*ಆದೇಶ ಹಿಂಪಡೆಯದಿದ್ದರೆ ರಾಜೀನಾಮೆ*: *ಸರ್ಕಾರಕ್ಕೆ ಕಾಂಗ್ರೆಸ್ ಶಾಸಕನ ಎಚ್ಚರಿಕೆ*

ಪ್ರಗತಿವಾಹಿನಿ ಸುದ್ದಿ: ರಾತ್ರೋರಾತ್ರಿ ಭದ್ರಾ ನೀರು ಬಿಡುಗಡೆ ಮಾಡಿರುವುದಕ್ಕೆ ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಶಾಸಕರೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಾವುದೇ ಅಧಿಕೃತ ಆದೇಶವಿಲ್ಲದೇ ಭದ್ರಾದಿಂದ ನೀರು ಹರಿಬಿಡಲಾಗಿದ್ದು, ಕಾಂಗ್ರೆಸ್ ಶಾಸಕರು ಕಿಡಿಕಾರಿದ್ದಾರೆ. (ನವೆಂಬರ್ 16ರಂದು ನಡೆದ ದಿಶಾ ಸಭೆಯಲ್ಲಿ ಸಂಸದೆ ಪ್ರಭಾ ಮಲ್ಲಿಕಾರ್ಜುನ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನು ಸಚಿವ ಬಸವಂತಪ್ಪ ಸೇರಿದಂತೆ ದಾವಣಗೆರೆಯ ಕೆಲ ಕಾಂಗ್ರೆಸ್ ಶಾಸಕರು ಸಹ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇನ್ನು ಹೊನ್ನಾಳಿ ಕಾಂಗ್ರೆಸ್ ಶಾಸಕ ಡಿ ಜೆ ಶಾಂತನಗೌಡ, ಒಂದು ಹೆಜ್ಜೆ ಮುಂದೆ ಹೋಗಿ ರಾಜೀನಾಮೆ ಎಚ್ಚರಿಕೆ ನೀಡಿದ್ದಾರೆ.
ಭದ್ರಾ ನೀರು ಬಿಡುಗಡೆ ಆದೇಶವನ್ನು ಹಿಂಪಡೆಯದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೊನ್ನಾಳಿ ಶಾಸಕ ಡಿ ಜೆ ಶಾಂತನಗೌಡ ಅವರು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ದಾವಣಗೆರೆಯಲ್ಲಿಂದು ಮಾತನಾಡಿರುವ ಶಾಂತನಗೌಡ , ನನ್ನ ಭಾಗದ ರೈತರು ಹಲವು ಬಾರಿ ನಮ್ಮನ್ನು ಸಂಪರ್ಕ ಮಾಡಿದ್ದರು. ತೋಟ ಒಣಗುತ್ತಿವೆ ನೀರು ಬಿಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಆದ್ರೆ ನಾನು ಸಚಿವರು ಹಾಗೂ ಐಸಿಸಿ ಸಭೆಯಲ್ಲಿ ನೀರು ಬಗ್ಗೆ ಮಾತಾಡಿ ನೀರು ಬಿಡಿಸುವುದಾಗಿ ಭರವಸೆ ನೀಡಿದ್ದೆ. ಆದರೆ ನವೆಂಬರ್ 15ರಂದು ಮಧ್ಯ ರಾತ್ರಿ ನೀರು ಬಿಡುಗಡೆ ಮಾಡಲಾಗಿದೆ. ಆದೇಶ ಇಲ್ಲದೇ 1500 ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಲಾಗಿದೆ. ಒಂದು ಟಿಎಂಸಿ ನೀರನ್ನು ಹತ್ತು ದಿನಗಳ ಕಾಲ ನೀರು ಹರಿಸಲು ಸರ್ಕಾರ ಆದೇಶ ಮಾಡಿದೆ. ಭದ್ರ ಅಚ್ಚು ಕಟ್ಟು ಪ್ರದೇಶದ ಬೇಸಿಗೆ ಬೆಳೆಗೆ ನೀರು ಹರಿಸಲು ಹತ್ತು ದಿನಗಳ ಕಾಲ ನೀರು ಹರಿಸಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಮಳೆಗಾಲನೇ ಮುಗಿದಿಲ್ಲ ಬೇಸಿಗೆ ಅಂತಾ ಆದೇಶಿಸಿದ್ದಾರೆ. ಇದು ಅವೈಜ್ಞಾಕ ಹಾಗೂ ತಲೆ ಇಲ್ಲದ ತೀರ್ಮಾನ. ಮುಖ್ಯಮಂತ್ರಿ ಭೇಟಿ ಮಾಡಿ ನೀರು ನಿಲ್ಲಿಸುವಂತೆ ಮನವಿ ಮಾಡುತ್ತೇವೆ. ಐಸಿಸಿ ಮೀಟಿಂಗ್ ನಂತರ ನೀರು ಬಿಡುವಂತೆ ಆಗ್ರಹಿಸುತ್ತೇವೆ. ಸಭೆ ನಿರ್ಣಯದಂತೆ ನೀರು ಬಿಡಬೇಕು. ನೀರು ನಿಲ್ಲಿಸದೆ ಇದ್ದರೆ ರಾಜೀನಾಮೆ ಕೊಡುವುದಾಗಿ ಎಚ್ಚರಿಕೆ ನೀಡಿದರು.
ಸರ್ಕಾರ ತಾರತಮ್ಯ ಮಾಡುತ್ತಿದೆ. ಕಾಂಗ್ರೆಸ್ ಸರ್ಕಾರಾ ಅಂತಾ ಸುಮ್ಮನೆ ಇರಬೇಕಾ? ನಾವು ಯಾಕೆ ಅಧಿಕಾರದಲ್ಲಿ ಇರಬೇಕು? ನಮಗೆ ಅನ್ಯಾಯ ಆದ್ರೆ ಸುಮ್ಮನೆ ಇರಬೇಕಾ? ಎಂದು ಪ್ರಶ್ನಿಸಿದ ಶಾಂತನಗೌಡ, ಯಾರು ಒತ್ತಡ ಹಾಗೂ ಯಾವ ಉದ್ದೇಶಕ್ಕೆ ಆದೇಶ ಮಾಡಿದ್ದರೋ ಗೊತ್ತಿಲ್ಲ .ಇದು ಸರಿಯಾದ ಆದೇಶ ಅಲ್ಲ. ನಾನು ರೈತನೇ ನನ್ನದು ತೋಟ ಒಣಗುತ್ತಿದೆ. ರೈತರ ಪರವಾಗಿ ರಾಜೀನಾಮೆ ಕೊಡಲು ಸಿದ್ದನಿದ್ದೇನೆ. ರಾಜೀನಾಮೆ ಕೊಟ್ಟು ನೀರು ನಿಲ್ಲಿಸುವಂತೆ ಹಾಗೂ ಐಸಿಸಿ ಸಭೆ ಕರೆಯುವಂತೆ ಮುಖ್ಯಮಂತ್ರಿಗೆ ಹೇಳುವೆ. ನಿಲ್ಲಿಸಿದರೆ ಸರಿ, ಇಲ್ಲ ಅಂದ್ರೆ ನನ್ನ ರಾಜೀನಾಮೆ ವಾಪಾಸ್ ಪಡೆಯಲ್ಲ . ಅಪ್ಪರ್ ಭದ್ರಗೆ ನೀರು ಬಿಟ್ಟಿದ್ರು ಬೇಸಿಗೆ ಬೆಳೆಗೆ ನೀರು ಸಿಗುತ್ತೆ ಅಂತಾ ನಮ್ಮ ರೈತರು ಸಿಮ್ಮನಿದ್ರೂ. ಆದ್ರೆ ಸರ್ಕಾರ ಅವೈಜ್ಞಾನಿಕ ತೀರ್ಮಾನ ತೆಗೆದುಕೊಂಡಿದೆ. ಇದು ಸರಿಯಾದ ತೀರ್ಮಾನ ಅಲ್ಲ ಎಂದು ಸ್ವ ಪಕ್ಷದ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.




