Kannada NewsKarnataka NewsLatest

*ಎಟಿಎಂಗೆ ಹಣ ಹಾಕಲು ಕೊಟ್ಟಿದ್ದ 1 ಕೋಟಿಗೂ ಅಧಿಕ ಹಣದ ಸಮೇತ ಎಸ್ಕೇಪ್ ಆದ ಸಿಬ್ಬಂದಿಗಳು*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿಯ ಚೋರ್ಲಾ ಘಾಟ್ ನಲ್ಲಿ 400 ಕೋಟಿ ದರೋಡೆ ಪ್ರಕರಣದ ತನಿಖೆ ನಡೆಯುತ್ತಿರುವಾಗಲೇ ಮತ್ತೊಂದು ದರೋಡೆ ಪ್ರಕರಣ ಬೆಳಕಿಗೆ ಬಂದಿದೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಎಟಿಎಂಗೆ ಹಾಕಲು ಕೊಟ್ಟಿದ್ದ 1 ಕೋಟಿಗೂ ಅಧಿಕ ಹಣದೊಂದಿಗೆ ಸಿಬ್ಬಂದಿ ಎಸ್ಕೇಪ್ ಆಗಿರುವ ಘಟನೆ ನಡೆದಿದೆ. ಬೆಂಗಳೂರಿನ ಕೋರಮಂಗಲದಲ್ಲಿ ಈ ಘಟನೆ ನಡೆದಿದೆ.

ಹಿಟಾಚಿ ಪೇಮೆಂಟ್ ಸರ್ವಿಸ್ ಪ್ರೈವೆಟ್ ಲಿಮಿಟೆಡ್ ಕಂಪನಿ ಎಟಿಎಂಗೆ ಹಣ ಹಾಕುವಂತೆ ಒಂದು ಕೋಟಿ ರೂಪಾಯಿ ಹಣವನ್ನು ಸಿಬ್ಬಂದಿಗೆ ಕೊಟ್ಟಿತ್ತು. ಆಕ್ಸಿಸ್ ಬ್ಯಾಂಕ್ ಗೆ ಸೇರಿದ ಒಂದು ಕೂಟಿಗೂ ಅಧಿಕ ಹಣವನ್ನು ವಿವಿಧ ಎಟಿಎಂಗೆ ಡೆಪಾಸಿಟ್ ಮಾಡುವಂತೆ ಕಂಪನಿ ಅಧಿಕಾರಿ ಮಿಥುನ್ ಜನವರಿ 19 ರಂದು ಸಿಬ್ಬಂದಿಗೆ ಸೂಚಿಸಿದ್ದರು. ಎರಡು ಪ್ರತ್ಯೇಕ ತಂಡಗಳನ್ನು ಕಂಪನಿ ರಚಿಸಿತ್ತು.

ಪ್ರವೀಣ್, ಧನಕರ್, ರಾಮಕ್ಕ, ಹರೀಶ್, ಪ್ರವೀಣ್ ಕುಮಾರ್ ಹಾಗೂ ವರುಣ್ ಎಂಬ ಸಿಬ್ಬಂದಿಗೆ ಕಂಪನಿ ಹಣ ನೀಡಿತ್ತು. ಆದರೆ ಆ ಸಿಬ್ಬಂದಿಗಳು ಎಟಿಎಂಗೆ ಹಣ ಹಾಕದೇ ಹಣದ ಸಮೇತ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕೋರಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಹುಡುಕಾಟ ನಡೆಸಿದ್ದಾರೆ.

Home add -Advt

Related Articles

Back to top button