ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ – ಚಿಕ್ಕೋಡಿಯ ಕೆ ಎಲ್ ಇ ಇಂಜಿನಿಯರಿಂಗ್ ಕಾಲೇಜಿನ ಇಲೇಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ಇಂಜೀನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ಸಿದ್ಧ ಪಡಿಸಿದ ಲೈನ್ ಫಾಲೊವರ್ ಸ್ಮಾರ್ಟ ಡಸ್ಟಬಿನ್ ಪ್ರೊಜೆಕ್ಟ್ ಗೆ ಬೆಸ್ಟ್ ಪ್ರೊಜೆಕ್ಟ್ ಆಫ್ ದಿ ಇಯರ್ ಪ್ರಶಸ್ತಿ ಲಭಿಸಿದೆ.
ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ (ಕೆ. ಎಸ್. ಸಿ. ಎಸ್. ಟಿ) ಈ ಪ್ರಶಸ್ತಿ ನೀಡಿದೆ. ಈ ಪ್ರಾಜೆಕ್ಟನ್ನು ವಿದ್ಯಾರ್ಥಿಗಳಾದ ಕು. ಸ್ನೇಹಾ ಉಂದ್ರಿ, ಕು. ಪ್ರಿಯಾಂಕಾ ಜನಮಟ್ಟಿ , ಕು. ಮನೀಶಾ ಮಿರ್ಜಿ , ಕು. ಸೌಮ್ಯಾ ದಿನ್ನಿಮನಿ ಸಿದ್ದಪಡಿಸಿದ್ದರು. ಪ್ರಾಜೆಕ್ಟಗೆ ಮಾರ್ಗದರ್ಶಕರಾದ ಪ್ರೊ. ವನೀತಾ ಅಬ್ಬಿಗೇರಿ, ವಿಭಾಗ ಮುಖ್ಯಸ್ಥರಾದ ಪ್ರೊ. ಬಸವರಾಜ ಚೌಕಿಮಠ, ವಿಭಾಗಿಯ ಸಂಯೋಜಕರಾದ ಪ್ರೊ. ಪ್ರವೀಣ ಗುರವ ಹಾಗೂ ವಿದ್ಯಾರ್ಥಿಗಳಿಗೆ ಕೆ.ಎಲ್.ಇ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಚಾರ್ಯರು ಹಾಗೂ ಸಿಬ್ಬಂದಿ ಅಭಿನಂದಿಸಿದ್ದಾರೆ.
ಆನ್ ಲೈನ್ ಮುಖಾಂತರ ಜರುಗಿದ ೪೩ನೇಯ ರಾಜ್ಯಮಟ್ಟದ ಪ್ರದರ್ಶನ ಹಾಗೂ ಅಂತಿಮ ಹಂತದಲ್ಲಿ ಸ್ಪರ್ಧೆಯಲ್ಲಿ ೨೦೧೯-೨೦ ನೇ ಸಾಲಿನ ಪ್ರಶಸ್ತಿಯನ್ನು ನೀಡಲಾಗಿದೆ.
ಮಹಾವಿದ್ಯಾಲಯವು ಸತತವಾಗಿ ಕಳೆದ ೪ ವರ್ಷಗಳಿಂದ ರಾಜ್ಯ ಮಟ್ಟದಲ್ಲಿ ಈ ಪ್ರಶಸ್ತಿಯನ್ನು ಪಡೆದುಕೊಳ್ಳುತ್ತಿದೆ ಎಂದು ಪ್ರಾಚಾರ್ಯ ಡಾ. ಪ್ರಸಾದ ರಾಂಪುರೆ ತಿಳಿಸಿದ್ದಾರೆ.
೨೦೧೬-೧೭ ರಲ್ಲಿ ಇಲೆಕ್ಟ್ರಾನೀಕ್ಸ್ ವಿಭಾಗದ ಪ್ರೊ. ವಿಜಯ ಹಾಲಪ್ಪನವರ ಮಾರ್ಗದರ್ಶನದಲ್ಲಿನ ದ ಆನ್ ಇಂಟೆಲಿಜಂಟ್ ಮೋಬೈಲ್ ಅಪ್ಲಿಕೇಷನ್ ಫಾರ್ ಡಿಟರಮಿನೇಷನ್ ಆಫ್ ಹ್ಯುಮನ್ ಆಯ್ ಸ್ಪೇಕ್ಟ್ಯಾಕಲ್ ನಂಬರ್ ಪ್ರಾಜೆಕ್ಟ್, ೨೦೧೭-೧೮ ರಲ್ಲಿ ಮೆಕ್ಯಾನೀಕಲ್ ವಿಭಾಗದ ಪ್ರೊ. ಸಂತೋಷ ಗೌಡರ ಮಾರ್ಗದರ್ಶನದಲ್ಲಿನ ಸೋಲಾರ ಪಾವರಡ್ ಹೈಬ್ರಿಡ್ ಮಲ್ಟಿಮೊಡ್ ವಾಟರ್ ವ್ಹೀಲರ್ ಪ್ರಾಜೆಕ್ಟ್, ೨೦೧೮-೧೯ ರಲ್ಲಿ ಇಲೆಕ್ಟ್ರಾನೀಕ್ಸ್ ವಿಭಾಗದ ಪ್ರೊ. ಪ್ರವೀಣ ಗುರವ ಮಾರ್ಗದರ್ಶನದಲ್ಲಿನ ಕ್ಲಾಸಿಫಿಕೆಶನ್ ಆಫ ಲಂಗ್ ಡಿಸಿಜಸ್ ಆ್ಯಂಡ್ ಡಿಟೆಕ್ಷನ್ ಆಫ್ ಲಂಗ್ ಕ್ಯಾನ್ಸರ್ ಯುಜಿಂಗ್ ಇಮೆಜ್ ಪ್ರೊಸೆಸಿಂಗ್ ರಾಸ್ಪ ಬೇರಿ ಫಿ ಆಯಂಡ್ ಐಒಟಿ ಪ್ರಾಜೆಕ್ಟ್, ೨೦೧೯-೨೦ ರಲ್ಲಿ ಪ್ರೊ. ವನೀತಾ ಅಬ್ಬಿಗೇರಿ ಮಾರ್ಗದರ್ಶನದಲ್ಲಿನ ಲೈನ್ ಫಾಲೊವರ್ ಸ್ಮಾರ್ಟ ಡಸ್ಟಬಿನ್ ಪ್ರಾಜೆಕ್ಟಗಳಿಗೆ ಈ ಪ್ರಶಸ್ತಿ ಲಭಿಸಿದೆ. ಮಹಾವಿದ್ಯಾಲಯದ ವಿದ್ಯಾರ್ಥಿಗಳು ಸಿದ್ದಪಡಿಸಿದ ಪ್ರಾಜೆಕ್ಟಗಳು ರಾಷ್ಟ್ರಮಟ್ಟದಲ್ಲಿಯು ಸಹಿತ ಸ್ಮಾರ್ಟ ಇಂಡಿಯಾ ಹ್ಯಾಕಥಾನ್‌ನ ಸ್ಪರ್ಧೆಯಲ್ಲಿ ಮನ್ನಣೆ ಪಡೆದಿವೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ