ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕರ್ನಾಟಕ ವಿಧಾನಸಭಾ ಚುನಾವಣೆ-2023 ರ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಒಟ್ಟು 18 ವಿಧಾನ ಸಭಾ ಮತಕ್ಷೇತ್ರಗಳಿಗೆ 12 ಜನ ಚುನಾವಣಾ ವೆಚ್ಚ ವೀಕ್ಷಕರನ್ನು ಚುನಾವಣಾ ಆಯೋಗವು ನಿಯೋಜಿಸಿರುತ್ತದೆ.
ಭಾರತೀಯ ಕಂದಾಯ ಸೇವೆ(ಐ.ಆರ್.ಎಸ್)ಗೆ ಸೇರಿದ ಅಧಿಕಾರಿಗಳನ್ನು ಚುನಾವಣಾ ವೆಚ್ಚ ವೀಕ್ಷಕರಾಗಿ ನಿಯೋಜಿಸಲಾಗಿದೆ.
ಹದಿನೆಂಟು ಕ್ಷೇತ್ರಗಳ ಪೈಕಿ ಕೆಲವು ಕಡೆ ಎರಡು ಕ್ಷೇತ್ರಗಳಿಗೆ ಒಬ್ಬ ಅಧಿಕಾರಿಯನ್ನು ನೇಮಿಸಲಾಗಿರುತ್ತದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.
ಮತಕ್ಷೇತ್ರಗಳು ಹಾಗೂ ಚುನಾವಣಾ ವೆಚ್ಚ ವೀಕ್ಷಕರ ವಿವರ:
- ನಿಪ್ಪಾಣಿ-ತರುಣ ರೆಡ್ಡಿ ಗಂಗಿರೆಡ್ಡಿ
- ಚಿಕ್ಕೋಡಿ ಮತ್ತು ಅಥಣಿ ಕ್ಷೇತ್ರ: ಅರ್ನಬ್ ಸರ್ಕಾರ
- ಕಾಗವಾಡ- ಮತ್ತು ಕುಡಚಿ: ಚನಬಾಷಾ ಮೀರಾನ್
- ರಾಯಬಾಗ ಮತ್ತು ಹುಕ್ಕೇರಿ: ಸಿದ್ಧಾರ್ಥನ್ ಟಿ,
- ಅರಬಾವಿ: ಸುಮಂತ್ ಶ್ರೀನಿವಾಸ್ ಎ.ಎಸ್
- ಗೋಕಾಕ್: ಮಧುಕರ್ ಅವೆಸ್
- *ಯಮಕನಮರಡಿ: ರಾಕೇಶ್ ಜೆ. ರಾಣಾ
- ಬೆಳಗಾವಿ ಉತ್ತರ ಮತ್ತು ಬೆಳಗಾವಿ ದಕ್ಷಿಣ: ಅತುಲ್ ಕುಮಾರ್ ಪಾಂಡೆ
- ಬೆಳಗಾವಿ ಗ್ರಾಮೀಣ: ಸುಬೋಧ್ ಸಿಂಗ್
- ಖಾನಾಪುರ ಮತ್ತು ಕಿತ್ತೂರು: ಸಂಜೀತ ಸಿಂಗ್
- ಬೈಲಹೊಂಗಲ ಮತ್ತು ಸವದತ್ತಿ ಯಲ್ಲಮ್ಮ ಕ್ಷೇತ್ರ: ಯೋಗೇಶ್ ಯಾದವ್
- ರಾಮದುರ್ಗ ಮತ ಮತಕ್ಷೇತ್ರ: ಎಂ. ಎಝಿಲಾರಸನ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ