
ಪ್ರಗತಿವಾಹಿನಿ ಸುದ್ದಿ; ಹರಿಹರ: ಲಂಚಕ್ಕೆ ಕೈಯೊಡ್ದಿದ್ದ ಹರಿಹರ ತಾಲೂಕಿನ ಬೆಸ್ಕಾಂ ಇಂಜಿನಿಯರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಬೆಸ್ಕಾಂ ಕಚೇರಿಯ ಸಹಾಯಕ ಕಾರ್ಯಪಡೆ ಇಂಜಿನಿಯರ್ ಬಿ.ಎಂ.ಕರಿಬಸವಯ್ಯ ಲೋಕಾಯುಕ್ತ ಬಲೆಗೆ ಬಿದ್ದವರು.
ಕೆಇಬಿ ಗುತ್ತಿಗೆದಾರ ಬೇವಿನಹಳ್ಳಿ ಮಹೇಶ್ವರಪ್ಪನಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಇಂಜಿನಿಯರ್ ಕರಿಬಸವಯ್ಯನನ್ನು ಬಂಧಿಸಿದ್ದಾರೆ.
ಕಡತ ವಿಲೇವಾರಿಗಾಗಿ 15 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕರಿಬಸವಯ್ಯ, ಅದಾಗಲೇ 9ಸಾವಿರ ರೂಪಾಯಿ ಪಡೆದಿದ್ದ. ಉಳಿದ 6 ಸಾವಿರ ರೂಪಾಯಿಲಂಚ ಪಡೆಯುತ್ತಿದ್ದಾಗ ಬೆಸ್ಕಾಂ ಕಚೇರಿಯಲ್ಲಿಯೇ ಬಲೆಗೆ ಬಿದ್ದಿದ್ದಾರೆ.
https://pragati.taskdun.com/suicideone-family3-peoplehaveritonduru-village/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ