Kannada NewsKarnataka NewsLatest

*ಬೆಳ್ಳಂ ಬೆಳಿಗ್ಗೆ ಭೀಕರ ಬೆಂಕಿ ಅವಘಡ: 19 ಇವಿ ಬೈಕ್ ಗಳು ಸುಟ್ಟು ಭಸ್ಮ*

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೆಳಂಬೆಳಿಗ್ಗೆ ಭೀಕಪ ಬೆಂಕಿ ಅವಘಡ ಸಂಭವಿಸಿದೆ. 19 ಇವಿ ವಾಹನಗಳು ಸಂಪೂರ್ಣ ಸುಟ್ತು ಕರಕಲಾಗಿವೆ.

ಬೆಂಗಳೂರಿನ ಯಲಚೇಹಳ್ಳಿಯ ಕಮಿರ್ಷಿಯ ಕಟ್ಟಡದಲ್ಲಿ ಈ ಅವಘಡ ಸಂಭವಿಸಿದೆ. ಮೆಟ್ರ‍ೋ ನಿಲ್ದಾಣದ ಬಳಿಯೇ ಈ ಘಟನೆ ನಡೆದಿದೆ. ಇವಿ ದ್ವಿಚಕ್ರವಾಹನ ಪ್ಲಗ್ ಪಾಯಿಂಟ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೆಲವೇ ಸಮಯದಲ್ಲಿ ಬೆಂಕಿಯ ಕೆನ್ನಾಲಿಗೆಗೆ ಎಲೆಕ್ಟ್ರಿಕ್ ಬೈಕ್ ಗಳು ಹೊತ್ತಿ ಉರಿದಿವೆ.

ಬೆಂಕಿ ಅವಘಡಕ್ಕೆ 6 ಸಿಲಿಂಡರ್ ಗಳು ಕೂಡ ಸ್ಫೋಟಗೊಂಡಿದ್ದು, ಸುತ್ತಮುತ್ತಲ ಕಟ್ಟಡಗಳಿಗೂ ಬೆಂಕಿ ವ್ಯಾಪಿಸಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. 19 ಬೈಕ್ ಗಳು ಸುಟ್ಟು ಕರಕಲಾಗಿದ್ದು, ಅಪಾರ ಪ್ರಮಾಣ ಹಾನಿಯಾಗಿದೆ.

Home add -Advt

Related Articles

Back to top button