Politics

*ಸುಸಂಸ್ಕೃತ ಹೆಣ್ಣುಮಕ್ಕಳು ಆಡುವ ಭಾಷೆನಾ ಇದು? ಶೋಭಾ ಕರಂದ್ಲಾಜೆಗೆ ತಿರುಗೇಟು ನೀಡಿದ ಸಚಿವ ಭೈರತಿ ಸುರೇಶ್*

ಪ್ರಗತಿವಾಹಿನಿ ಸುದ್ದಿ: ದಮ್ಮು, ತಾಕತ್ತು ಇದ್ದರೆ ಸಚಿವ ಭೈರತಿ ಸುರೇಶ್ ನನ್ನ ವಿರುದ್ಧ ದಾಖಲೆ ಬಿಡುಗಡೆ ಮಾಡಲಿ ಎಂದು ಸವಾಲೆಸೆದಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆಗೆ ಸಚಿವ ಭೈರತಿ ಸುರೇಶ್ ತಿರುಗೇಟು ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಭೈರತಿ ಸುರೇಶ್, ಶೋಭಾ ಕರಂದ್ಲಾಜೆ ಮಾತುಗಳನ್ನು ಕೇಳಿದ್ದೇನೆ. ನಮ್ಮ ಸಂಸ್ಕೃತಿಯ ಹೆಣ್ಣುಮಕ್ಕಳು ಮಾತನಾಡುವ ಭಾಷೆನಾ? ಎಂದು ಕಿಡಿಕಾರಿದ್ದಾರೆ.

ತಾಕತ್ತು, ದಮ್ಮು…ಎಂತೆಲ್ಲಾ ಮಾತನಾಡುವುದು ಸುಸಂಸ್ಕೃತ ಹೆಣ್ಣುಮಕ್ಕಳು ಆಡುವ ಮಾತಲ್ಲ. ಯಾರಾದರೂ ಈ ರೀತಿ ಮಾತನಾಡುತ್ತಾರಾ? ನಮ್ಮ ದೇಶದ ಸುಸಂಸ್ಕೃತ ಹೆಣ್ಣುಮಕ್ಕಳು ಯಾವತ್ತೂ ಇಂತಹ ಮಾತುಗಳನ್ನು ಆಡಲ್ಲ. ನಾವು ಹೆಣ್ಣುಮಕ್ಕಳನ್ನು ಭಾರತ ಮಾತೆ, ಕ್ಷಮಯಾಧರಿತ್ರಿ ಎಂದು ಗೌರವಿಸುತ್ತೇವೆ. ಆದರೆ ಶೋಭಾ ಕರಂದ್ಲಾಜೆ ಆಡಿರುವ ದಮ್ಮು, ತಾಕತ್ತು ಎಂಬ ಮಾತುಗಳು ಹೆಣ್ಣುಮಕ್ಕಳು ಮಾತನಾಡುವ ಭಾಷೆ ಇದಲ್ಲ. ನಮ್ಮ ಹೆಣ್ಣುಮಕ್ಕಳು ಮಾತನಾಡುವ ಭಾಷೆ ಬೇರೆಯೇ ಇದೆ ಎಂದಿದ್ದಾರೆ.

ಇದೇ ವೇಳೆ ಶೋಭಾ ಕರಂದ್ಲಾಜೆ ವಿರುದ್ಧ ದಾಖಲೆಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡುತ್ತೇನೆ ಎಂದಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button