ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ನಾಳೆ ನಡೆಸುತ್ತಿರುವ ಭಾರತ್ ಬಂದ್ ಯಶಸ್ವಿಗೊಳಿಸಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರು ಬೆಂಬಲ ನೀಡಲಿ, ನೀಡದಿರಲಿ, ನಮ್ಮ ಹೋರಾಟ ನಡೆಯುವುದು ನಿಶ್ಚಿತ. ನಾಳಿನ ಬಂದ್ ಯಶ್ವಿಗೊಳಿಸುತ್ತೇವೆ. ಎಲ್ಲಾ ರೈತ ಸಂಘಟನೆಗಳು ಬೆಂಬಲ ನೀಡಿವೆ. ರೈತರ ನೇತೃತ್ವದಲ್ಲಿಯೇ ಪ್ರತಿಭಟನಾ ಮೆರವಣಿಗೆ ನಡೆಯಲಿದೆ ಎಂದರು.
ಇನ್ನು ಕೆಲ ಸಂಘಟನೆಗಳ ನೈತಿಕ ಬೆಂಬಲ ವಿಚಾರವಾಗಿಯೂ ಮಾತನಾಡಿದ ಅವರು ನೈತಿಕ ಬೆಂಬಲ ಕೊಟ್ಟರೆಷ್ಟು, ಬಿಟ್ಟರೆಷ್ಟು? ರೈತರ ಹೋರಾಟಕ್ಕೆ ಬೆಂಬಲ ನೀಡದವರು ಸರ್ಕಾರದ ಪರ ಇರುವವರು. ನಾಳಿನ ಪ್ರತಿಭಟನೆಯಲ್ಲಿ ಸುವಾರು 8-10 ಸಾವಿರ ರೈತರು ಭಾಗವಹಿಸಲಿದ್ದಾರೆ. ಬಂದ್ ಗೆ ಬಹುತೇಕ ಸಂಘಟನೆಗಳು ಬೆಂಬಲ ನೀಡಿವೆ. ಬಂದ್ ಯಶಸ್ವಿಯಾಗಲಿದೆ ಎಂದು ಹೇಳಿದರು.
ಪ್ರತಿಭಟನೆ ಹೆಸರಲ್ಲಿ ತೊಂದರೆ ಬೇಡ; ರೈತ ಮುಖಂಡರಿಗೆ ಸಿಎಂ ಮನವಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ