ಪ್ರಗತಿವಾಹಿನಿ ಸುದ್ದಿ; ಬಳ್ಳಾರಿ: ರಾಜ್ಯದಲ್ಲಿ ಕೊರೊನಾ ಸೋಂಕಿನ ಸಂಖ್ಯೆ ಹೆಚ್ಚುತ್ತಿದ್ದು, ಈ ನಡುವೆ ಬಳ್ಳಾರಿಯಲ್ಲಿ ಇಂದು ಮತ್ತೊಬ್ಬ ವ್ಯಕ್ತಿಯಲ್ಲಿ ಕೊರೊನಾ ಸೋಂಕು ಧೃಡಪಟ್ಟಿದೆ.
ಹೊಸಪೇಟೆ ಮೂಲದ ಒಂದೇ ಕುಟುಂಬದ ಮೂವರಲ್ಲಿ ಈ ಹಿಂದೆ ಕೊರೊನಾ ಸೋಂಕು ಪತ್ತೆಯಾಗಿತ್ತು. ಈ ಕುಟುಂಬದವರ ಜತೆ ಈಗ ಸೋಂಕು ಪತ್ತೆಯಾದ ವ್ಯಕ್ತಿ ಸಂಪರ್ಕದಲ್ಲಿದ್ದ. ಹೀಗಾಗಿ ಆತನ ರಕ್ತ ಪರೀಕ್ಷೆ ನಡೆಸಲಾಗಿದ್ದು, ಇಂದು ಬಂದ ವರದಿ ಪ್ರಕಾರ ಆತನಲ್ಲಿ ಸೋಂಕು ದೃಢವಾಗಿದೆ.
ಹೊಸಪೇಟೆಯ ಕುಟುಂಬದ ಸೋಂಕಿತ ವ್ಯಕ್ತಿ 7 ಜನರ ಜೊತೆ ನೇರ ಸಂಪರ್ಕ ಹೊಂದಿದ್ದರು. ಹೀಗಾಗಿ ಆ ಏಳು ಜನರನ್ನು ಈಗಾಗಲೇ ಐಸೋಲೇಷನ್ ಮಾಡಲಾಗಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇಂದು ಏಳು ಜನರ ರಕ್ತ ಪರೀಕ್ಷೆ ವರದಿ ಬಂದಿದ್ದು, ಏಳರಲ್ಲಿ ಒಬ್ಬರಿಗೆ ಸೋಂಕು ಧೃಡವಾಗಿದೆ. ಅಲ್ಲದೇ ಏಳು ಜನರು 21 ಜನರ ಜೊತೆಯಲ್ಲಿ ಸಂಪರ್ಕ ಹೊಂದಿದ್ದು, ಆ 21 ಜನರನ್ನು ಸಹ ಹೋಮ್ ಕ್ವಾರಂಟೈನ್ ಮಾಡಲಾಗಿದೆ. ಅವರ ರಕ್ತದ ಮಾದರಿಯನ್ನು ಸಹ ಜಿಲ್ಲಾಡಳಿತ ಪರೀಕ್ಷೆಗೆ ಕಳಿಸಿದ್ದು, ರಕ್ತದ ಪರೀಕ್ಷೆಯ ವರದಿ ಬರಬೇಕಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ