Kannada NewsKarnataka NewsLatest
BREAKING: ಇಂಜಿನಿಯರಿಂಗ್ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ಕಾಲೇಜಿನ ವಾಶ್ ರೂಮ್ ಗೆ ಎಳೆದೊಯ್ದು ಕೃತ್ಯ

ಪ್ರಗತಿವಾಹಿನಿ ಸುದ್ದಿ: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಡೀ ರಾಜ್ಯವೇ ಬೆಚ್ಚಿ ಬೀಳಿಸುವಂತಹ ಪೈಶಾಚಿಕ ಕೃತ್ಯ ನಡೆದಿದೆ. ವಿದ್ಯಾರ್ಥಿನಿ ಮೇಲೆ ಇಂಜಿನಿಯರಿಂಗ್ ಕಾಲೇಜಿನಲ್ಲಿಯೇ ಅತ್ಯಾಚಾರ ನಡೆಸಿರುವ ಘಟನೆ ನಡೆದಿದೆ.
ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿಯನ್ನು ವಾಶ್ ರೂಂ ಗೆ ಎಳೆದೊಯ್ದು ಕಾಮುಕ ಅತ್ಯಾಚಾರವೆಸಗಿದ್ದಾನೆ. ಸೀನಿಯರ್ ವಿದ್ಯಾರ್ಥಿನಿ ಮೇಲೆ ಜ್ಯೂನಿಯರ್ ವಿದ್ಯಾರ್ಥಿಯಿಂದ ಈ ಕೃತ್ಯ ನಡೆದಿದೆ.
ಸಂತ್ರಸ್ತೆ ಹಾಗೂ ಆರೋಪಿ ಇಬ್ಬರೂ ಒಂದೇ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳು. ಸಂತ್ರಸ್ತೆ ದೂರಿನ ಮೇಳೆ ಹನುಮಂತನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.