ಟೆಕ್ ಸಮ್ಮಿಟ್ ನಲ್ಲಿ ಸಿಎಂ ಸಿದ್ದರಾಮಯ್ಯ ಭಾಷಣದ ಹೈಲೈಟ್ಸ್
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜಧಾನಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೆಂಗಳೂರು ಟೆಕ್ ಸಮ್ಮೇಳನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಐ.ಟಿ ಕ್ಷೇತ್ರದ ನಕ್ಷೆಯಲ್ಲಿ ಕರ್ನಾಟಕ ಬೀರಿರುವ ಪರಿಣಾಮ ಅಸಾಮಾನ್ಯ. 5500 ಐಟಿ/ ಐಇ ಟಿಎಸ್ ಕಂಪನಿಗಳು, 750 ಬಹುರಾಷ್ಟ್ರೀಯ ಕಂಪನಿಗಳು ಇರುವ ರಾಜ್ಯವು ದೇಶದ ರಫ್ತಿಗೆ ಸುಮಾರು 85 ಬಿಲಿಯ ನ್ ಯು.ಎಸ್. ಡಾಲರ್ ನ ಕೊಡುಗೆಯನ್ನು ನೀಡುತ್ತಿದೆ ಎಂದು ಹೇಳಿದರು.
ಬೆಂಗಳೂರು ಟೆಕ್ ಸಮ್ಮಿಟ್ ನಲ್ಲಿ ಸಿಎಂ ಸಿದ್ದರಾಮಯ್ಯ ಭಾಷಣದ ಹೈಲೈಟ್ಸ್ ಇಲ್ಲಿದೆ.
1.ದೇಶದಲ್ಲಿಯೇ ತಂತ್ರಜ್ಞಾನ ಮತ್ತು ನಾವೀನ್ಯತೆಯಲ್ಲಿ ಮುಂಚೂಣಿಯಲ್ಲಿರುವ ರಾಜ್ಯದ ಮುಖ್ಯಮಂತ್ರಿಯಾಗಿ ನಿಮ್ಮನ್ನೆಲ್ಲಾ ಉದ್ದೇಶಿಸಿ ಮಾತನಾಡುವುದು ನನಗೆ ಸಿಕ್ಕ ಗೌರವ ಎಂದು ಭಾವಿಸಿದ್ದೇನೆ.
- ಐ.ಟಿ ಕ್ಷೇತ್ರದ ನಕ್ಷೆಯಲ್ಲಿ ಕರ್ನಾಟಕ ಬೀರಿರುವ ಪರಿಣಾಮ ಅಸಾಮಾನ್ಯ. 5500 ಐಟಿ/ ಐಇ ಟಿಎಸ್ ಕಂಪನಿಗಳು, 750 ಬಹುರಾಷ್ಟ್ರೀಯ ಕಂಪನಿಗಳು ಇರುವ ರಾಜ್ಯವು ದೇಶದ ರಫ್ತಿಗೆ ಸುಮಾರು 85 ಬಿಲಿಯ ನ್ ಯು.ಎಸ್. ಡಾಲರ್ ನ ಕೊಡುಗೆಯನ್ನು ನೀಡುತ್ತಿದೆ.
3.ಐ.ಟಿ ಕ್ಷೇತ್ರ ವು ಸುಮಾರು 12 ಲಕ್ಷ ವೃತ್ತಿಪರರಿಗೆ ನೇರ ಉದ್ಯೋಗ ಅವಕಾಶಗಳನ್ನು ಹಾಗೂ 31 ಲಕ್ಷ ಪರೋಕ್ಷ ಉದ್ಯೋಗಗಳನ್ನು ಒದಗಿಸಿದೆ. ದೇಶದ ಒಟ್ಟು ಸಾಫ್ಟ್ವೇರ್ ರಫ್ತಿನ ಪೈಕಿ ಕರ್ನಾಟಕದ ಪಾಲು ಶೇ 40 ರಷ್ಟಿದ್ದು, ಜಾಗತಿಕ ಐಟಿ ದಿಗ್ಗಜ ಎಂಬ ಸ್ಥಾನವನ್ನು ಗಿಟ್ಟಿಸಿಕೊಂಡಿದೆ.
- ಕರ್ನಾಟಕದ ರಾಜಧಾನಿ ಮತ್ತು ದೇಶದ ಸಿಲಿಕಾನ್ ವ್ಯಾಲಿ ಬೆಂಗಳೂರು ಹಿಂದಿನಿಂದಲೂ ಪ್ರಗತಿಯ ಸಂಕೇತವಾಗಿದೆ.ಬದಲಾಗುತ್ತಿರುವ ಕಾಲಕ್ಕಷ್ಟೇ ತಕ್ಕಂತೆ ತಾನೂ ಬದಲಾಗಿ ತಂತ್ರಜ್ಞಾನ ಮತ್ತು ನಾವೀನ್ಯತೆಯಲ್ಲಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ.
- ವಿಭಿನ್ನ ಸಂಸ್ಕೃತಿ, ಯೋಚನೆ ಹಾಗೂ ಆಶಯಗಳಿಗೆ ತವರೂರಾಗಿರುವ ಬೆಂಗಳೂರಿನ ನಾವೀನ್ಯತೆಗೆ ಇದೇ ವಿಭಿನ್ನತೆ ಇಂಬು ನೀಡಿದೆಯಲ್ಲದೆ ಜಗತ್ತಿನ ಅತಿ ದೊಡ್ಡ ಸವಾಲುಗಳಿಗೆ ಪರಿಹಾರವನ್ನು ಒದಗಿಸಿದೆ.ಸ್ಟಾರ್ಟ್ ಅಪ್ ಬ್ಲಿಂಕ್ ನ ಜಾಗತಿಕ ಸ್ಟಾ ರ್ಟ್ ಅಪ್ ಇಕೋಸಿಸ್ಟಮ್ ಸೂಚ್ಯಂಕ ದಲ್ಲಿ ಕರ್ನಾಟಕ 8 ನೇ ಸ್ಥಾನದಲ್ಲಿದೆ.
- ನಮ್ಮ ರಾಜ್ಯವು ಜಾಗತಿಕ ಸಾಮರ್ಥ್ಯ ಕೇಂದ್ರಗಳ ಪೈಕಿ ಅತ್ಯಂತ ಹೆಚ್ಚು ಜನ ಭೇಟಿ ನೀಡುವ ಗಮ್ಯವಾಗಿದೆ. ಭಾರತದ ಶೇ 40 ರಷ್ಟು ಜಿಸಿಸಿ ಗಳಿಗೆ ಕರ್ನಾಟಕ ಆತಿಥ್ಯ ನೀಡಿದೆ. ಡಿಜಿಟಲ್ ಪ್ರತಿಭೆಯುಳ್ಳ ಸಂಪನ್ಮೂಲ, ನಾವೀನ್ಯತೆ ಹಾಗೂ ಸ್ಟಾರ್ಟ್ ಅಪ್ ಇಕೋಸಿಸ್ಟಮ್ ಹಾಗೂ ಪೂರಕ ನೀತಿಯ ವಾತಾವರಣ ಜಿಸಿಸಿ ಬೆಳವಣಿಗೆಗೆ ಒತ್ತು ನೀಡಿದೆ.
- ನೀತಿ ಆಯೋಗದ ಭಾರತ ಸೂಚ್ಯಂಕ ದಲ್ಲಿ ಕರ್ನಾಟಕ ಸತತ ಮೂರು ಬಾರಿ ಮೇಲ್ಪಂಕ್ತಿಯನ್ನು ಕಾಯ್ದುಕೊಂಡಿದೆ ಎನ್ನುವುದು ನಮಗೆ ಹೆಮ್ಮೆಯ ಸಂಗತಿ. ಡಿಪಿಐಐಟಿ ಶ್ರೇಯಾಂಕದಲ್ಲಿ ಅತ್ಯುತ್ತಮ ಪರ್ಫಾರ್ಮರ್ ಎಂಬ ಬಿರುದೂ ಪಡೆದುಕೊಂಡಿದೆ. ಉದ್ಯಮ ಮತ್ತು ನಾವೀನ್ಯತೆಯ ಬಗ್ಗೆ ನಮಗಿರುವ ಬದ್ಧತೆಗೆ ಈ ಎಲ್ಲಾ ಬಿರುದುಗಳು ಸಾಕ್ಷಿಯಾಗಿವೆ
8.ಕರ್ನಾಟಕ ಐ.ಟಿ ಕ್ಷೇತ್ರ ಮಾತ್ರವಲ್ಲದೇ ಹೂಡಿಕೆ ಮತ್ತು ಅಭಿವೃದ್ಧಿಗೂ ಬೇಡಿಕೆಯುಳ್ಳ ಗಮ್ಯವೆಂದು ಗುರುತಿಸಲ್ಪಟ್ಟಿದೆ
9.ಹೂಡಿಕೆ, ಪ್ರತಿಭೆ ಹಾಗೂ ಅವಕಾಶಗಳನ್ನು ಆಕರ್ಷಿಸುವ ಇಕೋಸಿಸ್ಟಮ್ ಸೃಷ್ಟಿ ಸಲು ನಮ್ಮ ಸರ್ಕಾರ ಗಮನ ವಹಿಸಿದೆ. ಅಭಿವೃದ್ಧಿ ಹೊಂದುವ ನಾವೀನ್ಯತಾ ಹಾಗೂ ಬ್ಯುಸಿನೆಸ್ ಗಳಿಗೆ ಎಂಡ್ ಟು ಎಂಡ್ ಇಕೋಸಿಸ್ಟಮ್ ನ ಹಬ್ ಎಂದು ಕರ್ನಾಟಕ ಗುರುತಿಸಿಕೊಳ್ಳಬೇಕು ಎನ್ನುವುದು ನಮ್ಮ ಆಶಯ.
- ನಮ್ಮ ಬ್ಯುಸಿ ನೆಸ್ ಪರವಾದ ನೀತಿಗಳು ನಿಯಂತ್ರಣ ಪ್ರಕ್ರಿಯೆಗಳನ್ನು ಸುಲಭಸಾಧ್ಯವಾಗಿಸುವತ್ತ ನಾವು ಬದ್ಧರಾಗಿದ್ದೇವೆ. ಅಫಿಡವಿಟ್ ಆಧಾರಿತ ತೀರುವಳಿಯಿಂದ ಹಿಡಿದು ಭೂ ಸುಧಾರಣೆ, ಕೇಂದ್ರೀಯ ಪರಿಶೀಲನಾ ವ್ಯವಸ್ಥೆ ಮತ್ತು ಏಕಗವಾಕ್ಷಿ ತೀರುವಳಿ ಗಳವರೆಗೆ ಪ್ರತಿ ಹೆಜ್ಜೆಯನ್ನೂ ಕೈಗಾರಿಕಾ ಸ್ನೇಹಿ ವಾತಾವರಣ ಸೃಷ್ಟಿ ಸುವತ್ತ ಗುರಿಯಾಗಿಸಿಕೊಂಡಿದೆ.
- ಪ್ರಗತಿಯತ್ತ ಮುಖ ಮಾಡಲು ಪ್ರತಿ ಕ್ಷೇತ್ರಕ್ಕೆ ನಿರ್ಧಿಷ್ಟ ನೀತಿಗಳನ್ನು ರೂಪಿಸುವಲ್ಲಿ ನಮ್ಮ ರಾಜ್ಯ ಸದಾ ಮುಂಚೂಣಿಯಲ್ಲಿದೆ. ಈ ನೀತಿಗಳು ರಾಜ್ಯದ ಪ್ರಗತಿಯನ್ನು ರೂಪಿಸಲೂ ಮಹತ್ವದ ಪಾತ್ರ ವಹಿಸಿವೆ. 1997 ರಲ್ಲಿ ಮಾಹಿತಿ ತಂತ್ರಜ್ಞಾನ ನೀತಿಯನ್ನು ರೂಪಿಸಿದ ಮೊದಲ ರಾಜ್ಯವಾಗಿ ಕರ್ನಾಟಕ ಪ್ರಥಮ ವನ್ನು ದಾಖಲಿಸಿದೆ. ಇಂದಿಗೂ ಐ.ಟಿ ಕ್ಷೇತ್ರವು ರಾಜ್ಯದ ಜಿಡಿಪಿಗೆ ಶೇ 25ರಷ್ಟು ಕೊಡುಗೆ ನೀಡುವ ಮೂಲೆಗಲ್ಲಾಗಿ ನಿಂತಿದೆ.
- ನಾವೀನ್ಯತಾ ಕ್ಷೇತ್ರವಷ್ಟೇ ಅಲ್ಲದೆ 2001 ರಲ್ಲಿ ಬಯೋಟೆಕ್ ನೀತಿಯನ್ನು ರೂಪಿಸಿ ಮುಂಚೂಣಿ ರಾಜ್ಯವೆನಿಸಿದೆ. ಬಯೋ ಟೆಕ್ನಾ ಲಜಿಯಲ್ಲಿಯೂ ಮುಂದಿರುವ ನಾವು ಬೆಂಗಳೂರು ಟೆಕ್ ಸಮ್ಮಿಟ್ ನಲ್ಲಿಯೇ ಪರಿಷ್ಕೃತ ಬಯೋಟೆಕ್ ನೀತಿಯನ್ನು ಬಿಡುಗಡೆ ಮಾಡಿಲಿದ್ದೇವೆ ಎಂದು ಘೋಷಿಸಲು ಸಂತಸವೆನಿಸಿದೆ. ಈ ಅತ್ಯುನ್ನತ ಕ್ಷೇತ್ರದಲ್ಲಿ ನಾವು ಮುಂಚೂಣಿಯಲ್ಲಿರುವ ನಮ್ಮ ಸ್ಥಾನವನ್ನು ಕಾಯ್ದುಕೊಳ್ಳಲು ನಮಗಿರುವ ಬದ್ಧತೆಯನ್ನು ಇದು ಪ್ರತಿಬಿಂಬಿಸುತ್ತದೆ.
- ಕೇಂದ್ರ ಮಟ್ಟದ ಸ್ಟಾ ರ್ಟ್ ಅಪ್ ನೀತಿಯ ಅಗತ್ಯತೆಯನ್ನು ಕೇಂದ್ರ ಸರ್ಕಾರ ಗುರುತಿಸುವ ಮುನ್ನವೇ 2015 ರಲ್ಲಿ ಸ್ಟಾರ್ಟ್ ಅಪ್ ನೀತಿಗೆ ಚಾಲನೆ ನೀಡುವ ಮೂಲಕ ನಮ್ಮ ರಾಜ್ಯವು ದೂರದೃಷ್ಟಿಯ ಹೆಜ್ಜೆಯನ್ನು ಇರಿಸಿತು. ಈ ಮುಂಗಾಣುವಿಕೆಯು ಸ್ಟಾರ್ಟ್ ಅಪ್ ಇಕೋಸಿಸ್ಟಮ್ ನ ಮುಂಚೂಣಿ ಗೆ ರಾಜ್ಯವನ್ನು ತಂದು ನಿಲ್ಲಿಸಿದೆ. ಇದು ಔದ್ಯಮಿಕ ಚೈತನ್ಯ ವನ್ನು ಬೆಳೆಸಿ ಪ್ರೋತ್ಸಾಹಿಸುವ ರಾಜ್ಯದ ಗುರುತಾಗಿದೆ.
- ತಂತ್ರಜ್ಞಾನ ಹಾಗೂ ಸೃಜನಶೀಲತೆಯ ನಕ್ಷೆ ಸದಾ ವಿಕಸನವಾಗುವ ಅಂಶವನ್ನು ಗುರುತಿಸಿರುವ ನಾವು ಅನಿಮೇಷನ್, ವಿಷುಯಲ್ ಎಫೆಕ್ಟ್, ಗೇಮಿಂಗ್, ಕಾಮಿಕ್ಸ್ ( ಎ. ವಿ.ಜಿಸಿ) ಯ ಮಹತ್ವವನ್ನು ಅರಿತಿದ್ದೇವೆ. ಕರ್ನಾಟಕ ಸರ್ಕಾರವು ಎವಿಜಿಸಿ- ಏಕ್ಸ್ ಆರ್ ನೀತಿಗೆ ಚಾಲನೆ ನೀಡಲು ರಾಜ್ಯ ಸಜ್ಜಾಗಿದೆ ಎಂದು ತಿಳಿಸಲು ನನಗೆ ಸಂತಸವಾಗಿದೆ. ದೇಶದ ಎ ವಿಜಿಸಿ ಕ್ಷೇತ್ರವನ್ನು ಜಾಗತಿಕ ಉತ್ಕೃಷ್ಟತೆಗೆ ಕೊಂಡೊಯ್ಯುವ ಬಗ್ಗೆ ನಮಗಿರುವ ಬದ್ಧತೆ ಹಾಗೂ ಪ್ರಗತಿಶೀಲ ನಿಲುವಿಗೆ ಇದು ಸಾಕ್ಷಿಯಾಗಿದೆ.
- ನಮ್ಮ ನೀತಿಗಳನ್ನು ನಾವು ಕೈಗಾರಿಕಾ ಹಾಗೂ ಶಿಕ್ಷಣ ವಲಯದ ಮತ್ತು ರಾಜ್ಯ ಸರ್ಕಾರದ ನಡುವಿನ ಸಮನ್ವಯದೊಂದಿಗೆ ನಮ್ಮ ನೀತಿಗಳನ್ನು ರೂಪಿಸಲಾಗಿದೆ. ಐಟಿ ವಿಷನ್ ಗ್ರೂ ಪ್, ಬಯೋಟೆಕ್ ಸ್ಟಾರ್ಟ್ ಆಪ್ ಗಳು, ಉದ್ಯಮದ ದಿಗ್ಗಜರು ಹಾಗೂ ನಾಯಕರು ಚಿಂತಕರಾಗಿ ಕಾರ್ಯನಿರ್ವಹಿಸಿ ರಾಜ್ಯದ ಅಭಿವೃದ್ಧಿಗೆ ಚಿಮ್ಮುಹಲಗೆಯಂತಿದ್ದಾರೆ.
- ಈ ಸಾಧನೆಗಳನ್ನು ಸಂಭ್ರಮಿಸುತ್ತಲೇ , ನಮ್ಮ ಮುಂದಿರುವ ಸವಾಲುಗಳನ್ನೂ ನಾವು ಗುರುತಿಸುತ್ತೇವೆ. ಡಿಜಿಟಲ್ ಕಂದರವನ್ನು ನಾವು ಮುಚ್ಚಬೇಕಿದೆ. ತಂತ್ರಜ್ಞಾನದ ಸೌಲಭ್ಯಗಳು ಪ್ರತಿ ನಾಗರಿಕನನ್ನು ಆತನ ಹಿನ್ನೆಲೆ ಯಾವುದೇ ಇದ್ದರೂ ತಲುಪಬೇಕಿದೆ.
- ಈ ಕಂದರವನ್ನು ಮುಚ್ಚಲು ಕೆಲವು ನಿರ್ದಿಷ್ಟ ಕಾರ್ಯಕ್ರಮಗಳು, ಡಾಟಾ ಮತ್ತು ಅನಾಲಿಟಿಕ್ಸ್ ನ್ನು ಬಳಸಿಕೊಂಡು ಆಡಳಿತದಲ್ಲಿ ಮಾಹಿತಿಯುಕ್ತ ಅಭಿಯಾನವನ್ನು ಕೈಗೊಳ್ಳುವುದು ನಮ್ಮ ಗುರಿ. ಬಿಯಾಂಡ್ ಬೆಂಗಳೂರು ಈ ನಿಟ್ಟಿನಲ್ಲಿ ಕೈಗೊಂಡ ವಿಶಿಷ್ಟ ಕಾರ್ಯಕ್ರಮವಾಗಿದೆ. ಬೆಂಗಳೂರಿನ ಹೊರಗಿನ ಪ್ರದೇಶಗಳಲ್ಲಿ ಇಕೋಸಿಸ್ಟಮ್ ನ್ನು ವೃದ್ಧಿಪಡಿಸಿ ಡಿಜಿಟಲ್ ಕಂದರವನ್ನು ಅಳಿಸಿಹಾಕಲು ನಾವು ಪ್ರಯತ್ನಿಸುತ್ತೇದ್ದೇವೆ.
- ನಮ್ಮ ಸರ್ಕಾರವು ಈ ತಾಂತ್ರಿಕ ಪಥ ವನ್ನು ಮುಂದುವರೆಸಲು ಬದ್ಧವಾಗಿದೆ. ಮುಂದಿನ ನಾವೀನ್ಯತಾ ಅಲೆಯನ್ನು ಎದುರಿಸಲು ಅದಕ್ಕೆ ಅಗತ್ಯವಿರುವ ಮೂಲಸೌಕರ್ಯಕ್ಕೆ ಹೂಡಿಕೆ ಹಾಗೂ ಅಗತ್ಯ ನೆರವು ಒದಗಿಸಲು ಸಜ್ಜಾಗಿದೆ. ಉದ್ಯಮ ಹಾಗೂ ಶಿಕ್ಷಣ ಕ್ಷೇತ್ರದ ನಡುವೆ ಸಹಯೋಗ ಹಾಗೂ ನೀತಿಗಳನ್ನು ರೂಪಿಸಿ ರಾಜ್ಯವನ್ನು ಜಾಗತಿಕ ಟೆಕ್ ವೇದಿಕೆಯಲ್ಲಿ ಹೊಸ ಎತ್ತರಕ್ಕೇರಿಸಬೇಕಿದೆ.
- ಬೆಂಗಳೂರು ಟೆಕ್ ಸಮ್ಮಿಟ್ ಕೇವಲ ಒಂದು ಕಾರ್ಯಕ್ರಮವಲ್ಲ. ಉನ್ನತವಾದುದರ ಸಾಧನೆಗೆ ತಂತ್ರಜ್ಞಾನದ ಶಕ್ತಿಯನ್ನು ಒಳಿತಿಗಾಗಿಯೇ ಬಳಕೆ ಮಾಡಲು ನಮ್ಮೆಲ್ಲರ ಒಟ್ಟು ದೃಷ್ಟಿ, ನಿಶ್ಚಯ ಮತ್ತು ಬದ್ಧತೆಯ ಸಂಭ್ರಮಾಚರಣೆ.
- ಬೆಂಗಳೂರು ಟೆಕ್ ಸಮ್ಮಿಟ್ ನ 26 ನೇ ಆವೃತ್ತಿಯ ಘೋಷವಾಕ್ಯ ಬ್ರೇಕಿಂಗ್ ಬೌಂಡರೀಸ್ ಎಂದಿದೆ. ಇದು ನಮ್ಮ ರಾಜ್ಯದ ಪ್ರಾಮುಖ್ಯತೆ ಯನ್ನು ಒತ್ತಿ ಹೇಳುತ್ತದೆ
- ರಾಜ್ಯದಾದ್ಯಂತ ನಿರ್ದಿಷ್ಟ ಗುಂಪುಗಳನ್ನು ಸೃಷ್ಟಿಸಿಪ್ರಾದೇಶಿಕ ಸರಹದ್ದುಗಳನ್ನು ಮೀರುವುದು
- ವಿಭಿನ್ನ ವಲಯಗಳಲ್ಲಿ ಉದ್ಯಮಗಳನ್ನು ಬೆಂಬಲಿಸುವ ಮೂಲಕ ವಲಯ ವ್ಯಾಪ್ತಿಯ ನ್ನು ಮೀರುವುದು.
- ಹೊಸ ಹೂಡಿಕೆ ಮತ್ತು ಹೊಸ ವ್ಯವಹಾರಗಳನ್ನು ತಂದು ಮಿತಿಗಳನ್ನು ಮೀರುವುದು.
- ಬೆಂಗಳೂರಿನ ತಂತ್ರಜ್ಞಾನದ ಶಕ್ತಿ ಗೆ ಬುನಾದಿ ಹಾಕಿದ ಮುಂಚೂಣಿ ನಾಯಕರಿಗೆ ನನ್ನ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಾ ನಾವು ಒಟ್ಟಾಗಿ ಪ್ರಗತಿಯ, ಒಳಗೊಳ್ಳುವಿಕೆಯ ಹಾಗೂ ಸುಸ್ಥಿರತೆಯ ಪಯಣದಲ್ಲಿ ಸಾಗೋಣ.
- ಕರ್ನಾಟಕ ಸರ್ಕಾರವು ನಾವೀನ್ಯತೆ, ಸ್ಟಾರ್ಟ್ ಅಪ್ ಗೆ ಪೂರಕ ಇಕೋಸಿಸ್ಟಮ್ ಸೃಜಿಸಲು ಬೆಂಬಲ ನೀಡುವುದಲ್ಲದೆ ಬುದ್ಧಿವಂತರನ್ನು lವಿಶ್ವದೆಲ್ಲೆಡೆಯಿಂದ ಸೆಳೆಯಬಯಸುತ್ತದೆ.
- ನಿಮ್ಮೆಲ್ಲರ ಬೆಂಬಲದಿಂದ ಸಾಟಿಯಿಲ್ಲದ ಸಮೃದ್ಧ ಯಶೋಗಾಥೆಯನ್ನು ಬರೆಯುತ್ತೇವೆ. ನಾವೀನ್ಯತೆಯ ಚೈತನ್ಯ ನಮ್ಮೆಲ್ಲರಿಗೂ ದಾರಿದೀಪವಾಗಲಿ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ