ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸ್ಥಳೀಯ ಆಸರೆ ಫೌಂಡೇಶನ್ ವತಿಯಿಂದ ಕೆ ಕೆ ಕೊಪ್ಪ ಗ್ರಾಮದ ಧರ್ಮಾಪುರದಲ್ಲಿ ನೂತನ ಗೋಶಾಲೆ ನಿರ್ಮಾಣಕ್ಕೆ ಇಂದು ಗುದ್ದಲಿ ಪೂಜೆ ನೆರವೇರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಸಂಸದೆ ಮಂಗಲಾ ಸುರೇಶ ಅಂಗಡಿ ಅವರು ‘ಗೋವುಗಳ ರಕ್ಷಣೆ ಹಾಗೂ ಅವುಗಳ ಪಾಲನೆ ಮಾಡುವುದು ಬಹಳ ಪುಣ್ಯದ ಕೆಲಸ. ಅಂತಹ ಕೆಲಸವನ್ನು ಮಾಡುತ್ತಿರುವ ಆಸರೆ ಫೌಂಡೇಶನ್ ಕಾರ್ಯ ಶ್ಲಾಘನೀಯ. ಈ ಕಾರ್ಯಕ್ಕೆ ಬೇಕಾದ ಸಹಾಯ ಸಹಕಾರವನ್ನು ತಾವು ಬದಗಿಸಲು ಸದಾ ಸಿದ್ಧ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಚಲನ ಚಿತ್ರ ನಟ ಹಾಗೂ ನಿರ್ಮಾಪಕ ಅಕ್ಷಯ್ ಚಂದ್ರಶೇಖರ್ ಮಾತನಾಡಿ, ಮುಂಬರುವ ದಿನಗಳಲ್ಲಿ ಗೋಶಾಲೆಯ ಬೆಳವಣಿಗೆ ತಾವು ಎಲ್ಲಾ ರೀತಿಯ ಸಹಾಯ ಮಾಡುವುದಾಗಿ ತಿಳಿಸಿ ಆಸರೆ ಫೌಂಡೇಶನ್ ಈ ಕಾರ್ಯ ಸಮಾಜಕ್ಕೆ ಮಾದರಿ ಆಗಲಿ ಎಂದು ಹಾರೈಸಿದರು.
ಸರ್ಕಾರದಿಂದ ಇಂತಹ ಗೋಶಾಲೆಗಳ ಅಭಿವೃದ್ಧಿಗಾಗಿ ಅನೇಕ ಯೋಜನೆಗಳು ಹಾಗೂ ಸಹಾಯಧನ ದೊರೆಯುತ್ತದೆ. ಅದರ ಸದುಪಯೋಗವನ್ನು ಆಸರೆ ಸಂಸ್ಥೆ ಪಡೆದು ಈ ಗೋಶಾಲೆಯನ್ನು ಆಧುನಿಕ ರೀತಿಯಲ್ಲಿ ಸಜ್ಜುಗೊಳಿಸಲು ಪಶು ಆರೋಗ್ಯ ವೈದ್ಯಾಧಿಕಾರಿಗಳು ಸಲಹೆ ನೀಡಿದರು.
ಆಸರೆ ಫೌಂಡೇಷನ್ ಅಧ್ಯಕ್ಷ ಆಕಾಶ್ ಚಂದ್ರಶೇಖರ್ ಅವರು ಸ್ವಾಗತಿಸಿ ಮಾತನಾಡಿ, ಆಸರೆ ಫೌಂಡೇಶನ್ ಉದ್ದೇಶಗಳು, ಗೋವಿನ ಮಹತ್ವ ಹಾಗೂ ಗೋಶಾಲೆಯ ಬಗ್ಗೆ ಮಾಹಿತಿ ನೀಡಿದರು.
ಉಪಾಧ್ಯಕ್ಷ ರಾಜೇಂದ್ರ ಪಾಟೀಲ್ ಪ್ರಾಸ್ತಾವಿಕ ಮಾತನಾಡಿದರು. ಗ್ರಾಮ ಪಂಚಾಯಿತಿ ಸದಸ್ಯ ಸುರೇಶ ಕಂಬಿ ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.
ಗಾಯಕ ಸಂಗೀತ ನಿರ್ದೇಶಕ ಗಗನದೀಪ ಪ್ರಾರ್ಥಿಸಿದರು. ಮುಕ್ತಿ ಮಠದ ಸ್ವಾಮೀಜಿಗಳು ಆಶೀರ್ವದಿಸಿದರು. ಸಾಹಿತಿ ಆಶಾ ಯಮಕನಮರಡಿ ನಿರೂಪಿಸಿದರು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಣೆ
https://pragati.taskdun.com/distribution-of-laptops-to-students-in-visvesvaraya-technical-university/
ಮಹಿಳೆ ಈಗ ಸರ್ವ ಕ್ಷೇತ್ರಗಳಲ್ಲೂ ಸಬಲೆ: ಸಚಿವೆ ಶಶಿಕಲಾ ಜೊಲ್ಲೆ
https://pragati.taskdun.com/women-are-now-strong-in-all-fields-minister-shashikala-jolla/
ಕೇಂದ್ರೀಯ ಪರೀಕ್ಷೆಗಳು ಕನ್ನಡದಲ್ಲಿಯೇ ನಡೆಯಲಿ: ಕೇಂದ್ರ ಸರ್ಕಾರಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಮನವಿ
https://pragati.taskdun.com/central-exams-should-be-held-in-kannada-mla-balachandra-jarakiholi-appeals-to-the-central-government/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ