Karnataka NewsLatestPolitics

*ರಾಜ್ಯದ ಖ್ಯಾತ ಉದ್ಯಮಿ ಕಿಡ್ನ್ಯಾಪ್ : ಶಾಸಕನ ವಿರುದ್ಧ FIR*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರು: ಮೈದುಕೂರು ಠಾಣೆ ಪೊಲೀಸರೆಂದು ಹೇಳಿ ಶಾಸಕರೊಬ್ಬರ ಕಡೆಯವರು ಬೆಂಗಳೂರಿನ ಖ್ಯಾತ ಉದ್ಯಮಿ ಡಾ.ರವಿಪ್ರಕಾಶ್ ಅವರನ್ನು ಕಿಡ್ನ್ಯಾಪ್ ಮಾಡಿದ್ದಾರೆ ಎಂದು ಆರೋಪಿಸಿ ಉದ್ಯಮಿ ಕುಟುಂಬಸ್ಥರು ದೂರು ನೀಡಿದ್ದಾರೆ.

ಬೆಂಗಳೂರಿನ ರಾಜರಾಜೇಶ್ವರಿನಗರದಲ್ಲಿರುವ ಉದ್ಯಮಿ ಹಾಗೂ ಬಿಜೆಪಿ ಮುಖಂಡ ರವಿಪ್ರಕಾಶ್ ಅವರನ್ನು ಆಂಧ್ರಪ್ರದೇಶದ ಕಡಪ ಜಿಲ್ಲೆಯ ಮೈದುಕೂರು ಠಾಣೆ ಪೊಲೀಸರು ಎಂದು ಹೇಳಿಕೊಂಡಿ ಬಂದವರು ಆ.30ರಂದು ವಶಕ್ಕೆ ಪಡೆದು ಕರೆದೊಯ್ದಿದ್ದಾರೆ. ಆದರೆ ಬಂಧಿಸಲೆಂದು ಬಂದವರು ಪೊಲೀಸರೇ ಅಲ್ಲ, ಆಂಧ್ರದ ಮೈದುಕೂರು ಶಾಸಕ ಪುಟ್ಟ ಸುಧಾಕರ್ ಕಡೆಯವರೆಂದು ಉದ್ಯಮಿಯ ಕುಟುಂಬ ಆರೋಪಿಸಿದೆ.

ಈ ಹಿನ್ನೆಲೆಯಲ್ಲಿ ಆರ್ ಆರ್ ನಗರ ಪೊಲೀಸ್ ಠಾಣೆಯಲ್ಲಿ ಉದ್ಯಮಿ ರವಿಪ್ರಕಾಶ್ ಕುಟುಂಬದವರು ದೂರು ನೀಡಿದ್ದು, ಆಂಧ್ರ ಶಾಸಕ ಪುಟ್ಟ ಸುಧಾಕರ್ ಸೇರಿಂದಂತೆ ಮೂವರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

ರವಿಪ್ರಕಾಶ್ 300ಕ್ಕೂ ಹೆಚ್ಚು ವಿಂಟೇಜ್ ಕಾರುಗಳ ಸಂಗ್ರಹ ಹೊಂದಿರುವ ಖ್ಯಾತ ಉದ್ಯಮಿಯಾಗಿದ್ದಾರೆ. ಮೈದುಕೂರು ಠಾಣೆಯಲ್ಲಿ ದಾಖಲಾಗಿದ್ದ ಕೊಲೆ ಯತ್ನ ಪ್ರಕರಣದಲ್ಲಿ ರವಿಪ್ರಕಾಶ್ 5ನೇ ಆರೋಪಿಯಾಗಿದ್ದು, ಅದರನ್ವಯ ಪೊಲೀಸರು ಅವರನ್ನು ವಕಶಕ್ಕೆ ಪಡೆಯಲು ಬಂದಿದ್ದಾಗಿ ಹೇಳಿದ್ದರು. ಆದರೆ ನಂಬರ್ ಪ್ಲೇಟ್ ಇಲ್ಲದ ವಾಹನದಲ್ಲಿ ಉದ್ಯಮಿಯನ್ನು ಕರೆದೊಯ್ಯಲಾಗಿದ್ದು, ಇದರ ಹಿಂದೆ ಆಂಧ್ರಪ್ರದೇಶದ ಮೈದುಕೂರು ಶಾಸಕ ಹಾಗೂ ಟಿಟಿಡಿ ಮಾಜಿ ಅಧ್ಯಕ್ಷ ಪುಟ್ಟ ಸುಧಾಕರ್ ಅವರ ರಾಜಕೀಯ ಪ್ರಭಾವವಿದೆ ಎಂಬ ಆರೋಪ ಕೇಳಿಬಂದಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button