Kannada NewsKarnataka NewsLatest

ಬೆಳಗಾವಿ: ಏಕನಾಥ ಪಾಟೀಲ ಸೇರಿ ಮೂವರು ಶಿಕ್ಷಕರು, ಇತರ 10 ಜನರ ಸಾವು

ರಾಜ್ಯದಲ್ಲಿ ಭಾನುವಾರ 626 ಜನರ ಸಾವು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ / ಬೆಂಗಳೂರು – ಬೆಳಗಾವಿಯಲ್ಲಿ ಭಾನುವಾರ ಮೂವರು ಶಿಕ್ಷಕರು ಸೇರಿದಂತೆ 13 ಜನರು ಕೊರೋನಾಕ್ಕೆ ಬಲಿಯಾಗಿದ್ದಾರೆ.

ಮಾಧ್ಯಮಿಕ ಶಿಕ್ಷಕರ ಸಂಘದ ಬೆಳಗಾವಿ ಜಿಲ್ಲಾ ಅಧ್ಯಕ್ಷ ಏಕನಾಥ ಪಾಟೀಲ (47) ಭಾನುವಾರ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರು ಟಿಳಕವಾಡಿಯ ಬಾಲಿಕಾ ಆದರ್ಶಿ ವಿದ್ಯಾಲಯದ ಶಿಕ್ಷಕರಾಗಿದ್ದರು.

ಹುದಲಿಯ ಶಿಕ್ಷಕಿ ಶ್ರೀದೇವಿ ಹುಕ್ಕೇರಿ (37) ಸಹ ಭಾನುವಾರ ನಿಧನರಾಗಿದ್ದಾರೆ.

ಗೋಕಾಕ, ಹುಕ್ಕೇರಿ, ಅಥಣಿ ಹಾಗೂ ರಾಯಬಾಗದ ತಲಾ ಒಬ್ಬರು ಹಾಗೂ ಬೆಳಗಾವಿ ತಾಲೂಕಿನ 9 ಜನರು ಭಾನುವಾರ ಬಿಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಭಾನುವಾರ ಬೆಳಗಾವಿ ಜಿಲ್ಲೆಯ 1066 ಜನರಿಗೆ ಸೋಂಕು ದೃಢಪಟ್ಟಿದೆ.

ರಾಜ್ಯದಲ್ಲಿ ಭಾನುವಾರ ಒಟ್ಟೂ 25929 ಜನರಿಗೆ ಸೋಂಕು ಪತ್ತೆಯಾಗಿದೆ. 626 ಜನರು ಒಂದೇ ದಿನ ನಿಧನರಾಗಿದ್ದಾರೆ.

ರಾಜ್ಯದಲ್ಲಿ ಈವರೆಗೆ ಕೊರೋನಾದಿಂದ 25,282 ಜನರು ಸಾವಿಗೀಡಾಗಿದ್ದಾರೆ.

ರಾಜ್ಯದ ಸಮಗ್ರ ಮಾಹಿತಿ ಇಲ್ಲಿದೆ  –

23-05-2021 HMB English

23-05-2021 HMB Kannada

ಎಚ್ಚರದಿಂದಿರಿ, ಕರ್ನಾಟಕದಲ್ಲಿ ಕೊರೋನಾದಿಂದ ಸಾವು 25,000

ಉಪಚುನಾವಣೆ: ಮತ್ತೋರ್ವ ಶಿಕ್ಷಕಿ ಕೋವಿಡ್ ಗೆ ಬಲಿ

ಬೈ ಎಲೆಕ್ಷನ್; ಮತ್ತೋರ್ವ ಶಿಕ್ಷಕ ಬಲಿ

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button