Kannada NewsKarnataka NewsLatest
*7.11 ಕೋಟಿ ದರೋಡೆ ಪ್ರಕರಣ: 9 ಆರೋಪಿಗಳು ಅರೆಸ್ಟ್; ಮತ್ತೆ 47 ಲಕ್ಷ ಹಣ ಜಪ್ತಿ*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನ ಡೇರಿ ಸರ್ಕಲ್ ಬಳಿ ಹಾಡಹಗಲೇ 7.11 ಕೋಟಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಪೊಲೀಸರು 9 ಆರೋಪಿಗಳನ್ನು ಬಂಧಿಸಿದ್ದಾರೆ, ಕುಪ್ಪಂ ಬಳಿ ಮನೆಯಲ್ಲಿ 47 ಲಕ್ಷ ಹಣವನ್ನು ಜಪ್ತಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ನಡೆದ ದರೋಡೆ ಪ್ರಕರಣದಲ್ಲಿ ಈವರೆಗೆ ಒಟ್ಟು 9 ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಬಂಧಿತನಾಗಿದ್ದ ನವೀನ್ ಎಂಬಾತ ಹೈದರಾಬಾದ್ ನ ಲಾಡ್ಜ್ ನಲ್ಲಿ 53 ಲಕ್ಷ ಹಣದ ಜೊತೆಗೆ ಸಿಕ್ಕಿಬಿದ್ದಿದ್ದ. ವಿಚಾರಣೆ ವೇಳೆ ಆತ ನೀಡಿದ ಮಾಹಿತಿ ಮೇರೆಗೆ ನಿನ್ನೆ ರಾತ್ರಿ ಕುಪ್ಪಂ ನ ಮನೆಯೊಂದರಲ್ಲಿ 47 ಲಕ್ಷ ಹಣವನ್ನು ಜಪ್ತಿ ಮಾಡlaagide.
ಈ ಮೂಲಕ ಬಂಧಿತರಿಂದ 7.01 ಕೋಟಿ ಹಣ ಜಪ್ತಿ ಮಾಡಲಾಗಿದ್ದು, ಉಳಿದ 10 ಲಕ್ಷ ರೂಪಾಯಿ ಬಗ್ಗೆ ತನಿಖೆ ಮುಂದುವರೆದಿದೆ.


