ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ 10ಕ್ಕೂ ಹೆಚ್ಚು ಕಾರ್ಮಿಕ ಸಂಘಟನೆಗಳು ಜ.8ರಂದು ಭಾರತ್ ಬಂದ್ ಗೆ ಕರೆ ನೀಡಿದೆ.
ರಾಷ್ಟ್ರವ್ಯಾಪಿ ಸಮಾನ ಕನಿಷ್ಟ ವೇತನಕ್ಕೆ ಆಗ್ರಹ, ಖಾಸಗೀಕರಣ ನೀತಿಗೆ ವಿರೋಧ, ಕಾರ್ಮಿಕ ಕಾನೂನು ಕಟ್ಟುನಿಟ್ಟಾಗಿ ಜಾರಿ, ಸಾಮಾಜಿಕ ಭಾದ್ರತೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬುಧವಾರ ಎಐಟಿಯುಸಿ, ಎಚ್‍ಎಂಎಸ್, ಸಿಐಟಿಯು, ಎಐಯುಟಿಯುಸಿ, ಎಸ್‍ಇಡಬ್ಲ್ಯುಎ, ಎಐಸಿಸಿಟಿಯು, ಎಲ್‍ಪಿಎಫ್ ಮತ್ತು ಯುಟಿಯುಸಿ ಸಂಘಟನೆಗಳು ದೇಶಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿವೆ.
ಕಾರ್ಮಿಕ ಸಂಘಟನೆಗಳು ಹಲವುಭಾರಿ ದನಿ ಎತ್ತಿದ್ದರೂ, ಸರ್ಕಾರ ಸಮಸ್ಯೆ ಪರಿಹರಿಸಲು ಮುಂದಾಗಿಲ್ಲ ಈ ಹಿನ್ನಲೆಯಲ್ಲಿ ಮುಷ್ಕರ ಅನಿವಾರ್ಯ ಎಂದು ಸಂಘಟಾನೆಗಳು ತಿಳಿಸಿವೆ.
ಪ್ರಮುಖ ಬೇಡಿಕೆಗಳು:
* 21 ಸಾವಿರ ರೂಪಾಯಿ ರಾಷ್ಟ್ರವ್ಯಾಪಿ ಸಮಾನ ಕನಿಷ್ಟ ವೇತನಕ್ಕೆ ಆಗ್ರಹ.
* ಕೇಂದ್ರ ಸರ್ಕಾರ ದ ಖಾಸಗೀಕರಣ ನೀತಿಗೆ ವಿರೋಧ.
* ಕಾರ್ಮಿಕ ಕಾನೂನು ಕಟ್ಟುನಿಟ್ಟಿನ ಜಾರಿಗಾಗಿ ಜಿಲ್ಲೆಗಳಲ್ಲಿ ಕಾರ್ಮಿಕ ನ್ಯಾಯಾಲಯ ಸ್ಥಾಪನೆ.
* ಮಾಸಿಕ ಪಿಂಚಣಿ 10 ಸಾವಿರ ರೂಪಾಯಿಗಾಗಿ ಬೇಡಿಕೆ.
* ಬೆಲೆಯೇರಿಕೆ ನಿಯಂತ್ರಣಕ್ಕೆ ಆಗ್ರಹಿಸಿ, ಸಾರ್ವತ್ರಿಕ ಪಡಿತರ ವ್ಯವಸ್ಥೆಗಾಗಿ.
* ಆರ್ಥಿಕ ಹಿಂಜರಿತಕ್ಕೆ ಕಾರಣವಾಗಿರುವ ನೀತಿಗಳ ವಿರುದ್ಧ ಉದ್ಯೋಗ ಕಳಕೊಂಡ ಕಾರ್ಮಿಕರಿಗೆ ಉದ್ಯೋಗ ಸೃಷ್ಟಿ ಮಾಡಬೇಕು.
* ಕಟ್ಟಡ ಕಾರ್ಮಿಕರು, ಆಟೋ ಚಾಲಕರು, ಬೀದಿಬದಿಯ ವ್ಯಾಪಾರಸ್ಥರು, ಮನೆ ಕೆಲಸಗಾರರು, ಅಸಂಘಟಿತ ಕಾರ್ಮಿಕರಿಗೆ ಭವಿಷ್ಯ ನಿಧಿ ಸ್ಥಾಪನೆ, ಕಲ್ಯಾಣ ಯೋಜನೆಗೆ ಅನುದಾನ
* ರೈತರ ಬೆಳೆಗಳಿಗೆ ನ್ಯಾಯಯುತ ಬೆಲೆಗಾಗಿ ಡಾ| ಸ್ವಾಮಿನಾಥನ್ ವರದಿ ಜಾರಿ, ಸಾಲ ಮನ್ನಾಕ್ಕಾಗಿ ಆಗ್ರಹ, ಗ್ರಾಮೀಣ ಉದ್ಯೋಗ ಖಾತ್ರಿ ಬಲಪಡಿಸಲು ಆಗ್ರಹ
ಈ ನಡುವೆ ಜ.8ರಂದು ಭಾರತ್ ಬಂದ್ ಮುಷ್ಕರಕ್ಕೆ ರಾಜಧಾನಿ ಬೆಂಗಳೂರಿನಲ್ಲಿ ಅನುಮತಿಯಿಲ್ಲ. ಮುಷ್ಕರದ ಹೆಸರಲ್ಲಿ ಮೆರವಣಿಗೆ ನಡೆಸಿ ಸಾರ್ವಜನಿಕರಿಗೆ ತೊಂದರೆ ಉಂಟಾದರೆ ಆಯೋಜಕರ ವಿರುದ್ಧ 107 ಸೆಕ್ಷನ್ ಆಡಿ ಕೇಸ್ ದಾಖಲಿಸಲಾಗುವುದು ಎಂದು ನಗರ ಪೊಲಿಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ