Kannada NewsKarnataka News

ಬೆಳಗಾವಿ: ಪ್ರೀತಿಸಿ ಕೈಕೊಟ್ಟ ಯುವತಿ; ಕೊಲೆಗೈದು ತಾನೂ ಆತ್ಮಹತ್ಯೆ ಮಾಡಿಕೊಂಡ ಪ್ರೇಮಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –

ಕಳೆದ ಹಲವು ವರ್ಷಗಳಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದ  ಪ್ರೇಯಸಿ ಇದು ಕೆಟ್ಟ ಕನಸು ಎಂದು ಮರೆತು ಬಿಟ್ಟು ಬಿಡು ಎಂದಿದ್ದಕ್ಕೆ ಪ್ರೀತಿ ಮಾಡಿದ ಯುವತಿಯನ್ನು ಕತ್ತು ಹಿಸುಕಿ ಕೊಲೆ ಮಾಡಿ ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ಬಸವಕಾಲೋನಿಯಲ್ಲಿ ನಡೆದಿದೆ.

ಸವದತ್ತಿ ತಾಲೂಕಿನ ರಾಮಚಂದ್ರ ಬಸಪ್ಪ ತೇಣಗಿ (29) ರಾಣಿ‌ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಎಂ.ಎ ವಿದ್ಯಾಭ್ಯಾಸ ಮಾಡುತ್ತಿದ್ದ, ಕೊಲೆಯಾದ ಯುವತಿ ಕೆಎಲ್ಇ ಆಸ್ಪತ್ರೆಯಲ್ಲಿ ನಸ್೯ ಆಗಿ ಕೆಲಸ ಮಾಡುತ್ತಿದ್ದ ರೇಣುಕಾ ಕೆಂಚಪ್ಪ ಪಂಚಣ್ಣವರ (30) ಇಬ್ಬರು ಕಳೆದ ಕೆಲವು ವರ್ಷಗಳಿಂದ ಪರಸ್ಪರ ‌ಪ್ರೀತಿಸುತ್ತಿದ್ದರು. ಯುವತಿ ರೇಣುಕಾ ಇದೊಂದು ಕೆಟ್ಟ ಕನಸು ಎಂದು ಪ್ರೀತಿಯನ್ನು ಮರೆತು ಬಿಡು ಎಂದಿದ್ದಳು. ಆದರಿಂದ ಯುವತಿಯನ್ನು ಕೊಲೆ ಮಾಡಿ ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿರ ಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಯುವಕ ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಡೆತ್ ನೋಟ್ ಸಿಕ್ಕಿದ್ದು, ಎಪಿಎಂಸಿ ಪೊಲೀಸರು ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ‌. ಈ ಕುರಿತು ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

https://pragati.taskdun.com/latest/green-corridorliver-organbelagavi-citydharawad/

Home add -Advt

 

https://pragati.taskdun.com/crime-news/students-suicide-case2-teachersarrestedtamilnadu/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button