ಕುಡಿದ ಅಮಲಿನಲ್ಲಿ ಬಣವೆಗೆ ಬಿತ್ತು ಬೆಂಕಿ

ಪ್ರಗತಿವಾಹಿನಿ ಸುದ್ದಿ; ಬಳ್ಳಾರಿ: ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಮಾಡಿಕೊಟ್ಟ ಬೆನ್ನಲ್ಲೇ ಮದ್ಯ ಪ್ರಿಯರು ಮದ್ಯದಂಗಡಿ ಮುಂದೆ ಸರತಿ ಸಾಲಿನಲ್ಲಿ ನಿಂತು ಮದ್ಯ ಖರೀದಿಸಿ, ಮನಸೋ ಇಚ್ಛೆ ಕುಡಿಯುತ್ತಿದ್ದಾರೆ. ಸಿಕ್ಕಸಿಕ್ಕ ಸ್ಥಳದಲ್ಲಿ ಮದ್ಯಪಾನ ಮಾಡಿ ಅತಿರೇಕ ಮೆರೆಯುತ್ತಿದ್ದಾರೆ. ಕುಡುಕರು ಮಾಡಿದ ಎಡವಟ್ಟಿನಿಂದಾಗಿ ಮೂರು ಬಣವೆಗಳು ಹೊತ್ತಿ ಉರಿದಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ.

ಕಪ್ಪಗಲ್ಲು ರಸ್ತೆಯ ಡ್ರೀಮ್ ವರ್ಲ್ಡ್ ಶಾಲೆ ಬಳಿಯ ಹೊಲದಲ್ಲಿರುವ ಮೂರು ಬಣವೆಗಳಿಗೆ ಬೆಂಕಿ ಬಿದ್ದಿದೆ. ಸುರೇಶ್ ಎಂಬುವವರ ಮೂರು ಬಣವೆಗಳಿಗೆ ಬೆಂಕಿಬಿದ್ದಿದ್ದು, ದನದ ಕೊಟ್ಟಿಗೆಯಲ್ಲಿದ್ದ 12 ಎಮ್ಮೆಗಳ ಪೈಕಿ ಎರಡು ಎಮ್ಮೆಗಳ ಮೈಗೆ ಬೆಂಕಿ ತಗುಲಿದ್ದು, ಸಣ್ಣಪುಟ್ಟ ಗಾಯಗಳಾಗಿವೆ.

Home add -Advt

ಇಂದು ಬೆಳಗಿನ ಜಾವ ಈ ಘಟನೆ ನಡೆದಿದ್ದು, ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದವರು ಬಂದು ಬೆಂಕಿ ನಂದಿಸಿದ್ದಾರೆ. ಕುಡಿದ ಅಮಲಿನಲ್ಲಿದ್ದವರು ಸಿಗರೇಟ್ ತುಂಡು ಬೀಸಾಡಿದ್ದರಿಂದ ಬಣವೆಗೆ ಬೆಂಕಿ ತಗುಲಿದೆ.

Related Articles

Back to top button