Latest

ಭಗವದ್ಗೀತಾ ಜಯಂತಿ ನಾಳೆ

ಪ್ರಗತಿವಾಹಿನಿ ಸುದ್ದಿ, ಧಾರವಾಡ:

ಶ್ರೀ ಸೋಂದಾ ಸ್ವರ್ಣವಲ್ಲೀಮಹಾಸಂಸ್ಥಾನ,ಶ್ರೀ ಸರ್ವ್ಞಜ್ನೇoದ್ರ ಪ್ರತಿಷ್ಠಾನ ಹಾಗೂ ಧಾರವಾಡ ತಾಲೂಕ ಭಗವದ್ಗೀತಾ ಅಭಿಯಾನ ಸಮಿತಿ ಆಶ್ರಯದಲ್ಲಿ ದಿಶಂಬರ್೧೪ ರಂದು ಬೆಳಿಗ್ಗೆ ೯.೩೦ ಗಂಟೆಗೆ ಹಳಿಯಾಳ ರಸ್ತೆ ಶಿವಾಲಯದಲ್ಲಿ ಭಗವದ್ಗೀತಾ ಜಯಂತಿ ಆಚರಣೆ ಕಾರ್ಯಕ್ರಮ ಆಯೋಜಿಸಲಾಗಿದೆ.

ನಗರದ ಸದ್ಭಕ್ತರು ಭಗವದ್ಗೀತೆಯ ೧೮ ಅಧ್ಯಾಯಗಳ ಅಖಂಡ ಪಾರಾಯಣ ನಡೆಸಿ ಕೊಡುವರು.

ಆರ್ಷ ವಿದ್ಯಾಲಯದ ಸ್ವಾತ್ಮನಿಷ್ಠಾನಂದ ಸ್ವಾಮಿನಿಯವರು ಕಾರ್ಯಕ್ರಮವನ್ನು ಉದ್ಘಾಟಸಲಿದ್ದಾರೆ. ಕಳೆದ ಒಂದು ತಿಂಗಳಿಂದ ಹುಬ್ಬಳ್ಳಿಯ ೬೦ ಹಾಗೂ ಧಾರವಾಡದ ೮೦ ಮಹಿಳಾ ಮಂಡಳ,ದೇವಸ್ಥಾನ,೨೦ ಶಾಲೆ ಹಾಗೂ ೨೦ ಆನ್ಲೈನ್ ಕೇಂದ್ರಗಳಲ್ಲಿ ಭಗವದ್ಗೀತಾ ೩ ನೆ ಅಧ್ಯಾಯದ ಪಠಣ ನಿತ್ಯ ನಡೆಯುತ್ತಿದೆ.ಇವರೆಲ್ಲ ಸೇರಿ ಗೀತಾ ಜಯಂತಿ ದಿನ ಸಮಗ್ರ ಗೀತಾ ಪಠಣ ಮಾಡುವರೆಂದು ಸಮಿತಿಯ ಸಂಚಾಲಕರಾದ ಆರ್. ಡಿ.ಕುಲ್ಕರ್ಣಿ ಹಾಗೂ ಜಿ .ಕೆ.ಹೆಗಡೆ ತಿಳಿಸಿದ್ದಾರೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button