Kannada NewsLatest

ಇಂದಿನಿಂದ ‘ಬಿಚ್ಚಿದ ಜೋಳಿಗೆ’ ತಿರುಗಾಟ…

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪ್ರಭಾಕರ ಜೋಶಿ ಅವರ ನೇತೃತ್ವದ
ಕಲಬುರಗಿ ರಂಗಾಯಣ ಪ್ರಸ್ತುತಪಡಿಸುವ ಡಾ.ಸ.ಜ.ನಾಗಲೋಟಿಮಠ ಅವರ ‘ಬಿಚ್ಚಿದ ಜೋಳಿಗೆ’ ನಾಟಕದ ತಿರುಗಾಟ ಇಂದಿನಿಂದ ಆರಂಭವಾಗಲಿದೆ.

‘ಬಿಚ್ಚಿದ ಜೋಳಿಗೆ’ ಆತ್ಮಕಥೆಯನ್ನು ಪ್ರಭಾಕರ ಜೋಶಿ ಅವರು ನಾಟಕವಾಗಿಸಿದ್ದು, ಜಗದೀಶ್ ಆರ್.ಜಾಣಿ ನಿರ್ದೇಶಿಸಿದ್ದಾರೆ. ಈಗಾಗಲೇ ಎಂಟು ಪ್ರದರ್ಶನಗಳನ್ನು ಕಲಬುರಗಿಯಲ್ಲಿ ಪೂರೈಸಿದ್ದು ಇಂದು ಸಾಣೇಹಳ್ಳಿಯಲ್ಲಿ ಪ್ರದರ್ಶನಗೊಳ್ಳಲಿದೆ. ಜೊತೆಗೆ ನಾಟಕದ ಕೃತಿಯೂ ಬಿಡುಗಡೆಗೊಳ್ಳಲಿದೆ.

ಪ್ರದರ್ಶನಗಳ ಊರುಗಳ ವಿವರ ಇಂತಿದೆ:
ನವೆಂಬರ್ 4- ಸಾಣೇಹಳ್ಳಿ
ನವೆಂಬರ್ 5 – ಹೊಸಪೇಟೆ
ನವೆಂಬರ್ 6- ಬಾಗಲಕೋಟೆ
ನವೆಂಬರ್ 7- ಅಮೀನಗಡ
ನವೆಂಬರ್ 8- ಗಜೇಂದ್ರಗಡ
ನವೆಂಬರ್ 9, 10- ಹುನಗುಂದ
ನವೆಂಬರ್ 11- ಇಲಕಲ್ಲ
ನವೆಂಬರ್ 12, 13- ವಿಜಯಪುರ
ನವೆಂಬರ್ 14- ಹುಬ್ಬಳ್ಳಿ
ನವೆಂಬರ್ 15,16- ಧಾರವಾಡ
ನವೆಂಬರ್ 17- ಲಕ್ಷ್ಮೇಶ್ವರ
ನವೆಂಬರ್ 18- ಮುಳಗುಂದ
ನವೆಂಬರ್ 20- ಗದಗ
ನವೆಂಬರ್ 21,22- ಶಿವಮೊಗ್ಗ
ನವೆಂಬರ್ 23- ತೀರ್ಥಹಳ್ಳಿ- ಸಿರಿ ಪುರಂದರ ನಾಟಕ
ನವೆಂಬರ್ 24, 25- ಹೆಗ್ಗೋಡು
ನವೆಂಬರ್ 26- ಬೆಳಗಾವಿ

ಮೂರು ದಿನಗಳಿಂದ ತಹಸೀಲ್ದಾರ್ ನಾಪತ್ತೆ; ದೂರು ದಾಖಲು

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button