬಸವಂತ ಕಾಳೋಜಿ, ಖಾಜೇಸಾಬ್ ಯರಗಟ್ಟಿ, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಕಂಗ್ರಾಳಿ ಬಿ ಕೆ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಅರಿಸಿಣ-ಕುಂಕುಮ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಲಕ್ಷ್ಮೀ ಹೆಬ್ಬಾಳಕರ್, ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.
ಈ ಸಮಯದಲ್ಲಿ ಗ್ರಾಮದ ಹಿರಿಯರು, ದತ್ತಾ ಪಾಟೀಲ, ಜಯರಾಂ ಪಾಟೀಲ, ಅಡಿವೆಪ್ಪ ಹತ್ತರಗಿ, ಸೈಯದ್ ಬಂಡೆನವಾಜ್, ಅರ್ಚನಾ ಪಠಾಣಿ, ದೀಪಾ ಪಮ್ಮಾರ, ಕೌಸರಜಾ ಸೈಯದ್, ಸುವರ್ಣ ಲಂಕೆನ್ನವರ, ಫಕೀರವ್ವ ಬೆಳಗಾವಿ, ಶಕುಂತಲಾ ಸಿಂಗ್, ಸುಪ್ರಿಯಾ ಕೋಳಿ, ಸುಚಿತಾ ಕೋಳಿ, ವಂದನಾ ಚೌಹಾನ್, ಭಾರತಾ ಪಾಟೀಲ, ರೋಹಿಣಿ ನಾಥ್ಬೋವಾ, ಮೇನಕಾ ಕುರುಡೆ, ಸದೆಪ್ಪ ರಾಜಕಟ್ಟಿ, ಸಿದ್ರಾಯಿ ಬೆಳಗಾವಿ, ಮಾರುತಿ ಚೌವಾನ್, ಶರೀಫ್ ಸನದಿ, ಅಯುಬ್ ಪಠಾಣ, ಪ್ರಕಾಶ ಲಮಾಣಿ, ನಾಮದೇವ ರಾಥೋಡ್, ಶಂಕರ ಅಷ್ಟೇಕರ ಹಾಗೂ ಮುಂತಾದವರು ಉಪಸ್ಥಿತರಿದ್ದರು.
ಕವಳೇವಾಡಿ ಗ್ರಾಮದಲ್ಲಿ ನಡೆದ ಪಾರಾಯಣ ಸೋಹಳ ಕಾರ್ಯಕ್ರಮದಲ್ಲಿ ಭಾಗಿಯಾದ ಹೆಬ್ಬಾಳಕರ್, ಭಜನೆಯನ್ನು ಮಾಡುವ ಮೂಲಕ ದೇವರ ಸ್ಮರಣೆ ಮಾಡಿದರು.
ರಸ್ತೆ ಅಭಿವೃದ್ಧಿ, ದೇವಸ್ಥಾನ ಜೀರ್ಣೋದ್ಧಾರಕ್ಕೆ ಚಾಲನೆ
ಬೆಳಗಾವಿ ಗ್ರಾಮೀಣ ಕ್ಷೇತ್ರದ ಕೋಳಿಕೊಪ್ಪ ಗ್ರಾಮದಿಂದ ರಾಷ್ಟ್ರೀಯ ಹೆದ್ದಾರಿ ನಂ.4 ರ ವರೆಗಿನ ರಸ್ತೆಯ ಅಭಿವೃದ್ಧಿಗಾಗಿ ಲೋಕೋಪಯೋಗಿ ಇಲಾಖೆಯ ವತಿಯಿಂದ 38.90 ಲಕ್ಷ ರೂ,ಗಳನ್ನು ಬಿಡುಗಡೆ ಮಾಡಿಸಿರುವ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್, ರಸ್ತೆಯ ಡಾಂಬರೀಕರಣದ ಕಾಮಗಾರಿಗಳಿಗೆ ಭೂಮಿ ಪೂಜೆಯನ್ನು ಕೈಗೊಂಡು ಭಾನುವಾರ ಚಾಲನೆಯನ್ನು ನೀಡಿದರು.
ನಂತರ, ಕೋಳಿಕೊಪ್ಪ ಗ್ರಾಮದ ಶ್ರೀ ವಿಠ್ಠಲ ರುಕ್ಮಾಯಿ ಮಂದಿರದ ಜೀರ್ಣೋದ್ಧಾರದ ಕಾಮಗಾರಿಗಳಿಗೆ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಚಾಲನೆಯನ್ನು ನೀಡಿದರು. ಮುಜರಾಯಿ, ಹಜ್ ಮತ್ತು ವಕ್ಫ್ ಇಲಾಖೆಯ ವತಿಯಿಂದ ದೇವಸ್ಥಾನ ಜೀರ್ಣೋದ್ಧಾರಕ್ಕೆ ಅವರು 15 ಲಕ್ಷ ರೂ,ಗಳನ್ನು ಮಂಜೂರು ಮಾಡಿಸಿದ್ದಾರೆ.
ಈ ಸಮಯದಲ್ಲಿ ರಾಜು ಜಾಧವ್, ಬಸವರಾಜ ನಾಯ್ಕ, ತುಕಾರಾಂ ಕೊಡಚವಾಡ್, ಮನೋಹರ ಬಾಂಡಗಿ ಶಿವಾನಂದ ಬಾಂಡಗಿ, ಪರಶುರಾಮ ಪೂಜಾರಿ, ಮಾರುತಿ ಕೊಡಚವಾಡ್ ಸಂತೋಷ್ ಜಾಧವ್, ರಾಜು ನಾಯ್ಕ್, ಫಕೀರ ಕುರೇರ್, ನಾಗೇಶ್ ಕೊಡಚವಾಡ, ಸೋಮನಾಥ, ರಮೇಶ ಕುರಿ, ನಿಂಗಾನಿ ನಾಯ್ಕ್, ಸುರೇಶ ಕೊಡಚವಾಡ, ಸಂತೋಷ್ ಜಾಧವ್ ಮುಂತಾದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ