ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ ಮಹಾಂತೇಶ ನಗರದ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಜಿ+೧ ಕೊಠಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಮಹಾಂತೇಶ ನಗರದ ಕನ್ನಡ ಹಿರಿಯ ಪ್ರಾಥಮಿಕ ಶಾಲೆಗೆ ವಂಟಮೂರಿ ಕಾಲೊನಿ ಹಾಗೂ ಶ್ರೀನಗರದ ಸುತ್ತಮುತ್ತಲಿನ ಪ್ರದೇಶದ ಮಕ್ಕಳು ಬರುವುದರಿಂದ ಮತ್ತು ಮಾದರಿ ಶಾಲೆಯಂತಿರುವ ಮಹಾಂತೇಶ ನಗರದ ಈ ಶಾಲೆಗೆ ಹಿಂದಿನ ವರ್ಷವೂ ಶಾಲಾ ಕೊಠಡಿಗಳನ್ನು ನಿರ್ಮಾಣ ಮಾಡಲಾಗಿದೆ. ಈ ವರ್ಷವೂ ಜಿ+೧ನಂತೆ ೨ ಕೊಠಡಿಗಳ ನಿರ್ಮಾಣವನ್ನು ೩೧ ಲಕ್ಷ ರೂ. ಅನುದಾನದಲ್ಲಿ ನಿರ್ಮಾಣವನ್ನು ಮಾಡಲು ಭೂಮಿ ಪೂಜೆಯನ್ನು ಸಲ್ಲಿಸಲಾಗಿದೆ ಹಾಗೂ ಮುಂದಿನ ದಿನಗಳಲ್ಲಿ ಶಾಲೆಗಳ ಅಭಿವೃದ್ಧಿಗಾಗಿ ಶ್ರಮಿಸಲಾಗುವುದು ಎಂದರು.
ಗುಣಮಟ್ಟ ಕಾಪಾಡಿಕೊಂಡು ಕೊಠಡಿಗಳನ್ನು ನಿರ್ಮಾಣ ಮಾಡಬೇಕೆಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕ ಅನಿಲ ಬೆನಕೆ, ಜಿಲ್ಲಾ ಪಂಚಾಯತ ಸಹಾಯಕ ಅಭಿಯಂತರ ಬ್ರಹ್ಮಾನಂದ ದೇಸಾಯಿ, ಮಹಾನಗರ ಪಾಲಿಕೆ ಮಾಜಿ ಸದಸ್ಯೆ ಪುಷ್ಪಾ ಪರ್ವತರಾವ್, ಈರಯ್ಯ ಖೋತ, ಮಹಾಲಿಂಗ ತಂಗಡಗಿ, ರಾಜಶೇಖರ ಡೋನಿ, ದಿಗ್ವಿಜಯ ಸಿದ್ನಾಳ, ಕಿರಣ ತುಬಕಿ, ಹಣಮಂತ ಕಾಗಲಕರ, ಶಾಲಾ ಮುಖ್ಯೋಪಾಧ್ಯಾಯರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ