Kannada NewsKarnataka NewsLatest

*ಪೊಲೀಸ್ ಸಿಬ್ಬಂದಿ ಕಿರುಕುಳ; ಎಸ್ ಪಿ ಕಚೇರಿಯಲ್ಲೇ ಅತ್ಮಹತ್ಯೆಗೆ ಯತ್ನಿಸಿದ ಮಹಿಳೆ*

ಪ್ರಗತಿವಾಹಿನಿ ಸುದ್ದಿ; ದಾವಣಗೆರೆ: ಆಸ್ತಿ ವಿವಾದ ವಿಚಾರವಾಗಿ ಪೊಲೀಸ್ ಸಿಬ್ಬಂದಿ ಕಿರುಕುಳ ನೀಡಿತ್ತಿದ್ದಾರೆ ಎಂದು ಆರೋಪಿ ಮಹಿಳೆಯೊಬ್ಬರು ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ವೇದಾವತಿ (55) ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ. ಚನ್ನಗಿರಿ ತಾಲೂಕಿನ ಶಿವಕುಳೆನೂರು ಗ್ರಾಮದ ಮಹಿಳೆ. ಸಧ್ಯ ಅಸ್ವಸ್ಥಗೊಂಡಿರುವ ವೇದಾವತಿ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಮಹಿಳೆ ಸಾಗುವಳಿ ಮಾಡುತ್ತಿದ್ದ 5 ಎಕರೆ ಜಮೀನು ವಿಚಾರವಾಗಿ ಮಹಿಳೆ ವೇದಾವತಿ ಹಾಗೂ ಸಂಬಂಧಿಯಾದ ಪೊಲೀಸ್ ಕಾನ್ಸ್ ಟೇಬಲ್ ವೆಂಕಟೇಶ್ ನಡುವೆ ಜಗಳವಾಗಿದೆ. ಪೊಲೀಸ್ ಪ್ರಭಾವ ಬಳಸಿ ನಮಗೆ ಜಮೀನಿನಲ್ಲಿ ಬಿತ್ತನೆಗೂ ಬಿಡುತ್ತಿಲ್ಲ ಎಂದು ಮಹಿಳೆ ಎಸ್ ಪಿ ಬಳಿ ದೂರು ನೀಡಲು ಹೋಗಿದ್ದಾರೆ. ಈ ವೇಳೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಮಹಿಳೆ ಎಸ್ ಪಿ ಕಚೇರಿಗೆ ಬರುವ ಮೊದಲೇ ವಿಷ ಸೇವಿಸಿದ್ದರು ಎನ್ನಲಾಗುತ್ತಿದೆ. ಇನ್ನು ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ದಾವಣಗೆರೆ ಎಸ್ ಪಿ ಡಾ.ಕೆ.ಅರುಣ್ ಭರವಸೆ ನೀಡಿದ್ದಾರೆ.

Related Articles

Back to top button