*ಜಗತ್ ಖ್ಯಾತವಾದ ಬೆಳಗಾವಿ ಯುವಕನ ಕ್ಯಾಚ್*
*ಸಚಿನ್ ತೆಂಡೂಲ್ಕರ್, ಓಂಕಾರ ಮಂಕಾಮೆ ಮೆಚ್ಚುಗೆ*
*ವಿಡಿಯೋ ವೈರಲ್*
*3+ ಮಿಲಿಯನ್ ವೀಕ್ಷಣೆ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಅದೃಷ್ಟ ಒಲಿದು ಬಂತೆಂದರೆ ಅದ್ಯಾವನೂ ಅಡ್ಡ ಹಾಕಲು ಸಾಧ್ಯವಿಲ್ಲ ಎಂಬುದನ್ನು ಇಲ್ಲಿನ ಯುವ ಕ್ರಿಕೆಟ್ ಆಟಗಾರರೊಬ್ಬರು ಸಾಬೀತುಪಡಿಸಿದ್ದಾರೆ.
ಗಲ್ಲಿ ಯುವಕರ ಆಟ ಈಗ ಎಲ್ಲೆಲ್ಲಿಯೂ ಫೇಮಸ್ ಆಗಿದ್ದು ಈ ಯುವಕನ ಒಂದು ಕ್ಯಾಚ್ ನಿಂದಾಗಿ. ಚೆಂಡು ಜಿಗಿದು ಬಂದ ಆ ಒಂದು ಕ್ಷಣ ಅದೃಷ್ಟ ಖುಲಾಯಿಸುವ ಹಾದಿಯಾಯಿತು.
ಈ ಯುವಕನ ಹೆಸರು ಕಿರಣ್ ತಾರಲೇಕರ್. ಇವರು ರಾಯಬಾಗದಲ್ಲಿ ಎಂಪಿಎಡ್ ವ್ಯಾಸಂಗ ಮಾಡುತ್ತಿದ್ದು ಮಕ್ಕಳಿಗೆ ಕ್ರಿಕೆಟ್ ತರಬೇತಿ ಕೂಡ ನೀಡುತ್ತಿದ್ದಾರೆ.
ಬೆಳಗಾವಿಯ ವ್ಯಾಕ್ಸಿನ್ ಡಿಪೊ ಮೈದಾನದಲ್ಲಿ ಖಡಕ್ ಗಲ್ಲಿ ಯುವಕರು ಆಯೋಜಿಸಿದ್ದ ಚಕಸ್ -2022 ಕ್ರಿಕೆಟ್ ಟೂರ್ನಿಯಲ್ಲಿ ಸಾಯಿರಾಜ ಹಾಗೂ ಎಸ್ ಆರ್ ಎಸ್ ಹಿಂದುಸ್ಥಾನ್, ನಿಪ್ಪಾಣಿ ತಂಡದ ಮಧ್ಯೆ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಮೇಲಿಂದ ತೂರಿ ಬಂದ ಚೆಂಡನ್ನು ಫುಟ್ ಬಾಲ್ ಆಟಗಾರನಂತೆ ಕಾಲಿನಿಂದ ಒದ್ದು ಇನ್ನೊಬ್ಬ ಆಟಗಾರ ಅದನ್ನು ಹಿಡಿಯಲು ಅನುಕೂಲ ಮಾಡಿಕೊಡುವ ಫೀಲ್ಡಿಂಗ್ ನ ಹೊಸ ಚಮತ್ಕಾರವನ್ನು ಕಿರಣ್ ತಾರಲೇಕರ ತೋರಿಸಿಕೊಟ್ಟಿದ್ದಾರೆ.
ಈ ವಿಡಿಯೊ ಜಾಲತಾಣಗಳಲ್ಲಿ ಹರಿದಾಡಿದ್ದೇ ಈಗ ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್ ರಿಟ್ವೀಟ್ ಮಾಡಿ “ಯಾವಾಗ ನೀವು ಫುಟ್ ಬಾಲ್ ಕೂಡ ಆಡಬಲ್ಲ ಯುವಕನನ್ನು ತರುತ್ತೀರೋ ಆಗ ಇದು ಸಾಧ್ಯ” ಎಂದು ಕಮೆಂಟಿಸಿದ್ದಾರೆ.
ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಸ್ಟಾರ್ ಆಲ್ ರೌಂಡರ್ ಜಿಮ್ಮಿ ನೀಶಾಮ್ ಸಹ ಟ್ಚೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಓಂಕಾರ್ ಮಾನಕಾಮೆ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟಿಗರನ್ನೂ ಬೆರಗುಗೊಳಿಸಿದ ಕಿರಣ್ ತಾರಲೇಕರ್‌ಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲೂ ಮಿರಿಮಿರಿ ಮಿಂಚುವ ಅವಕಾಶ ತಂದುಕೊಟ್ಟ ಕ್ಯಾಚ್ ಕಿರಣ ತಾರಲೇಕರ ಅವರಲ್ಲಿ ಅಪಾರ ಖುಷಿ, ಹುರುಪು ತಂದಿದೆ.
ಗರಗ ಕಲ್ಮಠದ ಶ್ರೀ ಚನ್ನಬಸವ ಸ್ವಾಮೀಜಿ ಅಂತ್ಯಕ್ರಿಯೆ ಇಂದು
https://pragati.taskdun.com/funeral-of-sri-channabasava-swamiji-of-garaga-kalmath-today/
*ಏರೋ ಇಂಡಿಯಾ ಏರ್ ಶೋಗೆ ಪ್ರಧಾನಿ ಮೋದಿ ಚಾಲನೆ; ಬಾನಂಗಳದಲ್ಲಿ ಕಣ್ಮನ ಸೆಳೆದ ಲೋಹದ ಹಕ್ಕಿಗಳ ಚಮತ್ಕಾರ*
https://pragati.taskdun.com/aero-india-show-2023pm-narendra-modiyalahankabangalore/
ಬಿಜೆಪಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಬೆಳೆಯಲು ಬ್ರಾಹ್ಮಣ ಸಮಾಜವೇ ಕಾರಣ – ಅಭಯ ಪಾಟೀಲ
https://pragati.taskdun.com/brahmin-society-is-the-reason-why-bjp-has-grown-to-such-a-large-extent-abhay-patil/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ