ಪ್ರಗತಿವಾಹಿನಿ ಸುದ್ದಿ, ಅಯೋಧ್ಯೆ – ಬಹುದೀರ್ಘಕಾಲದ ಕನಸು ರಾಮಜನ್ಮಭೂಮಿಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಸಕಲವೂ ಸಜ್ಜಾಗಿದ್ದು, ಕೆಲವೇ ಕ್ಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ನೆರವೇರಿಸಲಿದ್ದಾರೆ.
ಈಗಾಗಲೆ ಅಯೋಧ್ಯೆ ತಲುಪಿರುವ ಮೋದಿ ರಾಮಲಲ್ಲಾ ದರ್ಶನ ಪಡೆದು ಪಾರಿಜಾತದ ಗಿಡ ನೆಟ್ಟಿದ್ದಾರೆ. ಇನ್ನೇನು ಕೆಲವೇ ಕ್ಷಣದಲ್ಲಿ ಬೃಹತ್ ಬೆಳ್ಳಿ ಇಟ್ಟಿಗೆ ಇಟ್ಟು ಪೂಜೆ ಸಲ್ಲಿಸುವ ಮೂಲಕ ಶಿಲಾನ್ಯಾಸ ನೆರವೇರಿಸಲಿದ್ದಾರೆ.
ಭೂಮಿ ಪೂಜೆಗೆ ಬಳಸುವ 9 ಶಿಲೆಗಳ ಪೂಜೆ ಆರಂಭವಾಗಿದ್ದು, ರಾಮ ಭಕ್ತರಿಂದ ಸಂಗ್ರಹಿಸಿದ ಲಕ್ಷಗಟ್ಟಲೆ ಇಟ್ಟಿಗೆಗಳಲ್ಲಿ ಜೈ ಶ್ರೀರಾಮ ಎಂದು ಬರೆದಿರುವ 9 ಪವಿತ್ರ ಶಿಲೆಗಳು ಇವಾಗಿವೆ.
ಇಡೀ ವಿಶ್ವವೇ ಈ ಕ್ಷಣಕ್ಕಾಗಿ ಕಾಯುತ್ತಿದ್ದು, ಎಲ್ಲೆಡೆ ಸಂಭ್ರಮ ನಿರ್ಮಾಣವಾಗಿದೆ.
ಈ ಲಿಂಕ್ ಒತ್ತಿ, ಪ್ರಧಾನಿ ಕಾರ್ಯಕ್ರಮದ ಲೈವ್ ಅಪ್ ಡೇಟ್ ನೋಡಿ (ಕೃಪೆ – ANI)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ