Kannada NewsKarnataka NewsLatest

ಊಟದ ಬದಲು ಭಡಂಗ ನೀಡಿದ್ದಾರಂತೆ ಅಧಿಕಾರಿಗಳು

ಊಟದ ಬದಲು ಭಡಂಗ ನೀಡಿದ್ದಾರಂತೆ ಅಧಿಕಾರಿಗಳು

 ಸಂತೋಷ್ ಕುಮಾರ್ ಕಾಮತ್, ಮಾಂಜರಿ-
 ಪ್ರವಾಹ ಪೀಡಿತ ಗ್ರಾಮಗಳಿಗೆ ಬೇಟಿ ನೀಡಿ ಪರಿಶೀಲನೆ ನಡೆಸಿದ ನೂತನ ಸಚಿವೆ ಶಶಿಕಲಾ ಜೊಲ್ಲೆಗೆ ಶಾಕ್ ನೀಡುವಂತಹ ದೂರನ್ನು ಸಂತ್ರಸ್ತರು ನೀಡಿದರು.
ಅಥಣಿ ತಾಲುಕಿನ ರೆಡ್ಡೆರಹಟ್ಟಿ, ಸತ್ತಿ, ಅವರಖೋಡ, ಹಲ್ಯಾಳ ಗ್ರಾಮಗಳ ಕೃಷ್ಣಾ ನದಿ ಪ್ರವಾಹ ಪೀಡಿತ ಗ್ರಾಮಗಳು ಮತ್ತು ನೆರೆ ಸಂತ್ರಸ್ಥ ಕೇಂದ್ರಗಳಿಗೆ ಭೇಟಿ ನೀಡಿದ ಜೊಲ್ಲೆ ಅಲ್ಲಿನ ವ್ಯವಸ್ಥೆಯ ಪರಿಶೀಲನೆ ನಡೆಸಿದರು. ಕಳೆದ ೨ ದಿನಗಳಿಂದ ಕೆಲವು ಗಂಜಿ ಕೇಂದ್ರಗಳಲ್ಲಿ ಆಹಾರ ಸರಬರಾಜು ಮಾಡದೆ ಕೇವಲ ಮಂಡಕ್ಕಿ( ಭಡಂಗ) ವಿರತಣೆ ಮಾಡಿದ್ದ ಬಗ್ಗೆ ಸಂತ್ರಸ್ಥರು ಮಾಹಿತಿ ಸಚಿವರಿಗೆ ಮಾಹಿತಿ ನೀಡಿದರು.
ಸಚಿವೆ ಶಶಿಕಲಾ ಜೊಲ್ಲೆ ತಕ್ಷಣವೆ ಅಲ್ಲಿದ್ದ ಚಿಕ್ಕೋಡಿ ಉಪವಿಭಾಗಾಧಿಕಾರಿ ರವಿಂದ್ರ ಕರ್ಲಿಂಗನವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ” ನೀವ್ ಹಿಂಗ್ ಚೇಕ್ ಮಾಡತಿನಿ… ಚೇಕ್ ಮಾಡತೀನಿ… ಅಂದ್ರ ಹ್ಯಾಂಗ, ನಿಮ್ಮ ಕೈ ಕೆಳಗ ನೋಡಲ್ ಅಧಿಕಾರಿಗಳು ಇದ್ದಾರ, ಪಿಡಿಓ ಇದ್ದಾರ, ತಲಾಟಿ ಇದ್ದಾರ. ನಿಮಗ ರೀಪೋರ್ಟ ಮಾಡಂಗಿಲ್ ಅಂದ್ರ ಹ್ಯಾಂಗ. ನೀರ ಇಳದ ಒಂದ್ ವಾರ್ ಆತು. ಅಷ್ಟು ಜನರ ಬಗ್ಗೆ ಕಾಳಜಿ ಇಲ್ಲನ್ರಿ ನಿಮಗ, ಸರಕಾರದಿಂದ ಹಣ ಕೊಟ್ಟಿವಿ, ಸರಕಾರ ಸ್ಪಂದನೆ ಮಾಡಾತೈತಿ, ಆದ್ರ ನೀವು ಹಿಂಗ್ ಮಾಡತ್ರಿ.. ನಿಮಗ ಪ್ರಿ ಹ್ಯಾಂಡ್ ಕೊಟ್ಟಾರ. ಎಲ್ಲಿ ಅವಶ್ಯಕತೆ ಇದೆ ಅಲ್ಲಿ ಎಲ್ಲಾ ಸವಲತ್ ಒದಗಿಸ್ರಿ ಅಂತ ಹೇಳಿಲ್ರಿ.. ನಾನು ಜಿಲ್ಲಾಧಿಕಾರಿಗಳ ಸಭೆಯಲ್ಲಿ ಇದನ್ನು ಎತ್ತಿ ಕೇಳತೀನಿ ನನಗೆ ಸಂಜೆ ವರೆಗೆ ಎಲ್ಲಾ ಸಮಸ್ಯೆ ಬಗೆ ಹರಿಸಿ ವರದಿ ಕೋಡಬೇಕು” ಎಂದು ಖಡಕ್ ಎಚ್ಚರಿಕೆಯನ್ನು ಎ ಸಿ ಅವರಿಗೆ ನೀಡಿದರು ನೂತನ ಸಚಿವೆ ಶಶಿಕಲಾ ಜಿಲ್ಲೆ.

ಕೆಂಡಾಮಂಡಲರಾದ ನೂತನ ಸಚಿವೆ  

ಅಥಣಿ, ಕಾಗವಾಡ, ರಾಯಬಾಗ, ಚಿಕ್ಕೋಡಿ ತಾಲೂಕುಗಳ ಕೃಷ್ಣಾ ನದಿ ನೆರೆ ಸಂತ್ರಸ್ಥ ಕೇಂದ್ರಗಳಲ್ಲಿ ನಿನ್ನೆ ರಾತ್ರಿಯಿಂದ ಆಹಾರ ವಿತರಣೆ ಮಾಡದೆ ಕೇವಲ ಮಂಡಕ್ಕಿ( ಭಡಂಗ್ ) ಮಾತ್ರ ವಿತರಣೆ ಮಾಡಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದ ಹಿನ್ನಲೆಯಲ್ಲಿ ಇಂದು ಅಥಣಿ ತಾಲೂಕಿನ ಸತ್ತಿ ಗ್ರಾಮದ ಬಳಿಯ ಝೀರೋ ಪಾಯಿಂಟ್ ನ ಸಂತ್ರಸ್ಥ ಕೇಂದ್ರಲ್ಲಿ ಈ ವಿಚಾರವನ್ನು ಪ್ರಸ್ತಾಪಸಿದ್ದಕ್ಕೆ ಕೆಂಡಾಮಂಡಲರಾದ ನೂತನ ಸಚಿವೆ ಶಶಿಕಲಾ ಜೊಲ್ಲೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ತಕ್ಷಣ ಈ ಸಮಸ್ಯೆ ಬಗೆ ಹರಿಸಿ ನನಗೆ ವರದಿ ನೀಡುವಂತೆ ಸೂಚಿಸಿದರು.
ಭಾರಿ ಪ್ರಮಾಣದ ಪ್ರವಾಹ ಬಂದ ಹಿನ್ನೆಲೆಯಲ್ಲಿ ಉಟ್ಟ ಬಟ್ಟೆಯ ಮೇಲೆ ಜನರು ಈ ಸಂತ್ರಸ್ಥ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಅವರಿಗೆ ಎಲ್ಲ ರೀತಿಯ ನೆರವು ನೀಡುವುದು ಸರಕಾರದ ಹೊಣೆಯಾಗಿದೆ. ಕೆಲವು ಅಧಿಕಾರಿಗಳು ಒಳ್ಳೆಯ ಕೆಲಸ ಮಾಡಿದ್ಧಾರೆ. ಆದರೆ ಇನ್ನು ಕೆಲವೇ ಜನ ಅಧಿಕಾರಿಗಳು ಇಂತಹ ಅಚಾತುರ್ಯ ಮಾಡುತ್ತಿದ್ದಾರೆ. ನೆರೆ ಸಂತ್ರಸ್ಥರಿಗೆ ಬೇಕಾಗುವ ಎಲ್ಲ ಮೂಲಭೂತ ಸೌಲತ್ತುಗಳನ್ನು ಒದಗಿಸುವಲ್ಲಿ ಸರಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದು ತಿಳಿಸಿದರು.
ಈ ವೇಳೆ ನೂತನ ಸಚಿವೆ ಶಶಿಕಲಾ ಜಿಲ್ಲೆಯವರಿಗೆ ಕಾಗವಾಡ ಮಾಜಿ ಶಾಸಕ ರಾಜು ಕಾಗೆ, ಕೃಷ್ಣಾ ಸಹಕಾರಿ ಸಕ್ಕರೆ ಕಾರಖಾನೆಯ ಅಧ್ಯಕ್ಷ ಪರಪ್ಪಾ ಸವದಿ, ಮುಖಂಡರಾದ ಚಿದಾನಂದ ಸವದಿ, ಶ್ರಿಶೈಲ್ ನಾಯಿಕ, ಸಂತೋಷ ಸಾವಡಕರ, ಅಥಣಿ ತಹಶೀಲ್ದಾರ ಎಮ್ ಎನ್ ಬಳಿಗಾರ, ಸೇರಿ ಎಲ್ಲಾ ಇಲಾಖೆಗಳ ಅಧಿಕಾರಿಗಳು ಸಾಥ್ ನೀಡಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button