
ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನಲ್ಲಿ ಹಾಡಹಗಲೇ 7.11 ಕೋಟಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದಲ್ಲಿ ಭಾಗಿಯಾಗಿದ್ದ ಕಾನ್ಸ್ ಟೇಬಲ್ ಅಣ್ಣಪ್ಪ ನಾಯ್ಕ್ ನನ್ನು ಅಮಾನತುಗೊಳಿಸಿಇ ಆದೇಶ ಹೊರಡಿಸಲಾಗಿದೆ.
ಗೋವಿಂದಪುರ ಠಾಣೆಯ ಕಾನ್ಸ್ ಟೇಬಲ್ ಆಗಿದ್ದ ಅಣ್ಣಪ್ಪ ನಾಯ್ಕ್ ನನ್ನು ಅಮಾನತುಗೊಳಿಸಿ ಪೂರ್ವ ವಿಭಾಗದ ಡಿಸಿ ದೇವರಾಜ್ ಆದೇಶ ಹೊರಡಿಸಿದ್ದಾರೆ. ದರೋಡೆ ಪ್ರಕರಣದಲ್ಲಿ ಕಾನ್ಸ್ ಟೇಬಲ್ ಅಣ್ಣಪ್ಪ ಪ್ರಮುಖ ಆರೋಪಿಯಾಗಿದ್ದಾನೆ. ಈಗಾಗಲೆ ಅಣ್ಣಪ್ಪ ಸೇರಿ 7 ಆರೋಪಿಗಳನ್ನು ಬಂಧಿಸಲಾಗಿದ್ದು, 6:30 ಕೋಟಿ ಹಣ ರಿಕವರಿ ಮಾಡಲಾಗಿದೆ.



