ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜಧಾನಿ ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ ನಲ್ಲಿ ಹೈಕೋರ್ಟ್ ವಕೀಲೆಯೊಬ್ಬರಿಗೆ ಜಿರಳೆ ಪತ್ತೆಯಾಗಿದ್ದು, ಪ್ರಕರಣ ಸಂಬಂಧ ವಿಧನಸೌಧ ಠಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.
ಹೈಕೋರ್ಟ್ ವಕೀಲೆ ಶೀಲಾ ದೀಪಕ್ ಎಂಬುವವರು ರಾಜಭವನ ರಸ್ತೆಯಲ್ಲಿರುವ ಪ್ರತಿಷ್ಠಿತ ಹೋಟೆಲ್ ಗೆ ಊಟಕ್ಕೆ ತೆರಳಿದ್ದರು. ಭರ್ಜರಿ ಊಟವನ್ನು ಆರ್ಡರ್ ಮಾಡಿದ್ದರು. ಅರ್ಧ ಊಟ ಸೇವಿಸಿದ್ದ ಅವರಿಗೆ ಅವರು ತಿನ್ನುತ್ತಿದ್ದ ಪನ್ನೀರ್ ಗ್ರೇವಿಯಲ್ಲಿ ಜಿರಳೆ ಪತ್ತೆಯಾಗಿದೆ. ಶಾಕ್ ಆದ ವಕೀಲೆ ಹೋಟೆಲ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬೇರೆ ಊಟ ಕೊಡುವುದಾಗಿ ಸಿಬ್ಬಂದಿಗಳು ಸಮಜಾಯಿಷಿ ನೀಡಿದ್ದಾರೆ. ಬೇರಾವ ಊಟವೂ ಬೇಡ ಈಗಾಗಲೇ ಸೆವಿಸಿರುವ ಊಟದಲ್ಲಿ ಜಿರಳೆ ಸಿಕ್ಕಿದೆ ಊಟದ ಗುಣಮಟ್ಟ, ಹೋಟೆಲ್ ಅಡುಗೆ ಮನೆ ಶುಚಿತ್ವವನ್ನು ಪ್ರಶ್ನಿಸಿದ್ದಾರೆ. ಅಲ್ಲದೇ ಗ್ರೇವಿಯಲ್ಲಿ ಪತ್ತೆಯಾದ ಜಿರಳೆ ಹಾಗೂ ಹೋಟೆಲ್ ಅಡುಗೆ ಮನೆಗೆ ತೆರಳಿ ಅಲ್ಲಿನ ಶುಚಿತ್ವವಿಲ್ಲದ ಸ್ಥಿತಿ, ಹಾಗೇಯೇ ಬಿದ್ದಿರುವ ರಾಶಿ ರಾಶಿ ಪಾತ್ರೆಗಳನ್ನು ವಿಡಿಯೋ ಮಾಡಿದ್ದಾರೆ.
ಹೋಟೆಲ್ ಮುಖ್ಯಸ್ಥರಿಗೂ ಈ ಬಗ್ಗೆ ತರಾಟೆಗೆ ತೆಗೆದುಕೊಂಡಿದ್ದು, ಸಿಬ್ಬಂದಿಗಳು ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ಪ್ರತಿಷ್ಠಿತ ಸ್ಟಾರ್ ಹೋಟೆಲ್ ಊಟದಲ್ಲೇ ಜಿರಳೆ ಪತ್ತೆಯಾಗಿದೆ ಎಂದರೆ ಇಲ್ಲಿನ ಶುಚಿತ್ವದ ಬಗ್ಗೆ ಪ್ರಶ್ನಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೀಗ ವಿಧಾನಸೌಧ ಠಾಣೆಯಲ್ಲಿ ಹೋಟೆಲ್ ಸಿಬ್ಬಂದಿಗಳ ವಿರುದ್ಧ ಐಪಿಸಿ ಸೆಕ್ಷನ್ 352, 341, 504,506 ಅಡಿ ಎಫ್ ಐ ಆರ್ ದಾಖಲಾಗಿದೆ. ಹೋಟೆಲ್ ಸಿಬ್ಬಂದಿಗಳು ಎಳೆದಾಟ, ನೂಕಾಟ ಮಾಡಿ ಬೆದರಿಕೆ ಹಾಕಿದ್ದಾರೆ ಎಂದು ದೂರಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ