Karnataka News

*ಹೋಟೆಲ್ ರೂಂ ನಲ್ಲಿ ಪ್ರಿಯಕರನಿಂದಲೇ ಯುವತಿಯ ಬರ್ಬರ ಹತ್ಯೆ*

ಪ್ರಗತಿವಾಹಿನಿ ಸುದ್ದಿ: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೋರ್ವ ಯುವತಿಯ ಬರ್ಬರ ಕೊಲೆ ನಡೆದಿದೆ. ಪ್ರೊಯಕರ ಭೇಟಿಗೆಂದು ಹೋಟೆಲ್ ಗೆ ಬಂದಿದ್ದ ಯುವತಿಯನ್ನು ಆಕೆಯ ಪ್ರಿಯಕರನೇ ಚಾಕುವಿನಿಂದ ಇರಿದು ಕೊಂದಿರುವ ಘಟನೆ ಬೆಂಗಳೂರಿನ ಇಂದಿರಾ ನಗರದಲ್ಲಿ ನಡೆದಿದೆ.

ಅಸ್ಸಾಂ ಮೂಲದ ಮಾಯಾ ಗೊಗೋಯಿ ಕೊಲೆಯಾಗಿರುವ ಯುವತಿ. ಬೆಂಗಳೂರಿನ ಕಂಪನಿಯೊಮ್ದರಲ್ಲಿ ಮಾಯಾ ಕೆಲಸ ಮಾಡುತ್ತಿದ್ದಳು. ನ.23ರಂದು ಮಾಯಾ ಪ್ರಿಯಕರ ಆರವ್ ಇಂದಿರಾನಗರದಲ್ಲಿ ಹೋಟೆಲ್ ಒಂದರಲ್ಲಿ ರೂಮ್ ನಲ್ಲಿ ತಂಗಿದ್ದ. ಪ್ರಿಯಕರನ ಭೇಟಿಗೆಂದು ಬಂದಿದ್ದ ಮಾಯಾ ಈಗ ಕೊಲೆಯಾಗಿದ್ದಾಳೆ.

ಆರವ್ ಚಾಕುವಿನಿಂದ ಇರಿದು ಮಾಯಾಳನ್ನು ಕೊಂದು ಪರಾರಿಯಾಗಿದ್ದಾನೆ. ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

Home add -Advt

Related Articles

Back to top button