Belagavi NewsBelgaum News

*ಕನ್ನಡ ರಾಜ್ಯೋತ್ಸವದಂದು ಮತ್ತೆ ಕಿರಿಕ್ ಗೆ ಮುಂದಾದ MES: ಕರಾಳ ದಿನ ಆಚರಣೆ ಮೆರವಣಿಗೆಗೆ ನಿರ್ಧಾರ*

ಪ್ರಗತಿವಾಹಿನಿ ಸುದ್ದಿ: ನಾಡದ್ರೋಹಿ ಎಂಇಎಸ್ ಗಡಿಯಲ್ಲಿ ಮತ್ತೆ ಕ್ಯಾತೆ ತೆಗೆಯಲು ಮುಂದಾಗಿದೆ. ಕರ್ನಾಟಕ ರಾಜ್ಯೋತ್ಸವದ ದಿನ ಕನ್ನಡ ರಾಜ್ಯೋತ್ಸವಕ್ಕೆ ಪ್ರತಿಯಾಗಿ ಕರಾಳ ದಿನ ಆಚರಣೆ ನಡೆಸಲು ಸಿದ್ಧತೆ ನಡೆಸಿದೆ.

ಬೆಳಗಾವಿಯ ಮರಾಠಾ ಮಂಡಲ ಕಾರ್ಯಾಲಯದಲ್ಲಿ ಸಭೆ ನಡೆಸಿರುವ ಎಂಇಎಸ್, ನವೆಂಬರ್ 1 ಕರ್ನಾಟಕ ರಾಜ್ಯೋತ್ಸವದ ದಿನದಂದು ಕರಾಳ ದಿನ ಆಚರಣೆ ಮೆರವಣಿಗೆ ನಡೆಸಲು ನಿರ್ಧರಿಸಿದೆ. ಕರಾಳ ದಿನ ಆಚರಣೆಗೆ ಬೆಳಗಾವಿ ಜಿಲ್ಲಾಡಳಿತ ಅವಕಾಶ ನೀಡಿಲ್ಲ. ಆದರೂ ಕರಾಳ ದಿನ ಆಚರಣೆ ಮ್ಡಿಯೇಸಿದ್ಧ ಎಂದು ಎಂಇಎಸ್ ಮುಖಂಡರು ಸಭೆಯಲ್ಲಿ ತೀರ್ಮಾನಿಸಿದ್ದಾರೆ.

ನ.1 ಕನ್ನಡ ರಾಜ್ಯೋತ್ಸವದಿನದಂದು ಬೆಳಗಾವಿಯಲ್ಲಿ ಈಬಾರಿ ಅದ್ದೂರಿ ರಾಜ್ಯೋತ್ಸವ ಆಚರಣೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸಿದ್ದು, ಯಾವುದೇ ಕಾರಣಕ್ಕೂ ಕರಾಳ ದಿನ ಆಚರಣೆ, ಮೆರವಣಿಗೆಗೆ ಅವಕಾಶ ನೀಡಲ್ಲ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದ್ದರು.

ಎಂಇಎಸ್ ಇಂತಹ ಪ್ರಯತ್ನ ನಡೆಸಿದರೆ ಎಂಇಎಸ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪೊಲೀಸರು ಕ್ರಮ ಜರುಗಿಸಲಿದ್ದಾರೆ ಎಂದು ಹೇಳಿದ್ದರು. ಜಿಲ್ಲಾಧಿಕರಿಗಳ ಹೇಳಿಕೆ ಬೆನ್ನಲ್ಲೇ ಎಂಇಎಸ್ ಪುಂಡರು ಸಭೆ ನಡೆಸಿ ಕರಾಳ ದಿನ ಆಚರಣೆಗೆ ಸಿದ್ಧತೆ ನಡೆಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button