Latest

ಕರ್ನಾಟಕದಲ್ಲಿ ಸ್ವಚ್ಛ ನಾಯಕತ್ವದ ಕೊರತೆಯಿದೆ; AAP ಸೇರಿದ ಭಾಸ್ಕರ್ ರಾವ್ ಕಳವಳ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಕರ್ನಾಟಕದಲ್ಲಿ ಎಲ್ಲಾ ರೀತಿಯ ಸಂಪನ್ಮೂಲಗಳು ಇವೆ. ಆದರೆ ಸ್ವಚ್ಛ ನಾಯಕತ್ವದ ಕೊರತೆಯಿದೆ ಎಂದು ಆಮ್ ಆದ್ಮಿ ಪಕ್ಷ ಸೇರ್ಪಡೆಯಾದ ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಕಳವಳ ವ್ಯಕ್ತಪಡಿಸಿದ್ದಾರೆ.

ನವದೆಹಲಿಯಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸಮ್ಮುಖದಲ್ಲಿ ಆಪ್ ಪಕ್ಷ ಸೇರ್ಪಡೆ ಬಳಿಕ ಮಾತನಾಡಿದ ಭಾಸ್ಕರ್ ರಾವ್, ಕರ್ನಾಟಕದಲ್ಲಿ ರಾಜ್ಯದ ಜನತೆ ಮೂರು ಪಕ್ಷಗಳ ಬಗ್ಗೆ ಬೇಸರಗೊಂದಿದ್ದಾರೆ. ಮೂರು ಪಕ್ಷಗಳು ಅಂದರ್ ಬಾಹರ್ ಆಡುತ್ತಿವೆ. ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಸ್ವಚ್ಛ ನಾಯಕತ್ವದ ಕೊರತೆಯಿದೆ. ದೆಹಲಿ, ಪಂಜಾಬ್ ರೀತಿ ಕರ್ನಾಟಕದಲ್ಲಿಯೂ ಬದಲಾವಣೆಯಾಗಬೇಕಿದೆ ಎಂದು ಹೇಳಿದರು.

ಆಮ್ ಆದ್ಮಿ ಪಕ್ಷದ ಬಗ್ಗೆ ದಕ್ಶಿಣದ ರಾಜ್ಯಗಳಲ್ಲಿ ಚರ್ಚೆಯಾಗುತ್ತಿದೆ. ದೇಶದೆಲ್ಲೆಡೆ ಆಮ್ ಆದ್ಮಿ ಪಕ್ಷದ ಸಾಧನೆ ಬಗ್ಗೆ ಶ್ಲಾಘನೆ ವ್ಯಕ್ತವಾಗಿದೆ. ಅರವಿಂದ್ ಕೇಜ್ರಿವಾಲ್ ಬಗ್ಗೆ ವಿದೇಶಗಳಲ್ಲಿಯೂ ಮೆಚ್ಚುಗೆ ವ್ಯಕ್ತವಾಗುತ್ತಿದೆ ಎಂದು ಹೇಳಿದರು.

ಕೇಜ್ರಿವಾಲ್ ಸಮ್ಮುಖದಲ್ಲಿ ಆಮ್ ಆದ್ಮಿ ಪಕ್ಷ ಸೇರಿದ ಭಾಸ್ಕರ್ ರಾವ್

Home add -Advt

Related Articles

Back to top button