ಗುಪ್ತಾಂಗದಲ್ಲಿ ಡ್ರಗ್ಸ್ ಸಾಗಿಸುತ್ತಿದ್ದ ಮಹಿಳೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಹಿಳೆಯೊಬ್ಬಳು ತನ್ನ ಗುಪ್ತಾಂಗದಲ್ಲಿ ಭಾರಿ ಪ್ರಮಾಣದ ಡ್ರಗ್ಸ್ ಸಾಗಿಸಲು ಹೋಗಿ ಸಿಕ್ಕಿಬಿದ್ದ ಘಟನೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಬರೋಬ್ಬರಿ 8.31 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನ ಮಹಿಳೆ ತನ್ನ ಗುಪ್ತಾಂಗದಲ್ಲಿಟ್ಟು ಸಾಗಿಸುತ್ತಿದ್ದಳು. ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಈಕೆಯನ್ನು ವಶಪಡಿಸಿಕೊಂಡಿದ್ದಾರೆ. ಮಹಿಳೆಯೊಬ್ಬಳು ದೇಹದೊಳಗೆ ಇಷ್ಟೊಂದು ದೊಡ್ಡ ಪ್ರಮಾಣದ ಡ್ರಗ್ಸ್ ಬಚ್ಚಿಟ್ಟುಕೊಂಡು ಸಿಕ್ಕಿಬಿದ್ದಿರೋದು ಇದೇ ಮೊದಲು.

ಹರ್ರೆರಾ ವ್ಯಾಲೆಂಜುಲಾ ಡಿ ಲೋಪೆಜ್ ಸಿಲ್ವಿಯಾ ಗ್ವಾಡಾಲುಪೆ ಬಂಧಿತ ವಿದೇಶಿ ಮಹಿಳೆ. ಈಕೆ 150 ಕೊಕೇನ್ ಮಾತ್ರೆಗಳನ್ನು ಟ್ಯೂಬ್ ರೀತಿ ಮಾಡಿ ಗಪ್ತಾಂಗದಲ್ಲಿ ಇಟ್ಟುಕೊಂಡಿದ್ದಳು. ಇಥಿಯೋಪಿಯ ಏರ್ ಲೈನ್ಸ್ ET690 ಮೂಲಕ ಅಡಿಸ್ ಅಬಾಬದಿಂದ ಬೆಂಗಳೂರಿಗೆ ಬಂದಿದ್ದಳು. ಕೆಂಪೇಗೌಡ ಇಂಟರ್ ನ್ಯಾಷನಲ್ ಏರ್‌ಪೋರ್ಟ್‌ನಲ್ಲಿ ಕಸ್ಟಮ್ಸ್ ಅಧಿಕಾರಿಗಳ ತಪಾಸಣೆ ವೇಳೆ ಕೊಕೇನ್ ಪತ್ತೆಯಾಗಿದೆ.

ಸಣ್ಣ ಸಣ್ಣ ಮಾತ್ರೆಗಳ ರೀತಿಯಲ್ಲಿ ಅದಕ್ಕೆ ಪ್ಲಾಸ್ಟಿಕ್ ರೀತಿಯ ವಸ್ತುವಿನಿಂದ ಕವರ್ ಮಾಡಿ, ಕೊಕೇನ್ ಶೇಖರಣೆ ಮಾಡಿಟ್ಟುಕೊಂಡಿದ್ದಳು. 1.385 ಗ್ರಾಂ ಕೊಕೇನ್ ಮಹಿಳೆಯ ಗುಪ್ತಾಂಗದಲ್ಲಿ ಪತ್ತೆಯಾಗಿದ್ದು, ಎನ್ ಡಿ ಪಿಎಸ್ ಆಕ್ಟ್ ಅಡಿ ಈ ವಿದೇಶಿ ಮಹಿಳೆಯನ್ನು ಬಂಧಿಸಲಾಗಿದೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button