
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಶಾಲೆಗಳ ದಸರಾ ರಜೆ ವಿಸ್ತರಣೆಯಾಗುತ್ತಾ? ಈ ಕುರಿತ ಆದೇಶಕ್ಕೆ ಶನಿವಾರ ಮುಖ್ಯಮಂತ್ರಿಗಳು ಸಹಿ ಹಾಕುತ್ತಾರಾ?
ಅಂತಹ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿ ಹರಿದಾಡುತ್ತಿದೆ. ದಸರಾ ರಜೆಯನ್ನು ಅಕ್ಟೋಬರ್ 31ರ ವರೆೆಗೆ ವಿಸ್ತರಿಸುವ ಆದೇಶಕ್ಕೆ ಶನಿವಾರ ಸಿಎಂ ಸಹಿ ಹಾಕಲಿದ್ದಾರೆ ಎನ್ನುವ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಶುಕ್ರವಾರ ಸಂಜೆಯಿಂದ ಹರಿದಾಡುತ್ತಿದೆ.
ದಸರಾ ರಜೆಯನ್ನು ಈ ತಿಂಗಳಾಂತ್ಯದವರೆಗೂ ವಿಸ್ತರಿಸುವಂತೆ ರಾಜ್ಯ ಸರಕಾರದ ಮುಂದೆ ಹಲವರು ಮನವಿ ಮಾಡಿದ್ದಾರೆ. ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಶಿಕ್ಷಣ ಸಚಿವರಿಗೆ ಪತ್ರವನ್ನು ನೀಡಿದ್ದಾರೆ. ಸರಕಾರಿ ನೌಕರರ ಸಂಘ ಮನವಿ ಸಲ್ಲಿಸಿದೆ. ಎಲ್ಲೆಡೆಯಿಂದ ಈ ಕುರಿತು ಕೂಗು ಎದ್ದಿದೆ.
ಆದರೆ ರಾಜ್ಯ ಸರಕಾರದಿಂದ ಈ ಬಗ್ಗೆ ಈವರೆಗೂ ಆದೇಶ ಹೊರಬಿದ್ದಿಲ್ಲ. ಶನಿವಾರ ಅಂತ ಆದೇಶಕ್ಕೆ ಮುಖ್ಯಮಂತ್ರಿಗಳು ಸಹಿ ಹಾಕಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಈ ಕುರಿತು ಪ್ರಗತಿವಾಹಿನಿ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಅವರನ್ನು ಸಂಪರ್ಕಿಸಿದಾಗ, ರಜೆ ವಿಸ್ತರಿಸುವ ಆದೇಶಕ್ಕೆ ಮುಖ್ಯಮಂತ್ರಿಗಳು ಶನಿವಾರ ಸಹಿ ಮಾಡಲಿದ್ದಾರೆ ಎನ್ನುವುದು ನಿಖರ ಮಾಹಿತಿ ಅಲ್ಲ. ರಜೆ ವಿಸ್ತರಿಸುವಂತೆ ನಾವು ಪತ್ರ ನೀಡಿದ್ದೇವೆ. ಆದರೆ ರಜೆಯನ್ನು ವಿಸ್ತರಿಸಲು ಸರಕಾರ ಸಮ್ಮತಿ ನೀಡಿಲ್ಲ. ಅಂತಹ ಆದೇಶ ಹೊರಬೀಳುವ ಸಾಧ್ಯತೆ ಇಲ್ಲ ಎಂದು ತಿಳಿಸಿದರು.
ಶಾಲೆಗಳ ದಸರಾ ರಜೆ ಒಂದು ತಿಂಗಳಿಗೆ ವಿಸ್ತರಣೆಯಾಗುತ್ತಾ?
https://pragati.taskdun.com/latest/will-dussehra-vacation-of-schools-be-extended-to-one-month/
ರಾಜ್ಯಾದ್ಯಂತ ಕಾಲೇಜುಗಳಿಗೆ ರಜೆ ವಿಸ್ತರಣೆ
https://pragati.taskdun.com/latest/extension-of-leave-to-colleges-across-the-state/